ADVERTISEMENT

ಕೊರೊನಾ: 265 ಸೋಂಕಿತರು ಗುಣಮುಖ

​ಪ್ರಜಾವಾಣಿ ವಾರ್ತೆ
Published 9 ಅಕ್ಟೋಬರ್ 2020, 16:06 IST
Last Updated 9 ಅಕ್ಟೋಬರ್ 2020, 16:06 IST

ಶಿವಮೊಗ್ಗ:ಜಿಲ್ಲೆಯಲ್ಲಿ ಶುಕ್ರವಾರ 265ಕೊರೊನಾ ಸೋಂಕಿತರು ಗುಣಮುಖರಾಗಿದ್ದಾರೆ.170 ಮಂದಿಗೆ ಸೋಂಕು ದೃಢಪಟ್ಟಿದ್ದಾರೆ.ಮೂವರುಮೃತಪಟ್ಟಿದ್ದಾರೆ.

ಒಂದೇ ದಿನ3,814 ಜನರ ಗಂಟಲಿನ ದ್ರವ ಪರೀಕ್ಷೆ ಮಾಡಲಾಗಿದೆ.2,869 ಜನರ ವರದಿ ನೆಗೆಟಿವ್ ಬಂದಿದೆ.ಮನೆಯಲ್ಲಿ 1,418 ಸೇರಿ ಒಟ್ಟು 1859 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ.ಇದುವರೆಗೆ ಕೋವಿಡ್‌-19ನಿಂದ ಮೃತಪಟ್ಟವರ ಸಂಖ್ಯೆ 315ಕ್ಕೆ ಏರಿದೆ. ಸೋಂಕಿತರ ಸಂಖ್ಯೆ 18,844ಕ್ಕೆ ತಲುಪಿದೆ.

ಶಿವಮೊಗ್ಗ ತಾಲ್ಲೂಕಿನಲ್ಲಿ58 ಸೋಂಕಿತರು ಪತ್ತೆಯಾಗಿದ್ದಾರೆ. ಭದ್ರಾವತಿಯಲ್ಲಿ 24, ಶಿಕಾರಿಪುರದಲ್ಲಿ 19, ತೀರ್ಥಹಳ್ಳಿಯಲ್ಲಿ 16, ಸೊರಬದಲ್ಲಿ 8, ಸಾಗರದಲ್ಲಿ 13, ಹೊಸನಗರದಲ್ಲಿ31 ಹಾಗೂ ಇತರೆ ಜಿಲ್ಲೆಗಳಿಂದ ಚಿಕಿತ್ಸೆಗೆ ಬಂದಿದ್ದಒಬ್ಬರಲ್ಲಿಸೋಂಕು ಖಚಿತಪಟ್ಟಿದೆ.

ADVERTISEMENT

13 ಜನರಿಗೆ ಪಾಸಿಟಿವ್ (ಸಾಗರ ವರದಿ):ತಾಲ್ಲೂಕಿನಲ್ಲಿ ಶುಕ್ರವಾರ 13 ಮಂದಿಗೆ ಕೊರೊನಾ ಸೋಂಕು ದೃಢಪಟ್ಟಿದೆ. ಗ್ರಾಮಾಂತರದಲ್ಲಿ9 ನಗರ ವ್ಯಾಪ್ತಿಯಲ್ಲಿ 4 ಪ್ರಕರಣ ದಾಖಲಾಗಿದೆ.ಶ್ರೀಧರ ನಗರ ಬಡಾವಣೆಯ 58 ವರ್ಷದ ಪುರುಷ ಕೊರೊನಾದಿಂದ ಮೃತಪಟ್ಟಿದ್ದು, ಸಾವಿನ ಸಂಖ್ಯೆ 31 ಕ್ಕೆ ಏರಿದೆ. ಒಟ್ಟು ಸೋಂಕಿತರ ಸಂಖ್ಯೆ 849.ಗುಣಮುಖರಾದವರು 596 ಮಂದಿ. 222 ಮಂದಿ ಚಿಕಿತ್ಸೆಪಡೆಯುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.