ಶಿವಮೊಗ್ಗ: ಇಲ್ಲಿನ ಬಿ.ಎಚ್.ರಸ್ತೆಯ ಫುಟ್‌ಪಾತ್‌ನಲ್ಲಿ ದುಷ್ಕರ್ಮಿಗಳು ಮರಗಳನ್ನು ಕಡಿದು ಹಾಕಿದ್ದ ಜಾಗದಲ್ಲಿಯೇ ಅರಣ್ಯ ಇಲಾಖೆಯಿಂದ ಮತ್ತೆ ಗಿಡಗಳನ್ನು ಗುರುವಾರ ನೆಡಲಾಯಿತು.
ಶಂಕರ ವಲಯದ ಆರ್‌ಎಫ್‌ಒ ವಿಜಯಕುಮಾರ್ ಹಾಗೂ ಡಿಆರ್‌ಎಫ್‌ಒ ನರೇಂದ್ರ ನೇತೃತ್ವದಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ಗಿಡ ನೆಟ್ಟರು.
ಅಧಿಕಾರಿಗಳು ಸ್ವತಃ ಹಾರೆ, ಪಿಕಾಸಿ ಹಿಡಿದು ಗುಂಡಿ ತೋಡಿ ಮರಕಡಿದ ಜಾಗ ಅಲ್ಲದೇ ಅಕ್ಕಪಕ್ಕದ ಜಾಗದಲ್ಲೂ 10 ಗಿಡಗಳನ್ನು ನೆಟ್ಟರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.