ADVERTISEMENT

ಡಿ.ಕೆ.ಶಿ. ಬ್ರಿಗೇಡ್‌ನಿಂದ ಆಹಾರ ವಿತರಣೆ

​ಪ್ರಜಾವಾಣಿ ವಾರ್ತೆ
Published 28 ಮಾರ್ಚ್ 2020, 13:53 IST
Last Updated 28 ಮಾರ್ಚ್ 2020, 13:53 IST
ಶಿವಮೊಗ್ಗದಲ್ಲಿ ಶನಿವಾರ ಡಿ.ಕೆ.ಶಿವಕುಮಾರ್ ಬಿಗ್ರೇಡ್ ವತಿಯಿಂದ ನಿರ್ಗತಿಕರಿಗೆ ಆಹಾರ ವಿತರಿಸಲಾಯಿತು.
ಶಿವಮೊಗ್ಗದಲ್ಲಿ ಶನಿವಾರ ಡಿ.ಕೆ.ಶಿವಕುಮಾರ್ ಬಿಗ್ರೇಡ್ ವತಿಯಿಂದ ನಿರ್ಗತಿಕರಿಗೆ ಆಹಾರ ವಿತರಿಸಲಾಯಿತು.   

ಶಿವಮೊಗ್ಗ: ಕೊರೊನಾ ನಿರ್ಬಂಧಗಳ ಕಾರಣಕ್ಕೆ ಸಂಕಷ್ಟ ಅನುಭವಿಸುತ್ತಿರುವ ಭಿಕ್ಷುಕರು, ನಿರ್ಗತಿಕರು, ವಾಹನ ದೊರಕದೇ ನಿಲ್ದಾಣಗಳಲ್ಲೇ ಉಳಿದ ಜನರಿಗೆ ಶನಿವಾರ ಜಿಲ್ಲಾ ಕಾಂಗ್ರೆಸ್‌ ಹಾಗೂ ಡಿ.ಕೆ.ಶಿವಕುಮಾರ್ ಬಿಗ್ರೇಡ್‌ನಿಂದ ಸಿದ್ಧ ಆಹರ ಪೊಟ್ಟಣ, ನೀರಿನ ಬಾಟಲ್‌ ವಿತರಿಸಿದರು.

ಪ್ರತಿ ದಿನವೂ ನಿರಂತರವಾಗಿ ಈ ಕಾರ್ಯ ನಡೆಸಲಾಗುವುದು.ನಗರದ ಎಲ್ಲೇ ಆದರೂ ಇಂತಹ ಜನರು ಕಂಡು ಬಂದರೆ ನಾಗರಿಕರು, ಪೊಲೀಸರು, ಅಧಿಕಾರಿಗಳು ಮಾಹಿತಿ ನೀಡಬೇಕು. ಕಾರ್ಯಕರ್ತರುಸ್ಥಳಕ್ಕೆ ಹೋಗಿ ನೆರವು ನೀಡುವರು ಎಂದು ಕೆಪಿಸಿಸಿ ಕಾರ್ಯದರ್ಶಿ ಕೆ.ದೇವೇಂದ್ರಪ್ಪ ಹೇಳಿದರು.

ಕಿರಣ್, ಕವಿತಾ, ಸಂತೋಷ್, ಅರ್ಜುನ್, ರಾಘವೇಂದ್ರ, ಪ್ರವೀಣ್ ಕುಮಾರ್ ಮತ್ತಿತರರು ನಗರದ ಹಲವೆಡೆ ಆಹಾರ ಪಟ್ಟಣ ವಿತರಿಸಿದರು.

ADVERTISEMENT

Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.