ADVERTISEMENT

ಶಿವಮೊಗ್ಗ ನಗರದಲ್ಲೇ 55 ಜನರಿಗೆ ಸೋಂಕು

1386ಕ್ಕೇರಿದ ಸೋಂಕಿತರ ಸಂಖ್ಯೆ, 776 ಜನರು ಗುಣಮುಖ

​ಪ್ರಜಾವಾಣಿ ವಾರ್ತೆ
Published 27 ಜುಲೈ 2020, 16:17 IST
Last Updated 27 ಜುಲೈ 2020, 16:17 IST
   

ಶಿವಮೊಗ್ಗ: ನಗರ ಪಾಲಿಕೆ ವ್ಯಾಪ್ತಿಯ 55 ಜನರು ಸೇರಿದಂತೆ ಜಿಲ್ಲೆಯ 71 ಜನರಿಗೆ ಸೋಮವಾರ ಕೊರೊನಾ ಸೋಂಕು ಇರುವುದು ದೃಢಪಟ್ಟಿದೆ. 51 ಜನರು ಗುಣಮುಖರಾಗಿ ಮನೆಗೆ ಮರಳಿದ್ದಾರೆ.

ಒಟ್ಟು ಸೋಂಕಿತರ ಸಂಖ್ಯೆ 1386ಕ್ಕೇರಿದೆ. 776 ಜನರು ಇದುವರೆಗೂ ಗುಣಮುಖರಾಗಿದ್ದಾರೆ. ಸೋಮವಾರ ಶಿವಮೊಗ್ಗ ನಗರದಲ್ಲೇ 55 ಜನರಿಗೆ ಸೋಂಕು ಪತ್ತೆಯಾಗಿದೆ. ಭದ್ರಾವತಿಯಲ್ಲಿ 9, ಸಾಗರದಲ್ಲಿ 2, ಹೊರ ಜಿಲ್ಲೆಗಳಿಂದ ಚಿಕಿತ್ಸೆಗಾಗಿ ಶಿವಮೊಗ್ಗದ ಆಸ್ಪತ್ರೆಗಳಿಗೆ ಬಂದಿದ್ದ ಐವರಿಗೆ ಸೋಂಕು ಇರುವುದು ಖಚಿತಪಟ್ಟಿದೆ. 586 ಜನರು ವಿವಿಧ ಕೋವಿಡ್‌ ಆರೈಕೆ ಕೇಂದ್ರಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಕಾರ್ಗಲ್‌ನಲ್ಲೂ ಸೋಂಕು (ಸಾಗರ ವರದಿ): ತಾಲ್ಲೂಕಿನಲ್ಲಿ ಸೋಮವಾರ ಇಬ್ಬರಿಗೆ ಸೋಂಕು ತಗುಲಿರುವುದು ಧೃಡಪಟ್ಟಿದೆ.
ತಾಲ್ಲೂಕಿನ ಕಾರ್ಗಲ್‌ನ ಬಜಾರ್‌ಲೈನ್‌ನ60 ವರ್ಷದ ದಿನಸಿ ವ್ಯಾಪಾರಿಗೆ ಸೋಂಕು ತಗುಲಿದೆ. ಕಾರ್ಗಲ್ ವ್ಯಾಪ್ತಿಯಲ್ಲಿ ಕಂಡು ಬಂದಿರುವ ಮೊದಲ ಪ್ರಕರಣ ಇದು.

ADVERTISEMENT

ಎಸ್.ಎನ್.ನಗರ ಬಡಾವಣೆಯ 40 ವರ್ಷದ ವಯರಿಂಗ್ ಕೆಲಸ ಮಾಡುವ ವ್ಯಕ್ತಿಗೂ ಸೋಂಕು ಇರುವುದು ಬೆಳಕಿಗೆ ಬಂದಿದೆ.
ತಾಲ್ಲೂಕಿನಲ್ಲಿ ಈವರೆಗೆ ಒಟ್ಟೂ 59 ಪಾಸಿಟಿವ್ ಪ್ರಕರಣ ದಾಖಲಾಗಿದ್ದು 42 ಮಂದಿ ಗುಣಮುಖರಾಗಿದ್ದಾರೆ.

ಅಕ್ಲಾಪುರ ಯುವತಿಗೆ ಸೋಂಕು (ತೀರ್ಥಹಳ್ಳಿವರದಿ): ತಾಲ್ಲೂಕಿನ ದತ್ತರಾಜಪುರದ 40 ವರ್ಷದ ಪುರುಷ, 11 ವರ್ಷದ ಬಾಲಕನಿಗೆ ಸೋಂಕು ತಗುಲಿದೆ. ಅಕ್ಲಾಪುರದ 20 ವರ್ಷದ ಯುವತಿಗೆ ಸೋಂಕು ಅಂಟಿದೆ. ಪಟ್ಟಣದ ಮಿಲ್ ಕೇರಿ ಬಡಾವಣೆಯ 51ವರ್ಷದ ಪುರುಷನಲ್ಲೂಸೋಂಕುಕಾಣಿಸಿಕೊಂಡಿದೆ.

ಪತಿ, ಪತ್ನಿಗೆ ಸೋಂಕು: (ಭದ್ರಾವತಿ ವರದಿ):ನಗರದ ಹಳೇನಗರ ಮರಾಠಗಲ್ಲಿ65 ವರ್ಷದ ಪುರುಷ,55 ವರ್ಷದ ಆತನ ಪತ್ನಿಗೆಸೋಂಕು ತಗುಲಿದೆ. ಉಜ್ಜಿನಿನಿಪುರದ36 ವರ್ಷದ ಪುರುಷ, ಸೀಗೆಬಾಗಿ41 ವರ್ಷದ ಪುರುಷ, ಜಯಶ್ರೀ ವ್ರತ್ತದ52 ವರ್ಷದ ಮಹಿಳೆ, ಗಾಂಧಿನಗರ 55 ವರ್ಷದ ಪುರುಷ, ಹುತ್ತಾಕಾಲೊನಿಯ62 ವರ್ಷದ ಪುರುಷ ಹಾಗೂ ಅಂಬೇಡ್ಕರ್ ನಗರದ57 ವರ್ಷದ ಪುರುಷನಿಗೆ ಸೋಂಕು ತಗುಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.