ADVERTISEMENT

ಮಟ್ಕಾ, ಗಾಂಜಾ ದಂಧೆಯಲ್ಲಿ ಲಂಚ ಪಡೆದಿದ್ದರೆ ರಾಜಕೀಯ ನಿವೃತ್ತಿ: ಹಾಲಪ್ಪ ಹರತಾಳು

ಶಾಸಕ ಹಾಲಪ್ಪ ಹರತಾಳು ಸವಾಲು

​ಪ್ರಜಾವಾಣಿ ವಾರ್ತೆ
Published 24 ಆಗಸ್ಟ್ 2021, 7:37 IST
Last Updated 24 ಆಗಸ್ಟ್ 2021, 7:37 IST
ಎಚ್.ಹಾಲಪ್ಪ ಹರತಾಳು
ಎಚ್.ಹಾಲಪ್ಪ ಹರತಾಳು   

ಸಾಗರ: ‘ಮರಳು ಸಾಗಾಣಿಕೆ, ಮಟ್ಕಾ, ಗಾಂಜಾ ದಂಧೆಯಲ್ಲಿ ನಾನಾಗಲಿ, ನನ್ನ ಹಿಂಬಾಲಕರಾಗಲಿ ಒಂದು ರೂಪಾಯಿ ಲಂಚ ಪಡೆದಿರುವುದನ್ನು ಸಾಬೀತುಪಡಿಸಿದರೆ ನಾನು ರಾಜಕೀಯವಾಗಿ ನಿವೃತ್ತಿ ಘೋಷಿಸು ತ್ತೇನೆ’ ಎಂದು ಶಾಸಕ ಎಚ್.ಹಾಲಪ್ಪ ಹರತಾಳು ಸವಾಲು ಹಾಕಿದರು.

ಮಾಜಿ ಶಾಸಕ ಗೋಪಾಲಕೃಷ್ಣ ಬೇಳೂರು ಅವರು ಮಾಡಿರುವ ಟೀಕೆಗೆ ಸಂಬಂಧಿಸಿದಂತೆ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಪೊಲೀಸ್ ಇಲಾಖೆಯಲ್ಲಿ ನಾನು ಹಣ ತೆಗೆದುಕೊಂಡಿದ್ದೇನೆ ಎಂದು ಯಾರಾದರೂ ಹೇಳಿದರೆ ಅವರ ಬಾಯಲ್ಲಿ ಹುಳ ಬೀಳುತ್ತದೆ. ಈ ಹಿಂದೆ ಇಲಾಖೆಯಿಂದ ಲಂಚ ಪಡೆದು ಅಭ್ಯಾಸ ವಿದ್ದವರು ನಾನೂ ಲಂಚ ಕೇಳುತ್ತಿರ ಬಹುದು ಎಂದು ಭ್ರಮಿಸಿ ಆರೋಪ ಮಾಡುತ್ತಿದ್ದಾರೆ’ ಎಂದು ತಿರುಗೇಟು ನೀಡಿದ್ದಾರೆ.

‘ಮಟ್ಕಾ, ಲಿಕ್ಕರ್, ಮರಳು, ಗಾಂಜಾದವರಿಂದ ಹಣ ಪಡೆಯುವುದು ಎಂದರೆ ಅದೊಂದು ಹೇಸಿಗೆಯ ವಿಷಯ. ಆ ಹಣ ಮಲದಲ್ಲಿ ಇರುವಂತಹದ್ದು. ನನ್ನ ರಾಜಕೀಯ ಜೀವನದಲ್ಲಿ ಇಂತಹ ಮೂಲಗಳಿಂದ ಹಣ ಪಡೆಯುತ್ತೇನೆ ಎಂದು ಊಹಿಸಲೂ ಸಾಧ್ಯವಿಲ್ಲ. ಮಟ್ಕಾ, ಗಾಂಜಾ ನಿರ್ಮೂಲನೆ ಮಾಡುವಂತೆ ಪೊಲೀಸರಿಗೆ ಕಟ್ಟುನಿಟ್ಟಿನ ಸೂಚನೆ ನೀಡುತ್ತೇನೆ’ ಎಂದು ಹೇಳಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.