ADVERTISEMENT

ವಿವಿಧೆಡೆ ಜೋರು ಮಳೆ: ಹಲವೆಡೆ ಹಾನಿ

​ಪ್ರಜಾವಾಣಿ ವಾರ್ತೆ
Published 21 ಏಪ್ರಿಲ್ 2021, 5:14 IST
Last Updated 21 ಏಪ್ರಿಲ್ 2021, 5:14 IST
ಶಿವಮೊಗ್ಗದ ಮಿಳಘಟ್ಟದ ಮೂರನೇ ತಿರುವಿನಲ್ಲಿ ಮನೆ ಮೇಲೆ‌ ತೆಂಗಿನ‌ ಮರ ಬಿದ್ದಿರುವುದು.
ಶಿವಮೊಗ್ಗದ ಮಿಳಘಟ್ಟದ ಮೂರನೇ ತಿರುವಿನಲ್ಲಿ ಮನೆ ಮೇಲೆ‌ ತೆಂಗಿನ‌ ಮರ ಬಿದ್ದಿರುವುದು.   

ಶಿವಮೊಗ್ಗ: ನಗರದಲ್ಲಿ ಸಂಜೆ ಸುರಿದ ಮಳೆಗೆ ಮಿಳಘಟ್ಟದಲ್ಲಿ ಮನೆಯ ಮೇಲೆ ತೆಂಗಿನ ಮರ ಬಿದ್ದಿದೆ.

ರಾಜಣ್ಣ ಎಂಬುವವರ ಮನೆ ಮೇಲೆ ಮರ ಬಿದ್ದಿದ್ದರಿಂದ, ಮನೆಗೆ ಹಾನಿಯಾಗಿದೆ. ಇನ್ನು ವಿದ್ಯುತ್ ತಂತಿ ತುಂಡಾಗಿದ್ದರಿಂದ ವಿದ್ಯುತ್ ಸಂಪರ್ಕ ಕಡಿತವಾಗಿದೆ.

ಆನಂದಪುರದಲ್ಲಿ ಜೋರು ಮಳೆಯಾಗಿದ್ದು, ಹೆದ್ದಾರಿ ಮೇಲೆ ಮರ ಉರುಳಿ ಬಿದ್ದಿದೆ. ಇದರಿಂದ ಹೆದ್ದಾರಿಯಲ್ಲಿ ವಾಹನ ಸಂಚಾರಕ್ಕೆ ತೊಡಕಾಗಿದೆ. ಸಿಡಿಲು ಬಡಿದು
ತೆಂಗಿನ ಮರವೊಂದಕ್ಕೆ ಬೆಂಕಿ ಹೊತ್ತಿಕೊಂಡಿದೆ.

ADVERTISEMENT

ರಿಪ್ಪನ್‌ಪೇಟೆ ಸಾಗರ ರಸ್ತೆಯ ವಿನಾಯಕ ನಗರದಲ್ಲಿ ಬೃಹತ್ ಗಾತ್ರದ ಮರಬಿದ್ದು ಅಂಗಡಿ ಮಳಿಗೆಗೆ ಹಾನಿಯಾಗಿದೆ. ಸಾಗರ ತೀರ್ಥಹಳ್ಳಿ ಮಾರ್ಗದ ವಾಹನ ಸಂಚಾರಕ್ಕೆ ಕೆಲಕಾಲ ಅಡಚಣೆಯಾಯಿತು. ತಕ್ಷಣವೇ ನಾಗರಿಕರು, ರಕ್ಷಣಾ ಇಲಾಖೆಯ ಸಿಬ್ಬಂದಿ ಸೇರಿ ಮರ ತೆರವುಗೊಳಿಸಿದರು.

ಗೌತಮಪುರದಲ್ಲಿ ಸಿಡಿಲು ಬಡಿದು ತೆಂಗಿನ ಮರಕ್ಕೆ ಬೆಂಕಿ ಹೊತ್ತಿಕೊಂಡಿದೆ. ಇದು ಜನರಲ್ಲಿ ಆತಂಕ ಮೂಡಿಸಿದೆ. ರಿಪ್ಪನ್‍ಪೇಟೆ ಸುತ್ತಮುತ್ತ ಮಂಗಳವಾರ ಆಲಿಕಲ್ಲು ಮಳೆಯಾಗಿದೆ. ಜೋರು ಮಳೆ ಮತ್ತು ಗಾಳಿಯ ರಭಸಕ್ಕೆ ವಿವಿಧೆಡೆ ಮನೆ ಮತ್ತು ವಾಹನಗಳಿಗೆ ಹಾನಿಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.