ADVERTISEMENT

ಮೈಸೂರು ಮಾದರಿಯಲ್ಲಿ ಸಿಂಹಧಾಮ ಅಭಿವೃದ್ಧಿ: ಸಂಸದ ಬಿ. ವೈ. ರಾಘವೇಂದ್ರ

​ಪ್ರಜಾವಾಣಿ ವಾರ್ತೆ
Published 17 ಜನವರಿ 2020, 13:25 IST
Last Updated 17 ಜನವರಿ 2020, 13:25 IST
ಶಿವಮೊಗ್ಗ ಸಮೀಪದ ತ್ಯಾವರೆಕೊಪ್ಪ ಸಿಂಹಧಾಮವನ್ನು ಶುಕ್ರವಾರ ಸಂಸದ ಬಿ.ವೈ.ರಾಘವೇಂದ್ರ ವೀಕ್ಷಿಸಿದರು.
ಶಿವಮೊಗ್ಗ ಸಮೀಪದ ತ್ಯಾವರೆಕೊಪ್ಪ ಸಿಂಹಧಾಮವನ್ನು ಶುಕ್ರವಾರ ಸಂಸದ ಬಿ.ವೈ.ರಾಘವೇಂದ್ರ ವೀಕ್ಷಿಸಿದರು.   

ಶಿವಮೊಗ್ಗ: ಮೈಸೂರು ಮೃಗಾಲಯದ ಮಾದರಿಯಲ್ಲಿ ತ್ಯಾವರೆಕೊಪ್ಪದ ಹುಲಿ-ಸಿಂಹಧಾಮ ಅಭಿವೃದ್ಧಿ ಪಡಿಸಲಾಗುವುದು.ಪ್ರಸ್ತುತ 80 ಹೆಕ್ಟೇರ್ ಇರುವಧಾಮವನ್ನು250 ಹೆಕ್ಟೇರ್‌ಗೆವಿಸ್ತರಿಸಲು ಕೇಂದ್ರ ಸರ್ಕಾರ ಒಪ್ಪಿಗೆ ನೀಡಿದೆ ಎಂದು ಸಂಸದ ಬಿ.ವೈ. ರಾಘವೇಂದ್ರಮಾಹಿತಿ ನೀಡಿದರು.

ತ್ಯಾವರೆಕೊಪ್ಪ ಸಿಂಹಧಾಮದಲ್ಲಿ ಶುಕ್ರವಾರ ಅಭಿವೃದ್ಧಿ ಕಾರ್ಯಗಳನ್ನು ವೀಕ್ಷಿಸಿ ನಂತರ ಅವರು ಸುದ್ದಿಗಾರರ ಜತೆ ಮಾತನಾಡಿದರು.

ರಾಜ್ಯದ ವಿಶೇಷ ಪ್ರಾಣಿ ಸಂಗ್ರಹಾಲಯವಾಗಿಸಿಂಹಧಾಮ ಅಭಿವೃದ್ಧಿ ಪಡಿಸಲು ಈಗಾಗಲೇ ಕೇಂದ್ರ ಸಚಿವ ಜಾವಡೇಕರ್ ಅವರಿಗೆ ಮನವಿ ಮಾಡಲಾಗಿದೆ.ಪ್ರಸ್ತುತ ಆದಾಯಕ್ಕಿಂತ ಖರ್ಚು ಹೆಚ್ಚಾಗಿದೆ.ಈ ವೆಚ್ಚವನ್ನುಸರ್ಕಾರವೇ ಭರಿಸುತ್ತಿದೆ. ಅತ್ಯುತ್ತಮ ಪ್ರವಾಸಿ ತಾಣವಾಗಿರೂಪಿಸಿದರೆ ಆದಾಯವೂ ವೃದ್ಧಿಸುತ್ತದೆ ಎಂದರು.

ADVERTISEMENT

ಸಿಂಹಧಾಮ ಅಭಿವೃದ್ಧಿಗೆ ₹40ರಿಂದ 50 ಕೋಟಿ ಬೇಕಿದೆ.ಹಣ ಮಂಜೂರು ಮಾಡುವಂತೆ ಕೇಂದ್ರ ಹಾಗೂ ರಾಜ್ಯ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗಿದೆ.ಪ್ರಸ್ತುತ ₹9 ಕೋಟಿ ವೆಚ್ಚದ ಅಭಿವೃದ್ಧಿ ಕಾಮಗಾರಿಗಳು ನಡೆಯುತ್ತಿವೆ. ₹4 ಕೋಟಿ ವೆಚ್ಚದಲ್ಲಿ ವಿವಿಧ ಪ್ರಾಣಿಗಳ ಪಂಚರಗಳನ್ನು ಅಭಿವೃದ್ಧಿಪಡಿಸಲಾಗುತ್ತಿದೆ.₹5 ಕೋಟಿ ವೆಚ್ಚದಲ್ಲಿ ಸಿಂಹಧಾಮದ ಇತರೆ ಅಭಿವೃದ್ಧಿ ಕೆಲಸಗಳು ನಡೆಯುತ್ತಿವೆ. ಮಾರ್ಚ್ ಅಂತ್ಯದ ಒಳಗೆಎಲ್ಲ ಕಾಮಗಾರಿ ಪೂರ್ಣಗೊಳ್ಳಲಿದೆ. 13 ಪ್ರಾಣಿಗಳಿಗೆ ಹೊಸ ಜಾಗದಲ್ಲಿನೆಲೆಸಲು ಅವಕಾಶವಾಗಲಿದೆ ಎಂದು ವಿವರ ನೀಡಿದರು.

ಹುಲಿ-ಸಿಂಹಧಾಮದಲ್ಲಿ ವಿವಿಧ 67 ಜಾತಿಯ 450 ಪ್ರಾಣಿ, ಪಕ್ಷಿಗಳಿವೆ. ಅಭಿವೃದ್ಧಿ ನಂತರಇನ್ನಷ್ಟು ಹೆಚ್ಚಾಗಲಿವೆ.ಜಿಲ್ಲೆಯ ಪ್ರವಾಸೋದ್ಯಮ ಅಭಿವೃದ್ಧಿಗೆ ರಾಜ್ಯ ಸರ್ಕಾರ ₹20 ಕೋಟಿ ನೀಡಿದೆ. ₹10 ಕೋಟಿ ವೆಚ್ಚದಲ್ಲಿ ಜೋಗಅಭಿವೃದ್ಧಿ ಪಡಿಸಲಾಗುವುದು.ಅಕ್ಕಮಹಾದೇವಿಯ ಉಡುತಡಿ ಅಭಿವೃದ್ಧಿಗೆ ₹5 ಕೋಟಿ, ಹೊಸನಗರದ ಕೆಳದಿ ಕೋಟೆ ಅಭಿವೃದ್ಧಿಗೆ ₹1 ಕೋಟಿ ಕವಲೆದುರ್ಗಕ್ಕೆ ₹1 ಕೋಟಿ ವೆಚ್ಚ ಮಾಡಲಾಗುತ್ತಿದೆ ಎಂದು ಸಂಸದರು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.