ADVERTISEMENT

ಜೀವ ವೈವಿಧ್ಯ ಸಂರಕ್ಷಣೆಗೆ ಒತ್ತು: ಅಶೀಸರ ಸಲಹೆ

ಜೀವವೈವಿಧ್ಯ ಮಂಡಳಿಯ ವಿಶೇಷ ಸಭೆ: ಬೀಳ್ಕೊಡುಗೆ ಸಮಾರಂಭ

​ಪ್ರಜಾವಾಣಿ ವಾರ್ತೆ
Published 16 ಸೆಪ್ಟೆಂಬರ್ 2022, 4:18 IST
Last Updated 16 ಸೆಪ್ಟೆಂಬರ್ 2022, 4:18 IST
ಬೆಂಗಳೂರು ಜೀವವೈವಿಧ್ಯ ಮಂಡಳಿ ಕಚೇರಿಯಲ್ಲಿ ನಡೆದ ಮಂಡಳಿಯ ವಿಶೇಷ ಸಭೆಯಲ್ಲಿ ನಿಕಟಪೂರ್ವ ಅಧ್ಯಕ್ಷ ಅನಂತಹೆಗಡೆ ಅಶೀಸರ ಅವರನ್ನು ನೂತನ ಅಧ್ಯಕ್ಷ ರವಿ ಕಾಳಪ್ಪ ಗೌರವಿಸಿ ಬೀಳ್ಕೊಟ್ಟರು.
ಬೆಂಗಳೂರು ಜೀವವೈವಿಧ್ಯ ಮಂಡಳಿ ಕಚೇರಿಯಲ್ಲಿ ನಡೆದ ಮಂಡಳಿಯ ವಿಶೇಷ ಸಭೆಯಲ್ಲಿ ನಿಕಟಪೂರ್ವ ಅಧ್ಯಕ್ಷ ಅನಂತಹೆಗಡೆ ಅಶೀಸರ ಅವರನ್ನು ನೂತನ ಅಧ್ಯಕ್ಷ ರವಿ ಕಾಳಪ್ಪ ಗೌರವಿಸಿ ಬೀಳ್ಕೊಟ್ಟರು.   

ಶಿವಮೊಗ್ಗ: ಅರಣ್ಯೇತರ ಉದ್ದೇಶಕ್ಕೆ ಅರಣ್ಯ ಪ್ರದೇಶ ಮಂಜೂರು ವೇಳೆ ಕೇವಲ ದೊಡ್ಡ ಮರಗಳನ್ನು ಮಾತ್ರ ಲೆಕ್ಕ ಮಾಡಲಾಗುತ್ತದೆ. ಆದರೆ, ಅರಣ್ಯದಲ್ಲಿರುವ ಅಪಾರ ಜೀವ ವೈವಿಧ್ಯ ನಾಶವಾಗುತ್ತವೆ ಎಂಬುದನ್ನು ಪರಿಗಣಿಸಬೇಕು. ಈ ವಿಷಯವನ್ನು ರಾಜ್ಯ, ಕೇಂದ್ರ ಅರಣ್ಯ ಸಚಿವರ, ಎನ್‍ಬಿಎ ಗಮನಕ್ಕೆ ಮಂಡಳಿ ತರಬೇಕು ಎಂದು ಜೀವ ವೈವಿಧ್ಯ ಮಂಡಳಿ ನಿಕಟಪೂರ್ವ ಅಧ್ಯಕ್ಷ ಅನಂತ ಹೆಗಡೆ ಅಶೀಸರ ಹೇಳಿದರು.

ಬೆಂಗಳೂರಿನಲ್ಲಿ ನಡೆದ ಜೀವವೈವಿಧ್ಯ ಮಂಡಳಿಯ ವಿಶೇಷ ಸಭೆಯಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ಪಶ್ಚಿಮ ಘಟ್ಟದಲ್ಲಿ ಪರಿಸರಕ್ಕೆ ಮಾರಕ ಬೃಹತ್ ಯೋಜನೆಗಳಿಗೆ ಅನುಮತಿ ನೀಡದಂತೆ, ಹಸಿರು ಬಜೆಟ್, ಭೂಕುಸಿತಅಧ್ಯಯನ ವರದಿಯ ಅನುಷ್ಠಾನಗೊಳಿಸಲು ಸರ್ಕಾರಕ್ಕೆ ಶಿಫಾರಸ್ಸು ಸೇರಿದಂತೆ ರಾಜ್ಯ ಜೀವವೈವಿಧ್ಯ ಮಂಡಳಿ ಇಲ್ಲಿಯವರೆ ಆಯೋಜಿಸಿರುವ ಕ್ರಿಯಾಶೀಲ ಕಾರ್ಯಕ್ರಮಗಳ ಕುರಿತು ಉಲ್ಲೇಖಿಸಿದರು.

