ADVERTISEMENT

ಕೋವಿಡ್: ಪ್ರಯೋಗಾಲಯಕ್ಕೆ ಮತ್ತೆ ಐವರ ಸ್ಯಾಂಪಲ್

​ಪ್ರಜಾವಾಣಿ ವಾರ್ತೆ
Published 24 ಮಾರ್ಚ್ 2020, 14:56 IST
Last Updated 24 ಮಾರ್ಚ್ 2020, 14:56 IST

ಶಿವಮೊಗ್ಗ: ಜಿಲ್ಲೆಯಲ್ಲಿ ಇದುವರೆಗೆ ಕೋವಿಡ್–19ರ ರೋಗ ಲಕ್ಷಣ ಇರುವ 31 ಜನರನ್ನು ತೀವ್ರ ತಪಾಸಣೆಗೆ ಒಳಪಡಿಸಲಾಗಿದ್ದು, ಯಾರಲ್ಲೂಕಾಯಿಲೆ ಇರುವುದು ದೃಢಪಟ್ಟಿಲ್ಲ.

ಕೆಮ್ಮು, ಗಂಟಲು ನೋವು, ಜ್ವರದ ಲಕ್ಷಣಗಳಿದ್ದ ಐವರ ಕಫ, ರಕ್ತದ ಮಾದರಿ ಮಂಗಳವಾರ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ಇದುವರೆಗೂ 330 ಜನರ ಮೇಲೆ ನಿಗಾವಹಿಲಾಗಿದೆ. 230 ಜನರು 14 ದಿನಗಳ ಕಣ್ಗಾವಲು ಅವಧಿ ಪೂರೈಸಿದ್ದಾರೆ. 8 ಜನರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. 92 ಜನರನ್ನು ನಿಗಾ ವ್ಯವಸ್ಥೆಯಲ್ಲಿ ಇರಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT