ADVERTISEMENT

ಹೆಜ್ಜೇನು ಕಡಿದು ದಂಪತಿ ಸ್ಥಿತಿ ಗಂಭೀರ: ಮುಷ್ಕರದ ನಡುವೆಯೂ ವೈದ್ಯರಿಂದ ಚಿಕಿತ್ಸೆ

​ಪ್ರಜಾವಾಣಿ ವಾರ್ತೆ
Published 1 ಮಾರ್ಚ್ 2023, 8:05 IST
Last Updated 1 ಮಾರ್ಚ್ 2023, 8:05 IST
   

ಆನವಟ್ಟಿ (ಶಿವಮೊಗ್ಗ ಜಿಲ್ಲೆ): ಸಮೀಪದ ಹಿರೇ ಇಡಗೂಡು ಗ್ರಾಮದ ಕೃಷ್ಣಪ್ಪ (62) ಹಾಗೂ ರೇಣುಕಮ್ಮ(57) ದಂಪತಿಗೆ ಬುಧವಾರ ಹೆಜ್ಜೇನು ಕಡಿದಿದ್ದು, ಅವರ ಸ್ಥಿತಿ ಗಂಭೀರವಾಗಿತ್ತು . ಆನವಟ್ಟಿ ಸಮುದಾಯ ಆರೋಗ್ಯ ಕೇಂದ್ರದಲ್ಲಿ ತಕ್ಷಣಕ್ಕೆ ಸ್ಪಂದಿಸಿದ ವೈದ್ಯರು ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆ ಗಾಗಿ ಶಿಕಾರಿಪುರ ಆಸ್ಪತ್ರೆಗೆ 108 ವಾಹನದಲ್ಲಿ ಕಳುಹಿಸಿಕೊಟ್ಟರು.
.
ಕೃಷ್ಣಪ್ಪ ಹಾಗೂ ರೇಣುಕಮ್ಮ ದಂಪತಿ ಮನೆಯ ಹಿಂಭಾಗದಲ್ಲಿ ಬೇಲಿ ಸವರುವ ವೇಳೆ ಜೇನು ಕಡಿದಿದ್ದು, ಶಿಕಾರಿಪುರ ಆಸ್ಪತ್ರೆಯಲ್ಲಿ ಹೆಚ್ಚಿನ ಚಿಕಿತ್ಸೆ ನೀಡಿ, ಐಸಿಯುನಲ್ಲಿ ಇಟ್ಟಿದ್ದಾರೆ ಎಂದು ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ಪ್ರವೀಣ್ ಹಿರೇ ಇಡುಗೋಡ್ ಮಾಹಿತಿ ನೀಡಿದರು.

ಏಳನೇ ವೇತನ ಆಯೋಗ ಜಾರಿಗಾಗಿ,ಸರ್ಕಾರಿ ನೌಕರರ ಮುಷ್ಕರ ಇರುವುದರಿಂದ ಆನವಟ್ಟಿ ಆಸ್ಪತ್ರೆಯಲ್ಲಿ ಹೊರ ರೋಗಿ ವಿಭಾಗವನ್ನು ಬಂದ್ ಮಾಡಲಾಗಿದೆ. ಆದರೆ ವೈದ್ಯರು ದಂಪತಿಗೆ ತುರ್ತು ಚಿಕಿತ್ಸೆ ನೀಡಲು ಸ್ಪಂದಿಸಿದರು. ಆಸ್ಪತ್ರೆಯಲ್ಲಿ ಗರ್ಭಿಣಿಯನ್ನು ಚಿಕಿತ್ಸೆಗೆ ದಾಖಲು ಮಾಡಿಕೊಳ್ಳಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.