ADVERTISEMENT

ಶಿವಮೊಗ್ಗ: ವಿವಿಧೆಡೆ ಸ್ವಾತಂತ್ರ್ಯೋತ್ಸವ ಸಂಭ್ರಮ

-

​ಪ್ರಜಾವಾಣಿ ವಾರ್ತೆ
Published 16 ಆಗಸ್ಟ್ 2025, 7:41 IST
Last Updated 16 ಆಗಸ್ಟ್ 2025, 7:41 IST
ಶಿವಮೊಗ್ಗದಲ್ಲಿ ಶುಕ್ರವಾರ ಆರ್ಯ–ಈಡಿಗ ಸಂಘದ ಕಚೇರಿಯಲ್ಲಿ ಅಧ್ಯಕ್ಷ ಹುಲ್ತಿಕೊಪ್ಪ ಶ್ರೀಧರ್ ರಾಷ್ಟ್ರಧ್ವಜಾರೋಹಣ ನೆರವೇರಿಸಿದರು
ಶಿವಮೊಗ್ಗದಲ್ಲಿ ಶುಕ್ರವಾರ ಆರ್ಯ–ಈಡಿಗ ಸಂಘದ ಕಚೇರಿಯಲ್ಲಿ ಅಧ್ಯಕ್ಷ ಹುಲ್ತಿಕೊಪ್ಪ ಶ್ರೀಧರ್ ರಾಷ್ಟ್ರಧ್ವಜಾರೋಹಣ ನೆರವೇರಿಸಿದರು   

ಶಿವಮೊಗ್ಗ: ಶ್ರಾವಣದ ಮಳೆ, ಮೋಡದ ತಾಕಲಾಟದ ನಡುವೆಯೇ 79ನೇ ಸ್ವಾತಂತ್ರ್ಯ ದಿನಾಚರಣೆಯ ಸಂಭ್ರಮ ಶಿವಮೊಗ್ಗ ನಗರ ಸೇರಿದಂತೆ ಜಿಲ್ಲೆಯಾದ್ಯಂತ ಗರಿಗೆದರಿತ್ತು. 

ಮುಂಜಾನೆ ರಾಷ್ಟ್ರಧ್ವಜಾರೋಹಣಕ್ಕೂ ಮುನ್ನ ಬಿರುಸಿನ ಮಳೆ ಸುರಿದಿದ್ದು, ಶಾಲಾ ವಿದ್ಯಾರ್ಥಿಗಳು, ಸಾರ್ವಜನಿಕರು ಹಾಗೂ ಅಧಿಕಾರಿಗಳು ಮಳೆಯ ನಡುವೆಯೇ ಸ್ವಾತಂತ್ರ್ಯದಿನದ ಸಂಭ್ರಮದಲ್ಲಿ ಪಾಲ್ಗೊಳ್ಳಲು ಶಾಲೆ–ಕಾಲೇಜು, ಸಂಘ–ಸಂಸ್ಥೆ ಹಾಗೂ ಕ್ರೀಡಾಂಗಣಗಳಿಗೆ ತೆರಳಿದರು. ಶಿವಮೊಗ್ಗದ ನೆಹರೂ ಕ್ರೀಡಾಂಗಣದಲ್ಲಿ ಈ ಬಾರಿ ಸ್ವಾತಂತ್ರ್ಯ ದಿನ ನಡೆದಿದ್ದರಿಂದ ಕವಾಯತು ನಡೆಸಲು ಅನುಕೂಲವಾಯಿತು. 

ಶಿವಮೊಗ್ಗದ ವಿವಿಧಡೆ ಸ್ವಾತಂತ್ರ್ಯ ದಿನ ಆಚರಣೆಯ ಕಿರುನೋಟ ಇಲ್ಲಿದೆ. 

ADVERTISEMENT

ಆರ್ಯ ಈಡಿಗ ಸಂಘ: 

ಜಿಲ್ಲಾ ಆರ್ಯ ಈಡಿಗ ಸಂಘದ ಕಚೇರಿಯಲ್ಲಿ ನಡೆದ ಸ್ವಾತಂತ್ರ್ಯ ದಿನ ಆಚರಣೆ ಸಮಾರಂಭದಲ್ಲಿ ಸಂಘದ ಅಧ್ಯಕ್ಷ ಶ್ರೀಧರ ಹುಲ್ತಿಕೊಪ್ಪ ಧ್ವಜಾರೋಹಣ ನೆರವೇರಿಸಿದರು. ಸಂಘದ ಪ್ರಧಾನ ಕಾರ್ಯದರ್ಶಿ ಎಸ್.ಸಿ.ರಾಮಚಂದ್ರ, ವಕೀಲ ಕೃಷ್ಣಮೂರ್ತಿ, ಉದ್ಯಮಿ ಎಸ್.ಎಂ.ಮಹೇಶ್, ಮುಖಂಡರಾದ ಜಿ.ಡಿ.ಮಂಜುನಾಥ್‌, ನಾಗಪ್ಪ ನೇದರವಳ್ಳಿ ಹಾಜರಿದ್ದರು. 

