ADVERTISEMENT

ಶಿವಮೊಗ್ಗ: ಆನ್‌ಲೈನ್‌ನಲ್ಲೇ ಪದವಿ ಪ್ರಮಾಣ ದೃಢೀಕರಣ

‘ಮೈ ವೆರಿಫಿಕೇಷನ್’ ತಂತ್ರಾಂಶ ಅಳವಡಿಸಿಕೊಂಡ ಕುವೆಂಪು ವಿಶ್ವವಿದ್ಯಾಲಯ

​ಪ್ರಜಾವಾಣಿ ವಾರ್ತೆ
Published 13 ಜುಲೈ 2020, 19:03 IST
Last Updated 13 ಜುಲೈ 2020, 19:03 IST
ಪ್ರೊ.ಎಂ. ವೆಂಕಟೇಶ್ವರುಲು
ಪ್ರೊ.ಎಂ. ವೆಂಕಟೇಶ್ವರುಲು   

ಶಿವಮೊಗ್ಗ: ಕುವೆಂಪು ವಿಶ್ವವಿದ್ಯಾಲಯ ಹೊಸದಾಗಿ ಪರಿಚಯಿಸಿದ‘ಮೈ ವೆರಿಫಿಕೇಷನ್ ಸಿಸ್ಟಂ’ತಂತ್ರಾಂಶದ ಮೂಲಕ ಪದವೀಧರರುತಮ್ಮ ಸೆಮಿಸ್ಟರ್ ಅಂಕಪಟ್ಟಿ, ತಾತ್ಕಾಲಿಕ ಪದವಿ ಪ್ರಮಾಣಪತ್ರಗಳನೈಜತೆಯ ದೃಢೀಕರಣವನ್ನು ಆನ್‌ಲೈನ್‌
ನಲ್ಲೇಪಡೆಯಬಹುದು.

ಕೆಲವು ವರ್ಷಗಳ ಹಿಂದೆ ವಿಶ್ವವಿದ್ಯಾಲಯದಲ್ಲಿ ನಕಲಿ ಅಂಕಪಟ್ಟಿಯ ಆರೋಪಗಳು ಕೇಳಿಬಂದಿತ್ತು. ಪದವಿ ಅಂಕಪಟ್ಟಿಗಳನ್ನು
ವಾಮಮಾರ್ಗದ ಮೂಲಕಹಲವರು ಪಡೆದುಕೊಂಡಿದ್ದಾರೆ ಎಂಬ ಕುರಿತು ಸುದೀರ್ಘ ತನಿಖೆ ನಡೆದಿತ್ತು. ಇಂತಹ ವಾಮಮಾರ್ಗಗಳಿಗೆ ತಿಲಾಂಜಲಿ ನೀಡಿ, ವಿಶ್ವವಿದ್ಯಾಲಯದಲ್ಲಿ ಅಧಿಕೃತವಾಗಿ ಕಲಿತ ವಿದ್ಯಾರ್ಥಿಗಳ ಅಂಕಪಟ್ಟಿ ನೈಜತೆ ದೃಢೀಕರಿಸಲು ಕುವೆಂಪು ವಿಶ್ವವಿದ್ಯಾಲಯ ಹೊಸ ತಂತ್ರಾಂಶ ಅಳವಡಿಸಿದೆ.

ಏನಿದು ಇ–ವೆರಿಫಿಕೇಷನ್ ತಂತ್ರಾಂಶ

ADVERTISEMENT

ಈ ತಂತ್ರಾಂಶದಲ್ಲಿಪದವಿ ಪಡೆದ ಎಲ್ಲ ವಿದ್ಯಾರ್ಥಿಗಳ ದಾಖಲಾತಿ ಅಳವಡಿಸಲಾಗುತ್ತದೆ. ವಿದ್ಯಾರ್ಥಿ ಯಾವುದೇ ಸಮಯದಲ್ಲಿ ನಿಗದಿತ ಶುಲ್ಕ ಪಾವತಿಸಿ ಆನ್‌ಲೈನ್‌ನಲ್ಲೇಅಂಕಪಟ್ಟಿ, ಪದವಿ ಪ್ರಮಾಣಪತ್ರದ ನೈಜತೆ ಪರಿಶೀಲಿಸಬಹುದು. ದೃಢೀಕೃತ ಪ್ರಮಾಣಪತ್ರ ಪಡೆಯಬಹುದು.

