ADVERTISEMENT

‘ಟೈಸನ್‌’ ಶ್ವಾನದ ಜನ್ಮದಿನ: 150 ಮಂದಿಗೆ ಬಿರಿಯಾನಿ ಊಟ

​ಪ್ರಜಾವಾಣಿ ವಾರ್ತೆ
Published 15 ಜನವರಿ 2022, 15:55 IST
Last Updated 15 ಜನವರಿ 2022, 15:55 IST
‘ಟೈಸನ್‌’ ಸಾಕು ನಾಯಿಯ ಮೊದಲ ವರ್ಷದ ಹುಟ್ಟುಹಬ್ಬ ಆಚರಿಸಿದ ಶಿವಮೊಗ್ಗದ ರಾಗಿಗುಡ್ಡದ ನಿವಾಸಿ ಮಹಮದ್ ಅಯಾಜ್
‘ಟೈಸನ್‌’ ಸಾಕು ನಾಯಿಯ ಮೊದಲ ವರ್ಷದ ಹುಟ್ಟುಹಬ್ಬ ಆಚರಿಸಿದ ಶಿವಮೊಗ್ಗದ ರಾಗಿಗುಡ್ಡದ ನಿವಾಸಿ ಮಹಮದ್ ಅಯಾಜ್   

ಶಿವಮೊಗ್ಗ: ತಾವು ಸಾಕಿರುವ ಶ್ವಾನದ ಹುಟ್ಟುಹಬ್ಬವನ್ನು ಅದ್ದೂರಿಯಾಗಿ ಆಚರಿಸಿದ ಶ್ವಾನಪ್ರಿಯರೊಬ್ಬರು ಶ್ವಾನಕ್ಕೆ ಬೆಲೆಬಾಳುವ ಉಡುಗೊರೆ ನೀಡಿದ್ದಾರೆ.

ಇಲ್ಲಿನ ರಾಗಿಗುಡ್ಡದ ನಿವಾಸಿ ಮಹಮದ್ ಅಯಾಜ್ ಅವರು ಸೈಬೀರಿಯನ್ ಹಸ್ಕಿ ತಳಿಯ ಶ್ವಾನವೊಂದನ್ನು ಸಾಕಿದ್ದಾರೆ. ಅದಕ್ಕೆ ‘ಟೈಸನ್’ ಎಂದು ಹೆಸರಿಟ್ಟಿದ್ದಾರೆ. ಜ.13ರಂದು ‘ಟೈಸನ್‌’ಗೆ ಮೊದಲ ವರ್ಷದ ಹುಟ್ಟುಹಬ್ಬವನ್ನು ಅದ್ದೂರಿಯಾಗಿ ಆಚರಿಸಿದ್ದಾರೆ.

150 ಮಂದಿಗೆ ಬಿರಿಯಾನಿ ಊಟ: ಟೈಸನ್ ಮೊದಲ ವರ್ಷದ ಹುಟ್ಟುಹಬ್ಬಕ್ಕಾಗಿ ಮಹಮದ್ ಅಯಾಜ್ ಅವರು ಮನೆ ಬಳಿ ಪೆಂಡಾಲ್ ಹಾಕಿಸಿ, ನಾಯಿಯಿಂದ ಕೇಕ್ ಕಟ್ ಮಾಡಿಸಿದರು. ಸ್ನೇಹಿತರು, ಸ್ಥಳೀಯರಿಗೆ ಚಿಕನ್ ಬಿರಿಯಾನಿ ಊಟ ಹಾಕಿಸಿದ್ದಾರೆ. 150 ಮಂದಿ ಶ್ವಾನದ ಹುಟ್ಟುಹಬ್ಬದಲ್ಲಿ ಪಾಲ್ಗೊಂಡಿದ್ದರು.

ADVERTISEMENT

ಟೈಸನ್‌ಗೆ ಗಿಫ್ಟ್: ಟೈಸನ್‌ಗೆ ₹ 13 ಸಾವಿರ ಬೆಲೆ ಬಾಳುವ ಹಾಸಿಗೆಯನ್ನು ಉಡುಗೊರೆಯಾಗಿ ನೀಡಿದ್ದಾರೆ. ನಾಯಿ ಸಾಕಲು ಮನೆಯವರು ವಿರೋಧಿಸಿದ ಕಾರಣ ಟೈಸನ್‌ಗಾಗಿ ಮಹಮದ್ ಅಯಾಜ್ ಮನೆಯವರಿಂದ ಪ್ರತ್ಯೇಕವಾಗಿ ಉಳಿದುಕೊಂಡಿದ್ದಾರೆ.

‘ನಮ್ಮ ಮನೆಯಲ್ಲಿ ನಾಯಿ ಸಾಕಲು ವಿರೋಧವಿದೆ. ಹೀಗಾಗಿ ರಾಗಿಗುಡ್ಡದಲ್ಲಿ ಮನೆ ಮಾಡಿದ್ದೇನೆ. ಅಲ್ಲಿಯೇ ಟೈಸನ್ ಜೊತೆಗೆ ಇರುತ್ತೇನೆ. ನಿತ್ಯ ಮನೆಗೆ ಹೋಗಿ ಎಲ್ಲರನ್ನೂ ಮಾತನಾಡಿಸಿಕೊಂಡು ಬರುತ್ತೇನೆ. ಆದರೆ, ಇಲ್ಲಿ ಬಂದು ಉಳಿದುಕೊಳ್ಳುತ್ತೇನೆ. ಟೈಸನ್‌ ಎಂದರೆ ನನಗೆ ಪ್ರಾಣ’ ಎಂದು ಹೇಳುತ್ತಾರೆ ಮಹಮದ್ ಅಯಾಜ್.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.