ಭದ್ರಾವತಿ: ನಗರದಲ್ಲಿ ಬುಧವಾರ ಸಂಜೆ ಗುಡುಗು ಸಹಿತ ಬಿರುಸಿನ ಮಳೆ ಸುರಿದಿದೆ.
ಒಂದು ಗಂಟೆಗೂ ಹೆಚ್ಚು ಕಾಲ ಸುರಿದ ಮಳೆಯಿಂದಾಗಿ ರಸ್ತೆ ಮೇಲೆ ನೀರು ಹರಿಯ ತೊಡಗಿತು.
ನಗರದ ಮುಖ್ಯರಸ್ತೆ, ಮಾರುಕಟ್ಟೆ ರಸ್ತೆಯ ಅಂಗಡಿಗಳ ಮುಂದೆ ನೀರು ಸಂಗ್ರಹಕೊಂಡು ಅಂಗಡಿಗಳ ಒಳಗೆ ನುಗ್ಗುವ ಭೀತಿ ಎದುರಾಗಿತ್ತು. ಮಳೆಯಿಂದಾಗಿ ವಾಹನಗಳ ಸಂಚಾರ ಅಸ್ತವ್ಯಸ್ಥಗೊಂಡಿದ್ದರಿಂದ ಸವಾರರು ಪರದಾಡುವಂತಾಯಿತು.
ಶಾಲೆ ಬಿಡುವ ವೇಳೆಗೆ ಮಳೆ ಪ್ರಾರಂಭವಾದ್ದರಿಂದ ಶಾಲಾ ವಿದ್ಯಾರ್ಥಿಗಳು ಮತ್ತು ಪಾಲಕರು ತೊಂದರೆ ಎದುರಿಸುವಂತಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.