‘ಹೊಸವ್ಯವಸ್ಥೆ ಅಳವಡಿಕೆಯಿಂದ ವಿದ್ಯಾರ್ಥಿಗಳು ಅನವಶ್ಯಕವಾಗಿ ವಿಶ್ವವಿದ್ಯಾಲಯಕ್ಕೆ ಅಲೆಡಾಡುವುದು ತಪ್ಪುತ್ತದೆ. ಸಮಯ, ಶ್ರಮ ಉಳಿತಾಯವಾಗಲಿದೆ’ ಎಂದು ಪರೀಕ್ಷಾಂಗ ವಿಭಾಗದ ಉಪ ಕುಲಸಚಿವ ಡಾ.ಕೆ. ಯೋಗೇಂದ್ರ ಮಾಹಿತಿ ನೀಡಿದರು.

ಪರಿಶೀಲನಾ ಪ್ರಕ್ರಿಯೆ ಹೇಗೆ?

ಕುವೆಂಪು ವಿಶ್ವವಿದ್ಯಾಲಯದವೆಬ್‌ಸೈಟ್ ವಿಳಾಸ KUVEMPU.AC.IN ನಲ್ಲಿ‘ಮೈ ವೆರಿಫಿಕೇಷನ್ ಸಿಸ್ಟಂ ಪೇಜ್ ಇರುತ್ತದೆ, ಅಲ್ಲಿ ವಿದ್ಯಾರ್ಥಿಗಳ ಸಂಪೂರ್ಣ ಮಾಹಿತಿ ನೀಡಲಾಗಿದೆ. ಅಲ್ಲಿ ನೋಂದಣಿ ಮಾಡಿಕೊಂಡ ನಂತರ ಪ್ರತಿಯೊಬ್ಬ ವಿದ್ಯಾರ್ಥಿಗೆ ಪ್ರತ್ಯೇಕ ಯೂಸರ್‌ ಐಡಿ ಮತ್ತು ಪಾಸ್‌ವರ್ಡ್‌ ನೀಡಲಾಗುತ್ತದೆ. ಪೋರ್ಟಲ್‍ನಲ್ಲಿ ಲಾಗಿನ್ ಆದ ವಿದ್ಯಾರ್ಥಿಯು ನಿರ್ದಿಷ್ಟಪಡಿಸಲಾದ ವಿವರಗಳನ್ನು ಭರ್ತಿ ಮಾಡಿ, ಆನ್‌ಲೈನ್‌ನಲ್ಲೇನಿಗದಿತ ಶುಲ್ಕ ಪಾವತಿಸಬೇಕು. ನಂತರ ಯಾವುದೇ ಸ್ಥಳದಲ್ಲಿ ತಮ್ಮ ದಾಖಲೆಗಳನ್ನು ಪಡೆದುಕೊಳ್ಳಬಹುದು.

ಹಿಂದಿನ ಪ್ರಕ್ರಿಯೆ ಹೇಗಿತ್ತು?

ಪದವಿಪೂರೈಸಿದ ವಿದ್ಯಾರ್ಥಿಗಳು ಯಾವುದೇಉದ್ಯೋಗಕ್ಕೆ ಸೇರುವಾಗತಾವು ಪಡೆದಅಂಕಪಟ್ಟಿ, ಪದವಿ ಪ್ರಮಾಣ ನೈಜತೆ ದೃಢೀಕರಣವನ್ನು ನೀಡಬೇಕು. ಇಂತಹ ಸಮಯದಲ್ಲಿ ವಿದ್ಯಾರ್ಥಿಗಳು ನೈಜತೆ ಪರಿಶೀಲನೆಗಾಗಿ ಅರ್ಜಿ ಸಲ್ಲಿಸಿದ ನಂತರ ಸಂಬಂಧಪಟ್ಟ ದಾಖಲೆಗಳನ್ನು ಪರೀಕ್ಷಾ ವಿಭಾಗದಲ್ಲಿರುವ ದಾಖಲೆಗಳ ಜತೆ ತಾಳೆ ನೋಡಲಾಗುತ್ತಿತ್ತು. ಭೌತಿಕವಾಗಿ ಪರಿಶೀಲಿಸಿದ ನಂತರ ನೈಜತೆದೃಢೀಕರಣ ಪ್ರಮಾಣಪತ್ರನೀಡಲಾಗುತ್ತಿತ್ತು. ಈ ಪ್ರಕ್ರಿಯೆ ಮುಗಿಯುವುದಕ್ಕೆ 15ರಿಂದ 20 ದಿನಗಳುಹಿಡಿಯುತ್ತಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.