ಗ್ರಾಮ ಪಂಚಾಯ್ತಿ ಮಟ್ಟದಲ್ಲಿ ಜೀವವೈವಿಧ್ಯ ಸಮಿತಿಗಳ ಪುನರ್ರಚನೆ, ಸಂಸದರು, ಶಾಸಕರು, ವಕೀಲರು, ನ್ಯಾಯಾಧೀಶರಿಗೆ ಜೀವವೈವಿಧ್ಯ ಕಾಯಿದೆ ಮಹತ್ವದ ಕುರಿತು ಇನ್ನಷ್ಟು ಮಾಹಿತಿ ನೀಡುವುದು. ಯಾದಗಿರಿ ಜಿಲ್ಲೆಯಲ್ಲಿನ ಜೈವಿಕ ತಾಣಗಳ ಘೋಷಣೆ, ಖಾನಾಪುರತಾಲ್ಲೂಕು ಕುಣಕುಂಬಿ ಮಲಪ್ರಭಾ ನದಿ ಮೂಲಕ್ಕೆ ಜೀವ ವೈವಿಧ್ಯ ಮಾನ್ಯತೆ, ಸರ್ಕಾರ ಘೋಷಿಸಿರುವ 2.3 ಲಕ್ಷ ಹೆಕ್ಟೇರ್ಡೀಮ್ಡ್ ಅರಣ್ಯದ ರಕ್ಷಣೆಗೆ ಅನುದಾನ ನೀಡಲು ಮಂಡಳಿ ಮುಖ್ಯಮಂತ್ರಿಗೆ ಶಿಫಾರಸು ಮಾಡಬೇಕು. ಜಿಲ್ಲಾ ಮಟ್ಟದಲ್ಲಿಜೀವವೈವಿಧ್ಯ ಪ್ರಶಸ್ತಿ ನೀಡಿಕೆ, 6,000 ಪಂಚಾಯ್ತಿಗಳಲ್ಲಿ ಜೀವವೈವಿಧ್ಯ ಅಭಿಯಾನ, ರಾಜ್ಯದ 15 ಸ್ಥಳಗಳನ್ನು ಪಾರಂಪರಿಕ ಜೀವವೈವಿಧ್ಯ ತಾಣ ಎಂದು ಘೋಷಣೆ, ಜಿಲ್ಲಾಧಿಕಾರಿ ಮಟ್ಟದಲ್ಲಿ ಪ್ರಗತಿ ಪರೀಶೀಲನಾ ಸಭೆ, ಮಾದರಿ ಜೀವವೈವಿಧ್ಯತಾ ಸಮಿತಿ ಯೋಜನೆ, ಮತ್ಸ್ಯಧಾಮಗಳ ಘೋಷಣೆ, ಪಾರಂಪರಿಕ ವೃಕ್ಷಗಳ ಘೋಷಣೆ, ಜೀವವೈವಿಧ್ಯ ಕಾಯಿದೆ ಜಾರಿಗೆ ಒತ್ತಾಯಿಸಿದರು.

ADVERTISEMENT

ಮಂಡಳಿಯ ನೂತನ ಅಧ್ಯಕ್ಷ ರವಿ ಕಾಳಪ್ಪ ಅವರು ಅಧ್ಯಕ್ಷತೆ ವಹಿಸಿದ್ದರು. ಪಿ.ಸಿ.ಸಿ.ಎಫ್ ಆರ್.ಕೆ.ಸಿಂಗ್, ಪರಿಸರ ಇಲಾಖೆ ಪ್ರಧಾನ ಕಾರ್ಯದರ್ಶಿ ಡಾ.ವಿಜಯ ಮೋಹನರಾಜ್, ಆಯುಷ್ ಆಯುಕ್ತ ಡಾ.ರಾಮಚಂದ್ರ, ಪಂಚಾಯತ್‌ ರಾಜ್ ಇಲಾಖೆ ನಿರ್ದೆಶಕ ಯಾಲಕ್ಕಿ ಗೌಡ, ಪೊನ್ನಂಪೇಟೆ ಅರಣ್ಯ ಕಾಲೇಜಿನ ಡೀನ್ ಡಾ.ಕುಶಾಲಪ್ಪ, ಕಡಲ ಪರಿಸರ ವಿಜ್ಞಾನಿ ಡಾ.ಪ್ರಕಾಶ ಮೇಸ್ತ, ಮಂಡಳಿ ಸದಸ್ಯ ಕೆ.ವೆಂಕಟೇಶ, ಮಂಡಳಿ ಸದಸ್ಯಕಾರ್ಯದರ್ಶಿ ಅನಿತಾ ಅರೇಕಲ್ ಹಾಗೂ ಕೃಷಿ ಮತ್ತು ಆರೋಗ್ಯ ಇಲಾಖೆ ಅಧಿಕಾರಿಗಳು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.