ADVERTISEMENT

‘ಅತಿಥಿಗಳನ್ನು‌ ದೇವರಂತೆ ಕಾಣುವುದು‌ ಭಾರತೀಯ ಸಂಸ್ಕೃತಿ’: ಮಹಾಂತ ಸ್ವಾಮೀಜಿ

​ಪ್ರಜಾವಾಣಿ ವಾರ್ತೆ
Published 24 ಮೇ 2025, 16:07 IST
Last Updated 24 ಮೇ 2025, 16:07 IST
ಸೊರಬ ತಾಲ್ಲೂಕಿನ ಜಡೆ ಸಂಸ್ಥಾನ ಮಠದಲ್ಲಿ ಏಕಾದಶಿ ಪ್ರಯುಕ್ತ ಸಾಧು– ಸಂತರ ಸಮಾಗಮ ಸಭೆ ನಡೆಯಿತು
ಸೊರಬ ತಾಲ್ಲೂಕಿನ ಜಡೆ ಸಂಸ್ಥಾನ ಮಠದಲ್ಲಿ ಏಕಾದಶಿ ಪ್ರಯುಕ್ತ ಸಾಧು– ಸಂತರ ಸಮಾಗಮ ಸಭೆ ನಡೆಯಿತು   

ಸೊರಬ: ‘ಅತಿಥಿಗಳನ್ನು ದೇವರ ಸ್ವರೂಪದಲ್ಲಿ ಕಾಣುವ ಭಾರತೀಯ ಸಂಸ್ಕೃತಿಯು‌ ಜಗತ್ತಿನಲ್ಲಿ ಅತ್ಯಂತ ಶ್ರೇಷ್ಠವಾಗಿದೆ’ ಎಂದು ಜಡೆ ಸಂಸ್ಥಾನ ಮಠದ ಮಹಾಂತ ಸ್ವಾಮೀಜಿ ಹೇಳಿದರು.

ತಾಲ್ಲೂಕಿನ ಜಡೆ ಸಂಸ್ಥಾನ ಮಠದಲ್ಲಿ ಏಕಾದಶಿ ಪ್ರಯುಕ್ತ ಸಾಧು, ಸಂತರ ಸಮಾಗಮ ಸಭೆಯಲ್ಲಿ‌ ಅವರು ಮಾತನಾಡಿದರು.

‘ದೇಶದಲ್ಲಿ ಅನೇಕ ಸಾಧು, ಸಂತರು ಎಲೆಮರೆಯ ಕಾಯಿಯಂತೆ ಸಮಾಜ ಸುಧಾರಣೆಯಲ್ಲಿ ತೊಡಗಿದ್ದಾರೆ. ಆಧ್ಯಾತ್ಮಿಕ ವಿಚಾರಗಳನ್ನು ಒಳ್ಳೆಯ ಚಿಂತನೆ, ಸತ್ಸಂಗಗಳನ್ನು ಹೊಂದಿರುವ ಮಠ– ಮಾನ್ಯಗಳಲ್ಲಿ ಹಿಂದಿನಿಂದಲೂ ಅತಿಥಿಗಳಿಗೆ ಸತ್ಕಾರ ನೀಡುವ ಪರಂಪರೆ ಹೊಂದಿರುವುದು ವಿಶೇಷವಾಗಿದೆ’ ಎಂದು ತಿಳಿಸಿದರು.

ADVERTISEMENT

ಋಷಿಕೇಷಿಯ ಯೋಗಾಶ್ರಮದ ರುದ್ರದೇವ ಸ್ವಾಮೀಜಿ, ಜಡೆ ಮಠದ ಕೆಂಪಿನ ಸಿದ್ಧವೃಷಭೇಂದ್ರ ಸ್ವಾಮೀಜಿ ಮಾತನಾಡಿದರು. ಅಜ್ಜಂಪುರ ಶಿವಾನಂದಾಶ್ರಮದ ಚಿದಾನಂದಗಿರಿ, ಹೇಮಾಂಶು ರಾವತ್, ರವೀಂದ್ರ ಪ್ರಸಾದ್, ಬಸವರಾಜಗೌಡ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.