ADVERTISEMENT

ಶಿವಮೊಗ್ಗ: ವ್ಯಕ್ತಿ ಆತ್ಮಹತ್ಯೆ; ಮೂವರಿಗೆ 10 ವರ್ಷ ಜೈಲು ಶಿಕ್ಷೆ

​ಪ್ರಜಾವಾಣಿ ವಾರ್ತೆ
Published 8 ಆಗಸ್ಟ್ 2025, 4:31 IST
Last Updated 8 ಆಗಸ್ಟ್ 2025, 4:31 IST
ಚಿಕ್ಕಮಗಳೂರು ರಂಗಪ್ಪ
ಚಿಕ್ಕಮಗಳೂರು ರಂಗಪ್ಪ   

ಶಿವಮೊಗ್ಗ: ‘ಭದ್ರಾವತಿ ತಾಲ್ಲೂಕು ಗುಡುಮಘಟ್ಟ ಗ್ರಾಮದ ಮಂಜಪ್ಪ (40) ಅವರು ಕ್ರಿಮಿನಾಶಕ ಸೇವಿಸಿ ಮೃತಪಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರಿಗೆ 10 ವರ್ಷ ಕಠಿಣ ಕಾರಾಗೃಹ ಶಿಕ್ಷೆ, ₹2 ಲಕ್ಷ ದಂಡ ವಿಧಿಸಿ ನ್ಯಾಯಾಲಯ ಆದೇಶಿಸಿದೆ.

ಗುಡುಮಘಟ್ಟ ನಿವಾಸಿಗಳಾದ ಚಿಕ್ಕಮಗಳೂರು ರಂಗಪ್ಪ, ಹನುಮಂತಪ್ಪ, ಕಲೀ ರಂಗಪ್ಪ ಎಂಬುವವರಿಗೆ ಶಿಕ್ಷೆಯಾಗಿದೆ.

ಆಸ್ತಿ ವಿಚಾರವಾಗಿ ನೀಡಲಾಗುತ್ತಿದ್ದ ಕಿರುಕುಳದಿಂದ ನೊಂದು ಮಂಜಪ್ಪ ಅವರು 2018ರ ಜನವರಿ 31ರಂದು ಕ್ರಿಮಿನಾಶಕ ಸೇವಿಸಿ ಮೃತಪಟ್ಟಿದ್ದರು. ಈ ಸಂಬಂಧ ಮೃತರ ಪತ್ನಿ ನೀಡಿದ್ದ ದೂರಿನ ಆಧಾರದ ಮೇಲೆ ಪ್ರಕರಣ ದಾಖಲಿಸಿಕೊಂಡ ಹೊಳೆಹೊನ್ನೂರು ಠಾಣೆ ಪೊಲೀಸರು ಆರೋಪಿಗಳ ವಿರುದ್ಧ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು.

ADVERTISEMENT

ವಿಚಾರಣೆ ನಡೆಸಿದ ನಾಲ್ಕನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್‌ ನ್ಯಾಯಾಲಯದ (ಪೀಠಾಸೀನ ಭದ್ರಾವತಿ) ನ್ಯಾಯಾಧೀಶರಾದ ಇಂದಿರಾ ಮೈಲಸ್ವಾಮಿ ಚೆಟ್ಟಿಯಾರ ಅವರು ಅಪರಾಧಿಗಳಿಗೆ ಶಿಕ್ಷೆ ವಿಧಿಸಿ ಆದೇಶ ನೀಡಿದ್ದಾರೆ. ಸರ್ಕಾರಿ ವಕೀಲರಾದ ಪಿ. ರತ್ನಮ್ಮ ವಾದ ಮಂಡಿಸಿದ್ದರು.

ಕಲೀ ರಂಗಪ್ಪ
ಹನುಮಂತಪ್ಪ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.