ಬಾಪೂಜಿ ನಗರ ಸರ್ಕಾರಿ ಪ್ರಥಮ ದರ್ಜೆ ಕಾಲೇಜು: 

ನಗರದ ಬಾಪೂಜಿನಗರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಕ್ರೀಡೆ, ಸಾಂಸ್ಕೃತಿಕ, ರಾಷ್ಟ್ರೀಯ ಸೇವಾ ಯೋಜನೆ, ರೋವರ್ಸ್ ಮತ್ತು ರೇಂಜರ್ಸ್, ರೆಡ್ ಕ್ರಾಸ್ ಸಹಯೋಗದಲ್ಲಿ ಸ್ವಾತಂತ್ರ್ಯ ದಿನ ಆಚರಿಸಲಾಯಿತು. ಪ್ರಾಂಶುಪಾಲ ಪ್ರೊ. ಶಶಿಧರ್ ಧ್ವಜಾರೋಹಣ ನೆರವೇರಿಸಿದರು. ರಾಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥ ಪ್ರೊ. ರಾಜಕುಮಾರ ಮಾತನಾಡಿದರು.‌ ಕ್ರೀಡಾ ವಿಭಾಗದ ನಿರ್ದೇಶಕ ಎಚ್.ಟಿ ಜಯಕೀರ್ತಿ ಕಾರ್ಯಕ್ರಮ ನಿರ್ವಹಿಸಿದರು. ಪಠ್ಯೇತರ ಚಟುವಟಿಕೆ ಸಂಚಾಲಕ ಅಣ್ಣಪ್ಪ ಎನ್. ಮಳೀಮಠ್, ಡಾ. ಸೋಮಶೇಖರ್, ಸುಧಾಕರ್, ಜಾಹ್ನವಿ, ಪ್ರಸನ್ನ ಎಸ್.ಎಚ್, ಚಂದ್ರಶೇಖರ, ಕೆ.ಪಿ.ಪವಿತ್ರ, ಗಂಧರ್ವ ಹಾಜರಿದ್ದರು. 

ಭಾರತೀಯ ವೈದ್ಯಕೀಯ ಸಂಘ: 

ಸಂಘದ ಶಿವಮೊಗ್ಗ ಶಾಖೆಯಲ್ಲಿ ಸ್ವಾತಂತ್ರ್ಯ ದಿನ ಆಚರಿಸಲಾಯಿತು. ಮುಖ್ಯ ಅತಿಥಿಯಾಗಿದ್ದ ಡಾ.ಎಸ್.ಬಿ.ಹೆಗ್ಡೆ, ದೇಶದ ವೈದ್ಯಕೀಯ ವಲಯದಲ್ಲಿನ ಬದಲಾವಣೆ ಬಗ್ಗೆ ಸೂಕ್ಷ್ಮವಾಗಿ ತಿಳಿಸಿದರು. 

ಇದೇ ವೇಳೆ ಭಾರತೀಯ ಸೇನೆಯಲ್ಲಿ ಕಾರ್ಯನಿರ್ವಹಿಸಿದ ವೈದ್ಯರಾದ ಕರ್ನಲ್ ಎಸ್‌.ರಘುನಾಥ್, ಮೇಜರ್ ಪಿ.ಕೆ.ಲಕ್ಷ್ಮಿ ಹಾಗೂ ಮೇಜರ್ ವಿ.ವೈ.ಅಭಿಜಿತ್ ಅವರನ್ನು ಸನ್ಮಾನಿಸಲಾಯಿತು. 

ಸಂಘದ ಅಧ್ಯಕ್ಷ ಡಾ.ಎಸ್.ಶ್ರೀಧರ, ಕಾರ್ಯದರ್ಶಿ ಡಾ. ವಿನಯ ಶ್ರೀನಿವಾಸ್, ಖಜಾಂಚಿ ಡಾ.ಯು.ಎಚ್. ರಾಜಾರಾಮ್, ಡಾ.ನಾಗಭೂಷಣ್ ಉಪಸ್ಥಿತರಿದ್ದರು. 

