ADVERTISEMENT

ಉತ್ಪನ್ನಧಾರಣೆ ಮಾಹಿತಿ ತಿಳಿದು ವ್ಯವಹಾರ

ಮಹಿಳಾ ಜಾಣ್ಮೆಗೆ ಧರ್ಮಸ್ಥಳ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಶ್ಲಾಘನೆ

​ಪ್ರಜಾವಾಣಿ ವಾರ್ತೆ
Published 25 ಜನವರಿ 2020, 12:04 IST
Last Updated 25 ಜನವರಿ 2020, 12:04 IST
ಶಿವಮೊಗ್ಗದಲ್ಲಿ ಶನಿವಾರ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ‘ಚೈತನ್ಯ ಸೌಧ’ ಮತ್ತು ’ಯಂತ್ರಶ್ರೀ’ ಭತ್ತ ಅಭಿಯಾನ ಕಾರ್ಯಾಗಾರ ಕಾರ್ಯಕ್ರಮವನ್ನು ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್.ಈಶ್ವರಪ್ಪ ಉದ್ಘಾಟಿಸಿದರು. 
ಶಿವಮೊಗ್ಗದಲ್ಲಿ ಶನಿವಾರ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ‘ಚೈತನ್ಯ ಸೌಧ’ ಮತ್ತು ’ಯಂತ್ರಶ್ರೀ’ ಭತ್ತ ಅಭಿಯಾನ ಕಾರ್ಯಾಗಾರ ಕಾರ್ಯಕ್ರಮವನ್ನು ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್.ಈಶ್ವರಪ್ಪ ಉದ್ಘಾಟಿಸಿದರು.    

ಶಿವಮೊಗ್ಗ: ಕೃಷಿ ಉತ್ಪನ್ನಧಾರಣೆ ಮಾಹಿತಿ ತಿಳಿದುಕೊಂಡು ವ್ಯವಹರಿಸುವ ಮಟ್ಟಿಗೆ ಮಹಿಳೆಯರು ಬುದ್ದಿವಂತಳಾಗಿದ್ದಾರೆ. ಮಹಿಳೆಯರ ಅಕ್ಷರ ಜ್ಞಾನ, ವ್ಯವಹಾರ ಜ್ಞಾನ ಯೋಜನೆಗಳ ಸಫಲತೆಗೆ ಕಾರಣ ಎಂದು ಧರ್ಮಸ್ಥಳಧರ್ಮಾಧಿಕಾರಿವೀರೇಂದ್ರ ಹೆಗ್ಗಡೆಪ್ರತಿಪಾದಿಸಿದರು.

ವಿದ್ಯಾನಗರದ ಕಂಟ್ರಿಕ್ಲಬ್ ರಸ್ತೆಯಲ್ಲಿ ಶನಿವಾರ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ‘ಚೈತನ್ಯ ಸೌಧ’ ಮತ್ತು ’ಯಂತ್ರಶ್ರೀ’ ಭತ್ತ ಅಭಿಯಾನ ಕಾರ್ಯಾಗಾರ ಉದ್ಘಾಟಿಸಿ ಅವರುಮಾತನಾಡಿದರು.

ಸಂಘದಿಂದ ಕೊಡುವುದು ಸಾಲ ಅಲ್ಲ. ಅದು ಪ್ರಗತಿ ನಿಧಿ. ಈ ನಿಧಿ ಬಳಸಿಕೊಂಡು ಮಹಿಳೆಯರು ಪ್ರಗತಿ ಸಾಧಿಸಬೇಕು. ಒಬ್ಬ ಮಹಿಳೆ ಇಡೀ ಕುಟುಂಬಕ್ಕೆ ಆಧಾರವಾದರೆ ಆಕೆಯೇ ಲಕ್ಷ್ಮೀ. ಸಂಸ್ಥೆ ನೀಡಿದ ಸಾಲ ಸದುಪಯೋಗವಾಗಿದೆ. ಸದ್ಬಳಕೆಯಾಗಿದೆ. ಮರುಪಾವತಿಯೂ ಆಗಿದೆ. ಇದರಿಂದ ಎಲ್ಲೆಡೆ ಮಹಿಳಾ ಸಬಲೀಕರಣವಾಗಿದೆ. ಯೋಜನೆಗಳು ಸಾಫಲ್ಯ ಕಂಡಿದೆ ಎಂದರು.

ADVERTISEMENT

ಸಮಾರಂಭ ಉದ್ಘಾಟಿಸಿದ ಸಚಿವ ಕೆ.ಎಸ್.ಈಶ್ವರಪ್ಪ, ಉಳಿತಾಯಕ್ಕೆ ಪ್ರೇರಣೆ ನೀಡಿ ಮಹಿಳಾ ಸಬಲೀಕರಣ ಮಾಡಿದ್ದೇ ಧರ್ಮಸ್ಥಳ ಗ್ರಾಮೀಣಾಭಿವೃದ್ದಿ ಯೋಜನೆ.ಸರ್ಕಾರಗಳು ಮಾಡದ ಕೆಲಸಅವರು ಮಾಡಿದ್ದಾರೆಎಂದು ಶ್ಲಾಘಿಸಿದರು.

ಸಂಸದ ಬಿ.ವೈ.ರಾಘವೇಂದ್ರ ಮಾತನಾಡಿ, ಈ ಸಂಸ್ಥೆ ಒಂದು ಶಕ್ತಿಯಾಗಿ ಸುಮಾರು 1.75ಲಕ್ಷ ಕುಟುಂಬಗಳಿಗೆ ಸ್ವಾವಲಂಬನೆ ಕಲಿಸಿದೆ. ಉತ್ತಮ ಸಂಸ್ಕಾರ ನೀಡಿದೆಎಂದರು.

ಸ್ವಉದ್ಯೋಗ ಯೋಜನೆ ನೆರವು ಬಿಡುಗಡೆ, ಅಂಗವಿಕಲರಿಗೆ ಸಲಕರಣೆಗಳ ವಿತರಣೆಮಾಡಲಾಯಿತು.

ಮೇಯರ್ ಲತಾ ಗಣೇಶ್, ಉಪ ಮೇಯರ್ ಎಸ್.ಎನ್.ಚನ್ನಬಸಪ್ಪ,ಜಿಲ್ಲಾ ಪಂಚಾಯಿತಿಉಪಾಧ್ಯಕ್ಷೆ ವೇದಾ ವಿಜಯ ಕುಮಾರ್, ಪಾಲಿಕೆ ಸದಸ್ಯರಾದ ವಿಶ್ವಾಸ್, ಯೋಗೀಶ್, ಆರ್.ಸಿ.ನಾಯ್ಕ, ಸುರೇಖಾ ಮುರಳೀಧರ್, ಕಲ್ಪನಾ ರಾಮು, ಸುನಿತಾ ಅಣ್ಣಪ್ಪ, ಯೋಜನಾಧಿಕಾರಿ ಬಾಲಕೃಷ್ಣ ಇರಿಂಜ, ಡಾ.ಎಲ್.ಎಚ್.ಮಂಜುನಾಥ್ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.