ADVERTISEMENT

ಬಣವೆಗೆ ಬೆಂಕಿ: ಲಕ್ಷಾಂತರ ಮೌಲ್ಯದ ಭತ್ತ ನಾಶ

​ಪ್ರಜಾವಾಣಿ ವಾರ್ತೆ
Published 9 ಜನವರಿ 2022, 14:17 IST
Last Updated 9 ಜನವರಿ 2022, 14:17 IST
ಕುಂಸಿ ಸಮೀಪದ ಹೊಸೂರಿನಲ್ಲಿ ಭಾನುವಾರ ಭತ್ತದ ಬಣವೆಗೆ ಬೆಂಕಿ ತಗುಲಿ ಲಕ್ಷಾಂತರ ಮೌಲ್ಯದ ಭತ್ತದ ಬೆಳೆ ನಾಶವಾಗಿರುವುದು
ಕುಂಸಿ ಸಮೀಪದ ಹೊಸೂರಿನಲ್ಲಿ ಭಾನುವಾರ ಭತ್ತದ ಬಣವೆಗೆ ಬೆಂಕಿ ತಗುಲಿ ಲಕ್ಷಾಂತರ ಮೌಲ್ಯದ ಭತ್ತದ ಬೆಳೆ ನಾಶವಾಗಿರುವುದು   

ಕುಂಸಿ:ಸಮೀಪದ ಹೊಸೂರಿನಲ್ಲಿಭಾನುವಾರ ಬೆಳಿಗ್ಗೆ ಜಮೀನಿನಲ್ಲಿದ್ದ ಭತ್ತದ ಬಣವೆಗೆಬೆಂಕಿ ತಗುಲಿ ಲಕ್ಷಾಂತರ ಮೌಲ್ಯದ ಭತ್ತದ ಬೆಳೆ ಹಾಗೂ ಹುಲ್ಲು ನಾಶವಾಗಿದೆ.

ಜಮೀನು ಮಾಲೀಕ ಹಾಗೂ ಗ್ರಾಮಸ್ಥರು ಬೆಂಕಿ ಆರಿಸಲು ಮುಂದಾದರೂ ಪ್ರಯೋಜನವಾಗಲಿಲ್ಲ. ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿ ನಂದಿಸಿದರು.

‘ಮೂರು ಎಕರೆಯಲ್ಲಿ ಬೆಳೆದಿದ್ದ ಭತ್ತವನ್ನು ಕೊಯ್ಲು ಮಾಡಿ, ಸಂಗ್ರಹಿಸಿದ್ದೆವು. ಬಣವೆಗೆ ಬೆಂಕಿ ಬಿದ್ದು, ಭತ್ತದ ಬೆಳೆ ಮತ್ತು ಹುಲ್ಲು ಸುಟ್ಟಿದೆ. ₹ 3 ಲಕ್ಷ ನಷ್ಟವಾಗಿದೆ’ ಎಂದು ಜಮೀನಿನ ಮಾಲಿಕಗುತ್ಯಮ್ಮ ಮಾಲತೇಶ ತಿಳಿಸಿದ್ದಾರೆ.

ADVERTISEMENT

ಸ್ಥಳಕ್ಕೆ ಬಂದ ಕಂದಾಯ ಅಧಿಕಾರಿ ಹಾಗೂ ಕೃಷಿ ಅಧಿಕಾರಿಗಳು ಸಮೀಕ್ಷೆ ನಡೆಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.