ADVERTISEMENT

ಸಿಗಂದೂರು ದೇಗುಲ ಸಮಿತಿ ರದ್ದಗೊಳಿಸದಿದ್ದರೆ ಪಾದಯಾತ್ರೆ: ಬಿ.ಕೆ. ಹರಿಪ್ರಸಾದ್

ಪಾದಯಾತ್ರೆ: ಬಿ.ಕೆ. ಹರಿಪ್ರಸಾದ್ ಎಚ್ಚರಿಕೆ

​ಪ್ರಜಾವಾಣಿ ವಾರ್ತೆ
Published 6 ನವೆಂಬರ್ 2020, 15:46 IST
Last Updated 6 ನವೆಂಬರ್ 2020, 15:46 IST
ಬಿ.ಕೆ. ಹರಿಪ್ರಸಾದ್
ಬಿ.ಕೆ. ಹರಿಪ್ರಸಾದ್    

ಶಿವಮೊಗ್ಗ: ಸಿಗಂದೂರು ಚೌಡೇಶ್ವರಿ ದೇವಸ್ಥಾನಕ್ಕೆ ರಚಿಸಿರುವ ಮೇಲುಸ್ತುವಾರಿ ಹಾಗೂ ಸಲಹಾ ಸಮಿತಿ ರದ್ದು ಮಾಡದಿದ್ದರೆ ತಮ್ಮ ಮುಂದಾಳತ್ವದಲ್ಲಿ ಶಿವಮೊಗ್ಗದಿಂದ ಬೆಂಗಳೂರಿನವರೆಗೆ ಪಾದಯಾತ್ರೆ ನಡೆಸಲಾಗುವುದು ಎಂದು ವಿಧಾನ ಪರಿಷತ್ ಸದಸ್ಯ ಬಿ.ಕೆ. ಹರಿಪ್ರಸಾದ್ ಎಚ್ಚರಿಸಿದರು.

‘ರಾಜ್ಯದ ಎಲ್ಲಾ ದೇವಸ್ಥಾನಗಳಲ್ಲೂ ಸಣ್ಣ–ಪುಟ್ಟ ಲೋಪದೋಷಗಳಿರುತ್ತವೆ. ಅಲ್ಲೆಲ್ಲ ಏಕೆ ಸಮಿತಿ ರಚಿಸಿಲ್ಲ? ರಾಜಕೀಯ ಕಾರಣಗಳಿಗಾಗಿ ಇಲ್ಲಿ ಸಮಿತಿ ರಚಿಸಲಾಗಿದೆ. ಹೀಗಾಗಿ ಅವರಿಗೆ ರಾಜಕೀಯವಾಗಿಯೇ ಉತ್ತರ ನೀಡಲಾಗುವುದು’ ಎಂದು ಅವರು ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಪ್ರತಿಕ್ರಿಯಿಸಿದರು.

‘ಸಮಿತಿ ರಚನೆಯಲ್ಲಿ ಹಿಂದುತ್ವದ ಕೈವಾಡ ಇರುವುದು ಸ್ಪಷ್ಟಗೊಳ್ಳುತ್ತಿದೆ. ಹಿಂದೆ ಹಿಂದೂಸ್ಥಾನ, ಪಾಕಿಸ್ತಾನ ಎಂದು ಹೇಳುತ್ತಾ ಜನರನ್ನು ಒಡೆದು ಆಳಲಾಗುತ್ತಿತ್ತು. ಈಗ ಹಿಂದುಳಿದವರ ದಮನಕ್ಕೆ ಮುಂದಾಗಿದ್ದಾರೆ. ಇದರ ಹಿಂದೆ ಹಿಂದುಳಿದ ವರ್ಗಗಳ ಆಸ್ತಿ ಕಬಳಿಕೆಯ ಷಡ್ಯಂತ್ರ ಅಡಗಿದೆ. ಯಡಿಯೂರಪ್ಪ ಈ ಹಿಂದೆ ಮುಖ್ಯಮಂತ್ರಿಯಾಗಿದ್ದಾಗ ಸಾರಾಯಿ ಬಂದ್ ಮಾಡಲಾಗಿತ್ತು. ಆಗ ಸಾರಾಯಿ ಮಾರುವ ಸಾವಿರಾರು ಕುಟುಂಬಗಳು ಪರ್ಯಾಯ ವ್ಯವಸ್ಥೆ ಇಲ್ಲದೆ ಬೀದಿಪಾಲಾದವು. ಇದಕ್ಕೆ ಯಾರು ಜವಾಬ್ದಾರಿ’ ಎಂದು ಪ್ರಶ್ನಿಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.