ಹೊಸನಗರ: ಸಾಲದ ಹೊರೆ ತಾಳದೇ ತಾಲ್ಲೂಕಿನ ಹರಿದ್ರಾವತಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹೀಲಗೋಡು ಗ್ರಾಮದ ರೈತ ದುರ್ಗಪ್ಪ(62) ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಶುಂಠಿ ಬೆಳೆಗಾಗಿ ತಾಲ್ಲೂಕಿನ ಪುರಪ್ಪೆಮನೆ ಪ್ರಗತಿ ಕೃಷ್ಣ ಗ್ರಾಮೀಣ ಬ್ಯಾಂಕ್‌ನಲ್ಲಿ ಸಾಲ ಮಾಡಿಕೊಂಡಿದ್ದರು. ಶುಂಠಿ ಬೆಳೆ, ಧಾರಣೆ ಎರಡೂ ಸಿಗದೇ ಆತ್ಮಹತ್ಯೆಗೆ ಶರಣಾದರು.
ಈ ಕುರಿತು ಮೃತರ ಪತ್ನಿ ಯಶೋಧ ಹೊಸನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.