ADVERTISEMENT

ಗಾಂಜಾ ಸೇವನೆ: ಕಾನ್‌ಸ್ಟೆಬಲ್‌ಗೇ ಇರಿದ ಆಟೊಚಾಲಕರು

​ಪ್ರಜಾವಾಣಿ ವಾರ್ತೆ
Published 2 ಜನವರಿ 2019, 13:43 IST
Last Updated 2 ಜನವರಿ 2019, 13:43 IST

ಶಿವಮೊಗ್ಗ:ಇಲ್ಲಿನ ಖಾಸಗಿ ಬಸ್‌ನಿಲ್ದಾಣದಲ್ಲಿ ಮಂಗಳವಾರ ತಡರಾತ್ರಿ ಗಾಂಜಾ ಮತ್ತಿನಲ್ಲಿದ್ದ ಇಬ್ಬರುಆಟೊರಿಕ್ಷಾ ಚಾಲಕರುಹಣಕ್ಕಾಗಿ ಪೊಲೀಸ್ ಕಾನ್‌ಸ್ಟೆಬಲ್‌ ಮೇಲೆ ಹಲ್ಲೆ ನಡೆಸಿದ್ದಾರೆ.

ಕುಂಸಿಠಾಣೆಯ ಮಂಜುನಾಥ್ ಅವರ ಕುತ್ತಿಗೆ, ಕೈ ಭಾಗಗಳಿಗೆ ಚಾಕು ಹಾಗೂ ಬ್ಲೇಡ್‌ನಿಂದ ತೀವ್ರವಾಗಿ ಇರಿದಿದ್ದಾರೆ.

ಕರ್ತವ್ಯದ ಮೇಲೆ ಶಿವಮೊಗ್ಗಕ್ಕೆ ಬಂದಿದ್ದ ಅವರು ಮರಳಿ ಕುಂಸಿಗೆ ಹೋಗಲು ಬಸ್‌ನಿಲ್ದಾಣಕ್ಕೆ ಬಂದಿದ್ದಾರೆ. ತಡರಾತ್ರಿಯಾದ ಕಾರಣ ನಿಲ್ದಾಣದಲ್ಲಿ ಪ್ರಯಾಣಿಕರ ಸಂಖ್ಯೆಯೂ ವಿರಳವಾಗಿದೆ. ಇವರು ನಿಂತಿದ್ದ ಜಾಗಕ್ಕೆ ಬಂದನದೀಂ ಹಾಗೂ ನಜೀರ್ಹಣ ನೀಡುವಂತೆ ಕೇಳಿದ್ದಾರೆ. ನಿರಾಕರಿಸುತ್ತಿದ್ದಂತೆ ಮಂಜುನಾಥ್ ಅವರಿಗೆ ಮನಸೋಇಚ್ಚೆ ಇರಿದಿದ್ದಾರೆ. ಜನರು ಬರುತ್ತಿದ್ದಂತೆ ಪರಾರಿಯಾಗಿದ್ದಾರೆ. ರಕ್ತದ ಮಡುವಿನಲ್ಲಿ ಬಿದಿದ್ದ ಅವರನ್ನು ನಂತರ ಆಸ್ಪತ್ರೆಗೆ ಸೇರಿಸಲಾಗಿದೆ.

ADVERTISEMENT

ಮಂಜುನಾಥ್ ಅವರದು ಮೂಲತಃ ಬಾಗಲಕೋಟೆ. ಜಿಲ್ಲೆಯಲ್ಲಿ 9 ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದಾರೆ.

‘ಸಾಕಷ್ಟು ರಕ್ತ ಸೋರಿಕೆಯಾಗಿದೆ. ತಕ್ಷಣ ಆಸ್ಪತ್ರೆಗೆ ಕರೆತಂದ ಕಾರಣ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಚೇತರಿಸಿಕೊಳ್ಳಲು ಹಲವು ದಿನಗಳು ಬೇಕಾಗುತ್ತದೆ’ ಎಂದು ಮೆಗ್ಗಾನ್‌ ಆಸ್ಪತ್ರೆಯ ವೈದ್ಯರು ಮಾಹಿತಿ ನೀಡಿದರು.

ದೊಡ್ಡಪೇಟೆ ಠಾಣೆ ಪೊಲೀಸರುಇಬ್ಬರನ್ನೂ ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.