ADVERTISEMENT

ತ್ರಿಶತಕ ದಾಟಿದ ಜಿಲ್ಲೆಯ ಸೋಂಕಿತರ ಸಂಖ್ಯೆ

ಒಂದೇ ದಿನ 33 ಜನರಿಗೆ ಕೊರೊನಾ ಸೋಂಕು, 8 ಬಾಲಕಿಯರಲ್ಲಿ ವೈರಸ್‌ ಪತ್ತೆ

​ಪ್ರಜಾವಾಣಿ ವಾರ್ತೆ
Published 7 ಜುಲೈ 2020, 15:54 IST
Last Updated 7 ಜುಲೈ 2020, 15:54 IST

ಶಿವಮೊಗ್ಗ: ಜಿಲ್ಲೆಯಲ್ಲಿ ಮಂಗಳವಾರ ಒಂದೇ ದಿನ 33 ಜನರಿಗೆ ಸೋಂಕು ಇರುವುದು ದೃಢಪಟ್ಟಿದೆ. ಸೋಂಕಿತರ ಸಂಖ್ಯೆ 318ಕ್ಕೇರಿದೆ. ಒಂದೇ ದಿನ 8 ಬಾಲಕಿಯರಲ್ಲಿ ಸೋಂಕು ಕಂಡುಬಂದಿರುವುದು ಕಳವಳ ಮೂಡಿಸಿದೆ.

ಮೆಗ್ಗಾನ್‌ ಆಸ್ಪತ್ರೆಯ ಕೋವಿಡ್‌ ಆರೈಕೆ ಕೇಂದ್ರದಲ್ಲಿ ಚಿಕಿತ್ಸೆ ಪಡೆಯುತ್ತಿದ್ದ12 ಜನರು ಮಂಗಳವಾರ ಗುಣಮುಖರಾಗಿದ್ದು ಇದುವರೆಗೂ ಒಟ್ಟು 137 ಮಂದಿ ಗುಣಮುಖರಾಗಿದ್ದಾರೆ. 177 ಜನರು ಚಿಕಿತ್ಸೆ ಪಡೆಯುತ್ತಿದ್ದಾರೆ.

ಶಿವಮೊಗ್ಗ ನಗರ 18, ಹೊಸನಗರತಾಲ್ಲೂಕಿನ ರಿಪ್ಪನ್‌ಪೇಟೆ 4 ಶಿಕಾರಿಪುರ 8,ಶಿವಮೊಗ್ಗ ಗ್ರಾಮಾಂತರ, ಭದ್ರಾವತಿ, ಸಾಗರ ತಲಾ 1 ಪ್ರಕರಣಗಳು ಪತ್ತೆಯಾಗಿವೆ.

ADVERTISEMENT

ಒಬ್ಬರಿಂದ ನಾಲ್ವರಿಗೆ ಸೋಂಕು:

ಪಿ–9546 ರೋಗಿಯ ಪ್ರಥಮ ಸಂಪರ್ಕದಿಂದ 26 ವರ್ಷದ (ಪಿ–25766),30 ವರ್ಷದ ಮಹಿಳೆಯರಿಗೆ (ಪಿ–25768), ಪಿ–16647ರೋಗಿಯ ಸಂಪರ್ಕದಿಂದ23 ವರ್ಷದ ಮಹಿಳೆ (ಪಿ–25773),18 ವರ್ಷದ ಯುವತಿ (ಪಿ–25774), 38 ವರ್ಷದ ಮಹಿಳೆ (ಪಿ–25775), 44 ವರ್ಷದ ಮಹಿಳೆ (ಪಿ–25776) ಸೇರಿ ನಾಲ್ವರಿಗೆ ಸೋಂಕು ತಗುಲಿದೆ.

ಬೆಂಗಳೂರಿನಿಂದ ಬಂದ ಮೂವರಿಗೂ ವೈರಸ್‌:

ಬೆಂಗಳೂರಿನಿಂದ ಜಿಲ್ಲೆಗೆ ಬಂದಿದ್ದ 30ವರ್ಷ (ಪಿ–25767), 31 ವರ್ಷ (ಪಿ–25769) ಹಾಗೂ 49 ವರ್ಷದ ಪುರುಷರಿಗೆ (ಪಿ–25788) ಸೋಂಕು ಇರುವುದು ಖಚಿತವಾಗಿದೆ. ಮತ್ತೊಬ್ಬರು ಮಂಗಳೂರಿನಿಂದ ಶಿವಮೊಗ್ಗಕ್ಕೆ ಹಿಂದಿರುಗಿದ್ದ19 ವರ್ಷದ ಯುವಕನಿಗೆ (ಪಿ–25782)ಗಂಟಲು ದ್ರವ ಪರೀಕ್ಷೆಗೆ ಒಳಪಡಿಸಿದಾಗ ಸೋಂಕು ಇರುವುದು ಖಚಿತವಾಗಿದೆ.

21633ರೋಗಿಯ ಸಂಪರ್ಕದಿಂದ11 ತಿಂಗಳ ಬಾಲಕಿ (ಪಿ–25784),48 ವರ್ಷದ ಪುರುಷ (ಪಿ–25785), 60 ವರ್ಷದ ಪುರುಷ (ಪಿ–25786), 33 ವರ್ಷದ ಮಹಿಳೆಗೆ (ಪಿ–25787), ಪಿ–13225ರೋಗಿಯ ಸಂಪರ್ಕದಿಂದ 46 ವರ್ಷದ ಮಹಿಳೆಗೆ (ಪಿ–25779), 15 ವರ್ಷದಬಾಲಕಿಗೆ (ಪಿ–25780),ಪಿ–25770ರೋಗಿಯ ಸಂಪರ್ಕದಿಂದ26 ವರ್ಷದ ಮಹಿಳೆ (ಪಿ–25771)ಸೋಂಕು ತಗುಲಿದೆ.

ಪಿ–14383 ರೋಗಿಯ ಪ್ರಥಮ ಸಂಪರ್ಕದಿಂದ48 ವರ್ಷದ ಪುರುಷ (ಪಿ–25772),ಪಿ–16647ರೋಗಿಯ ಸಂಪರ್ಕದಿಂದ 25 ವರ್ಷದ ಯುವತಿಗೆ (ಪಿ–25781), ಪಿ–21628ರೋಗಿಯ ಸಂಪರ್ಕದಿಂದ 36 ವರ್ಷದ ಮಹಿಳೆ ಗೆ (ಪಿ–25798) ಸೋಂಕು ಹರಡಿದೆ.

ಒಬ್ಬರಿಂದ ಮೂವರು ಬಾಲಕಿಯರಿಗೆ ಸೋಂಕು:

ಪಿ–14389 ರೋಗಿಯಸಂಪರ್ಕದಿಂದ73 ವರ್ಷದ ಪುರುಷ (ಪಿ–25789),8 ವರ್ಷದ ಬಾಲಕಿ (ಪಿ–25790), 6 ವರ್ಷದ ಬಾಲಕಿ (ಪಿ–25791), 4 ವರ್ಷದ ಬಾಲಕಿಗೆ (ಪಿ–25792),

ತೀವ್ರತರ ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದ 66 ವರ್ಷದ ಪುರುಷ (ಪಿ–25770), 27 ವರ್ಷದಯುವಕ,(ಪಿ–25778),20 ವರ್ಷದ ಯುವಕ (ಪಿ–25797),43 ವರ್ಷದ ಪುರುಷರಲ್ಲೂ (ಪಿ–25783) ಸೋಂಕು ದೃಢಪಟ್ಟಿದೆ.

ಜಿಲ್ಲೆಯ ಐವರಿಗೆ ಸೋಂಕಿನ ಮೂಲವೇ ಪತ್ತೆಯಾಗಿಲ್ಲ.8 ವರ್ಷದ ಬಾಲಕಿ (ಪಿ–25793), 40 ವರ್ಷದ ಮಹಿಳೆ (ಪಿ–25794), 6 ವರ್ಷದ ಬಾಲಕಿ (ಪಿ–25795). 11 ವರ್ಷದ ಬಾಲಕಿ (ಪಿ–25796)ಯರಿಗೆ ಸೋಂಕು ಹೇಗೆ ತಗುಲಿದೆ ಎಂಬ ಮೂಲ ಪತ್ತೆ ಹಚ್ಚಲಾಗುತ್ತಿದೆ.

ವಿನೋಬನಗರದ ಹುಡ್ಕೊ ಕಾಲೊನಿ ನಿವಾಸಿಗೆಕೊರೊನಾ ಪಾಸಿಟಿವ್ಬಂದಿದೆ.ಬಸ್ ನಿಲ್ದಾಣದ ಬಳಿ ಇರುವಲೋಕೋಪಯೋಗಿ ಇಲಾಖೆವಸತಿಗೃಹದ ವ್ಯಕ್ತಿಯ ಸಂಪರ್ಕದಿಂದ ಅವರ ಕುಟುಂಬದವರಿಗೆಸೋಂಕು ತಗುಲಿದೆ.ರವಿವರ್ಮ ಬೀದಿಯ ಒಂದೇ ಕುಟುಂಬದ ನಾಲ್ವರಿಗೆ ಪಾಸಿಟಿವ್ ಕಾಣಿಸಿಕೊಂಡಿದೆ. ಅದೆ ಬಡಾವಣೆಯ ಮತ್ತೋಬ್ಬರಿಗೂಸೋಂಕು ಇರುವುದು ದೃಢಪಟ್ಟಿದೆ.

ದಕ್ಷಿಣಾ ಆಫ್ರಿಕಾದಿಂದ ಬಂದವರಿಗೆ ಪಾಸಿಟಿವ್‌:

ದಕ್ಷಿಣ ಆಫ್ರಿಕಾದಿಂದ ಬಂದಿದ್ದ ಸದಾಶಿವಪುರದ ಹಕ್ಕಿಪಿಕ್ಕಿ ಕ್ಯಾಂಪ್‌ನ27 ವರ್ಷದ ಪುರುಷ (ಪಿ–25777) ಸೋಂಕು ತಗುಲಿದೆ.ಜೂನ್ 20 ರಂದು ದಕ್ಷಿಣ ಆಫ್ರಿಕಾದ ಕೇಪ್‌ಟೌನ್‌ನಿಂದಬಂದಿದ್ದ ಈ ವ್ಯಕ್ತಿ ಹೈದರಾಬಾದ್‌ನಲ್ಲಿ ಕ್ವಾರಂಟೈನ್ ಮುಗಿಸಿಕೊಂಡು ಶಿವಮೊಗ್ಗಕ್ಕೆ ಜೂನ್ 29 ರಂದು ಬಂದಿದ್ದರು.ಅಶೋಕ ರಸ್ತೆಯ ಆಟೊರಿಕ್ಷಾ ವಾಲಕರೊಬ್ಬರಿಗೆ, ಜ್ವರದಿಂದ ಬಳಲುತ್ತಿದ್ದ ಓಲ್ಡ್ ಬಾರ್ ಲೈನ್ ನಿವಾಸಿಯೊಬ್ಬರಲ್ಲೂವೈರಸ್‌ಪತ್ತೆಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.