ADVERTISEMENT

ಹೊಸನಗರ | ಭಾವದ ಸಾರ ಉಣಬಡಿಸಿದ ಕವಿ ಎಚ್ಎಸ್‌ವಿ: ಶಾಂತಾರಾಮ ಪ್ರಭು

​ಪ್ರಜಾವಾಣಿ ವಾರ್ತೆ
Published 2 ಜುಲೈ 2025, 15:41 IST
Last Updated 2 ಜುಲೈ 2025, 15:41 IST
ಹೊಸನಗರ ತಾಲ್ಲೂಕು ಕಾರಣಗಿರಿ ಸಿದ್ಧಿವಿನಾಯಕ ದೇವಸ್ಥಾನ ಸಭಾಂಗಣದಲ್ಲಿ ನಡೆದ ಎಚ್‌ಎಸ್‌ವಿ ಭಾವನಮನ ಕಾರ್ಯಕ್ರಮದಲ್ಲಿ ಹನಿಯ ರವಿ ಮಾತನಾಡಿದರು
ಹೊಸನಗರ ತಾಲ್ಲೂಕು ಕಾರಣಗಿರಿ ಸಿದ್ಧಿವಿನಾಯಕ ದೇವಸ್ಥಾನ ಸಭಾಂಗಣದಲ್ಲಿ ನಡೆದ ಎಚ್‌ಎಸ್‌ವಿ ಭಾವನಮನ ಕಾರ್ಯಕ್ರಮದಲ್ಲಿ ಹನಿಯ ರವಿ ಮಾತನಾಡಿದರು   

ಹೊಸನಗರ: ಕನ್ನಡ ನಾಡಿನ ಶ್ರೋತೃಗಳಿಗೆ ಭಾವದ ಸಾರ ಉಣಬಡಿಸಿದ ಕವಿ ಎಚ್‌ಎಸ್ ವೆಂಕಟೇಶಮೂರ್ತಿ. ಅವರು ನಮ್ಮ ನಡುವೆ ಇಲ್ಲದಿರುವುದು ಸಾಹಿತ್ಯ ಲೋಕಕ್ಕೆ ತುಂಬಲಾರದ ನಷ್ಟವಾಗಿದೆ. ಕನ್ನಡಕ್ಕೆ ಅನೇಕ ಕವಿತೆ, ನಾಟಕ ಸೇರಿದಂತೆ ಸಮೃದ್ಧ ಸಾಹಿತ್ಯವನ್ನು ಕೊಡುಗೆ ನೀಡಿದ ಅವರ ಸೇವೆ ಅಪಾರವಾಗಿದೆ ಎಂದು ಹಿರಿಯ ಸಾಹಿತಿ ಶಾಂತಾರಾಮ ಪ್ರಭು ಹೇಳಿದರು.

ತಾಲ್ಲೂಕಿನ ಕಾರಣಗಿರಿ ಸಿದ್ಧಿವಿನಾಯಕ ಸಭಾಭವನದಲ್ಲಿ ಗ್ರಾಮಭಾರತಿ ಟ್ರಸ್ಟ್, ರಾಷ್ಟ್ರೋತ್ಥಾನ ಬಳಗದ ಆಶ್ರಯದಲ್ಲಿ ನಡೆದ ಎಚ್.ಎಸ್. ವೆಂಕಟೇಶ ಮೂರ್ತಿ ಸ್ಮರಣೆ ಭಾವನಮನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ವಿವಿಧ ಗಾಯಕರು ಎಚ್ಎಸ್‌ವಿ ಅವರು ರಚಿಸಿದ ಗೀತೆಗಳ ಗಾಯನ ಕಾರ್ಯಕ್ರಮ ನಡೆಸಿಕೊಟ್ಟರು. ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಗಣೇಶಮೂರ್ತಿ ನಾಗರಕೊಡಿಗೆ, ರಾಷ್ಟ್ರೋತ್ಥಾನ ಬಳಗದ ಅಧ್ಯಕ್ಷ ನಳಿನಚಂದ್ರ, ಗ್ರಾಮಭಾರತಿ ಟ್ರಸ್ಟ್ ಅಧ್ಯಕ್ಷ ಹನಿಯ ರವಿ ಮತ್ತಿತರರು ಇದ್ದರು.

ADVERTISEMENT

ಪಕ್ಕವಾದ್ಯದಲ್ಲಿ ಸಾಗರದ ಪುಟ್ಟು, ಸುನಿಲ್ ಉಡುಪ ಸಹಕರಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.