ADVERTISEMENT

ಇತಿಹಾಸ, ಪರಂಪರೆ ದಾಖಲೀಕರಣ ಮುಂದಿನ ಪೀಳಿಗೆಗೆ ಸಹಕಾರಿ: ಹೊಂಬುಜ ಶ್ರೀ

ಕಾರ್ಯಾಗಾರಕ್ಕೆ ಚಾಲನೆ ನೀಡಿದ ಹೊಂಬುಜ ಶ್ರೀ

​ಪ್ರಜಾವಾಣಿ ವಾರ್ತೆ
Published 28 ಮಾರ್ಚ್ 2021, 4:53 IST
Last Updated 28 ಮಾರ್ಚ್ 2021, 4:53 IST
ರಿಪ್ಪನ್‌ಪೇಟೆಯ ಹೊಂಬುಜ ಜೈನ ಮಠದಲ್ಲಿ ಶನಿವಾರ ಹಮ್ಮಿಕೊಂಡಿದ್ದ ರಾಜ್ಯ ಮಟ್ಟದ ಕಾರ್ಯಾಗಾರದಲ್ಲಿ ಹೊಂಬುಜ ಶ್ರೀ ಮಾತನಾಡಿದರು
ರಿಪ್ಪನ್‌ಪೇಟೆಯ ಹೊಂಬುಜ ಜೈನ ಮಠದಲ್ಲಿ ಶನಿವಾರ ಹಮ್ಮಿಕೊಂಡಿದ್ದ ರಾಜ್ಯ ಮಟ್ಟದ ಕಾರ್ಯಾಗಾರದಲ್ಲಿ ಹೊಂಬುಜ ಶ್ರೀ ಮಾತನಾಡಿದರು   

ಹೊಂಬುಜ (ರಿಪ್ಪನ್‌ಪೇಟೆ):ಜೈನ ಧರ್ಮದ ಪುರಾತನ ಇತಿಹಾಸ, ಪರಂಪರೆ ಜತೆಗೆ ಇತಿಹಾಸವನ್ನು ಮುಂದಿನ ಪೀಳಿಗೆಗೆ ತಿಳಿಸುವ ನಿಟ್ಟಿನಲ್ಲಿ ಪ್ರತಿ ಘಟನೆಯನ್ನೂ ದಾಖಲಿಸುವುದು ವರ್ತಮಾನದ ಅಗತ್ಯ ಎಂದು ಹೊಂಬುಜ ಜೈನ ಮಠದ ಪೀಠಾಧಿಕಾರಿ ಡಾ.ದೇವೇಂದ್ರಕೀರ್ತಿ ಭಟ್ಟಾರಕ ಪಟ್ಟಾಚಾರ್ಯ ವರ್ಯ ಸ್ವಾಮೀಜಿ ಹೇಳಿದರು.

ಕರ್ನಾಟಕ ರಾಜ್ಯ ಜೈನ ಪುರಾತತ್ವ ಹಾಗೂ ಸಾಹಿತ್ಯ ಪರಿಷತ್ತಿನಿಂದ ಹಮ್ಮಿಕೊಂಡಿದ್ದ ರಾಜ್ಯಮಟ್ಟದ ಎರಡು ದಿನಗಳ ಕ್ಷೇತ್ರ ಕಾರ್ಯಾವಲಂಬಿತ ಕಾರ್ಯಾಗಾರಕ್ಕೆ ಶನಿವಾರ ಚಾಲನೆ ನೀಡಿ ಮಾತನಾಡಿದರು.

ಸಮಾಜವನ್ನು ಮುನ್ನಡೆಸಿ, ಮಾರ್ಗದರ್ಶನಗೈದ ಭಟ್ಟಾರಕರ ಪರಂಪರೆಯನ್ನು ದಾಖಲೀಕರಿಸುವ ಮಹತ್ವದ ಬಗ್ಗೆ ಸ್ವಾಮೀಜಿ ವಿವರಿಸಿದರು.

ADVERTISEMENT

ಪರಿಷತ್ತಿನ ಅಧ್ಯಕ್ಷ ಹಾಗೂ ಗೆಜೆಟಿಯರ್ ಯೋಜನೆಯ ಸಂಯೋಜಕ ಡಾ.ಅಜಿತ ಮುರುಗುಂಡೆ ಪ್ರಾಸ್ತಾವಿಕವಾಗಿ
ಮಾತನಾಡಿದರು.

ಯೋಜನೆ ನಿರ್ದೇಶಕ ಡಾ.ಅಪ್ಪಣ್ಣ ಎನ್.ಹಂಜೆ, ಯೋಜನೆಯ ರೂಪುರೇಷೆಗಳು ಹಾಗೂ ಶ್ರೀಕ್ಷೇತ್ರದ ಜೈನ ಶಾಸನಗಳು, ಬಸದಿಗಳು ಹಾಗೂ ಶಿಲ್ಪಗಳಿಗೆ ಸಂಬಂಧಿಸಿದಂತೆ ಕೈಗೊಳ್ಳಲಿರುವ ಕ್ಷೇತ್ರಕಾರ್ಯದ ರೂಪುರೇಷೆಗಳ ಬಗ್ಗೆ ವಿವರಿಸಿದರು.

ಶಾಸನ ತಜ್ಞರಾದ ಹುಬ್ಬಳ್ಳಿಯ ಹನುಮಾಕ್ಷಿ ಗೋಗಿ, ಇತಿಹಾಸ ಸಂಶೋಧಕ ಡಾ. ಸಂಕಂ ಗೋವರ್ಧನ ಸೇರಿ ರಾಜ್ಯದ ವಿವಿಧೆಡೆಯಜೈನ ಸಂಶೋಧಕರು ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.