ಗುತ್ಯಪ್ಪ ಕಾಲೊನಿ ಸರ್ಕಾರಿ ಶಾಲೆ: 

ಶಿವಮೊಗ್ಗದ ಗುತ್ಯಪ್ಪ ಕಾಲೊನಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮ ನಡೆಯಿತು. ಎಸ್‌ಡಿಎಂಸಿ ಅಧ್ಯಕ್ಷ ಅಮೀರ್ ಪಾಷಾ, ನಾಮ ನಿರ್ದೇಶಿತ ಸದಸ್ಯರಾದ ಕೆ.ಪಿ. ಶ್ರೀಪಾಲ್, ರೌಂಡ್‌ ಟೇಬಲ್ ಅಧ್ಯಕ್ಷ ಗಗನ್, ನಿವೃತ್ತ ಪ್ರಾಂಶುಪಾಲ ಭುಜಂಗಪ್ಪ, ನಿವೃತ್ತ ಶಿಕ್ಷಕಿ ಸುಶೀಲಾ, ಮುಖ್ಯ ಶಿಕ್ಷಕಿ ಎ.ಪಿ.ರುಕ್ಮಿಣಿ, ಸಹಶಿಕ್ಷಕಿ ಭಾಗೀರಥಿ ಪಾಲ್ಗೊಂಡಿದ್ದರು.  

ಕಟೀಲ್ ಅಶೋಕ ಪೈ ಸ್ಮಾರಕ ಕಾಲೇಜು: 

ಶಿವಮೊಗ್ಗದ ಮಾನಸ ಟ್ರಸ್ಟ್‌ನ ಕಟೀಲ್ ಅಶೋಕ ಪೈ ಸ್ಮಾರಕ ಕಾಲೇಜು ವತಿಯಿಂದ ನಡೆದ ಕಾರ್ಯಕ್ರಮದಲ್ಲಿ ಪ್ರಾಂಶುಪಾಲೆ ಡಾ.ಸಂಧ್ಯಾ ಕಾವೇರಿ ಧ್ವಜಾರೋಹಣ ನೆರವೇರಿಸಿದರು. ಶೈಕ್ಷಣಿಕ ನಿರ್ದೇಶಕ ಪ್ರೊ.ರಾಜೇಂದ್ರ ಚೆನ್ನಿ, ಆಡಳಿತಾಧಿಕಾರಿಗಳಾದ ಪ್ರೊ.ರಾಮಚಂದ್ರ ಬಾಳಿಗಾ, ಐಕ್ಯುಎಸಿ ಸಂಯೋಜಕಿ ಅರ್ಚನಾ ಭಟ್, ಎನ್‌ಎಸ್‌ಎಸ್ ಕಾರ್ಯಕ್ರಮಾಧಿಕಾರಿಗಳಾದ ಸುಕೀರ್ತಿ, ಆರ್.ಮೋಹನ್‌ಕುಮಾರ್ ಉಪಸ್ಥಿತರಿದ್ದರು.

ಶಿವಮೊಗ್ಗದ ಬಾಪೂಜಿ ನಗರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಸ್ವಾತಂತ್ರ್ಯ ದಿನ ಆಚರಿಸಲಾಯಿತು
ಶಿವಮೊಗ್ಗದ ಗುತ್ಯಪ್ಪ ಕಾಲೊನಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಸ್ವಾತಂತ್ರ್ಯ ದಿನ ಆಚರಿಸಲಾಯಿತು
ಶಿವಮೊಗ್ಗದ ಐಎಂಎ ವತಿಯಿಂದ ನಡೆದ ಸ್ವಾತಂತ್ರ್ಯ ದಿನಾಚರಣೆ ಸಮಾರಂಭದಲ್ಲಿ ಸಾಧಕರನ್ನು ಸನ್ಮಾನಿಸಲಾಯಿತು
ಶಿವಮೊಗ್ಗದ ಕಟೀಲ್ ಅಶೋಕ ಪೈ ಸ್ಮಾರಕ ಕಾಲೇಜಿನಲ್ಲಿ ಸ್ವಾತಂತ್ರ್ಯ ದಿನ ಆಚರಿಸಲಾಯಿತು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.