ADVERTISEMENT

ಇಂದ್ರಧನುಷ್ ಮಕ್ಕಳ ಆರೋಗ್ಯದ ಕವಚ

ಲಸಿಕಾ ಅಭಿಯಾನದಲ್ಲಿ ಜಿಲ್ಲಾ ಪಂಚಾಯಿತಿ ಸಿಇಒ ಎಂ.ಎಲ್.ವೈಶಾಲಿ ಬಣ್ಣನೆ

​ಪ್ರಜಾವಾಣಿ ವಾರ್ತೆ
Published 2 ಡಿಸೆಂಬರ್ 2019, 15:05 IST
Last Updated 2 ಡಿಸೆಂಬರ್ 2019, 15:05 IST

ಶಿವಮೊಗ್ಗ:ಮಾರಣಾಂತಿಕ ಕಾಯಿಲೆಗಳಿಂದ ರಕ್ಷಿಸಲು2ರಿಂದ 6 ವರ್ಷದ ಒಳಗಿನ ಮಕ್ಕಳಿಗೆ ಇಂದ್ರ ಧನುಷ್ ಕಾರ್ಯಕ್ರಮಮೂಲಕಕಡ್ಡಾಯವಾಗಿ ಲಸಿಕೆ ಹಾಕಲಾಗುತ್ತಿದೆ ಎಂದು ಜಿಲ್ಲಾ ಪಂಚಾಯಿತಿಸಿಇಒಎಂ.ಎಲ್.ವೈಶಾಲಿ ಹೇಳಿದರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಸಹಯೋಗದಲ್ಲಿ ತುಂಗಾನಗರ ಪ್ರಸೂತಿ ಕೇಂದ್ರದಲ್ಲಿಸೋಮವಾರ ಹಮ್ಮಿಕೊಂಡಿದ್ದಇಂದ್ರಧನುಷ್ ಲಸಿಕೆಅಭಿಯಾನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಮಾರಣಾತಿಂಕ ಕಾಯಿಲೆಗಳಿಗೆ ತುತ್ತಾಗುತ್ತಿರುವವರ ಸಂಖ್ಯೆ ಹೆಚ್ಚಾಗುತ್ತಿದೆ.ಮಕ್ಕಳಿಗೆ,ಗರ್ಭಿಣಿಯರಿಗೆ ಸಕಾಲದಲ್ಲಿ ಕೆಲವೊಂದು ಚುಚ್ಚುಮದ್ದು ನೀಡಿದರೆ ಅಂತಹಕಾಯಿಲೆಗಳಿಂದ ರಕ್ಷಣೆ ಸಿಗುತ್ತದೆ. ಪ್ರತಿಯೊಬ್ಬರೂ ನಿಯಮಿತವಾಗಿ ಲಸಿಕೆ ಪಡೆಯಬೇಕು.ಆಶಾ ಹಾಗೂ ಅಂಗನವಾಡಿ ಕಾರ್ಯಕರ್ತೆಯರು ಖಾತ್ರಿಪಡಿಸಬೇಕು. ಪ್ರತಿಯೊಬ್ಬರೂ ಲಸಿಕೆ ಹಾಕಿಕೊಳ್ಳುವಂತೆ ಮನ ಒಲಿಸಬೇಕು ಎಂದುಸಲಹೆ ನೀಡಿದರು.

ADVERTISEMENT

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ರಾಜೇಶ ಸುರಗಿಹಳ್ಳಿ ಮಾತನಾಡಿ, ಜಿಲ್ಲೆಯಲ್ಲಿ ಇಂದ್ರ ಧನುಷ್ ಪ್ರಥಮ ಹಂತ ಡಿಸೆಂಬರ್ 2ರಿಂದ ಆರಂಭವಾಗಲಿದೆ.ಎರಡನೇ ಹಂತ ಜನವರಿ 3ರಿಂದ, ಮೂರನೇ ಹಂತ ಫೆಬ್ರವರಿ 3ರಿಂದ ಮತ್ತು ಕೊನೆಯ ಹಂತ ಮಾರ್ಚ್ 2ರಿಂದ ಆರಂಭವಾಗಲಿದೆ. ಲಸಿಕೆ ವಂಚಿತ ಮಕ್ಕಳು ಹಾಗೂ ಗರ್ಭಿಣಿಯರನ್ನು ಮನೆ, ಮನೆ ಭೇಟಿ ಮೂಲಕ ಗುರುತಿಸಲಾಗುತ್ತಿದೆ.ಕ್ಷಯ, ದಡಾರ, ಹೈಪಟಿಟಿಸ್-ಬಿ ಮತ್ತಿತರ ಮಾರಣಾಂತಿಕ ಕಾಯಿಲೆ ಸಂಪೂರ್ಣವಾಗಿ ನಿರ್ಮೂಲನೆ ಮಾಡಲು ಲಸಿಕೆ ಅಗತ್ಯ. ಜಿಲ್ಲೆಯಲ್ಲಿ 17 ಗರ್ಭಿಣಿಯರು ಸೇರಿ 227 ಮಕ್ಕಳು ಲಸಿಕೆಯಿಂದ ವಂಚಿತರಾಗಿದ್ದಾರೆ ಎಂದರು.

ಡಾ.ಸತೀಶ್‍ಚಂದ್ರ,ಮಹಾನಗರ ಪಾಲಿಕೆ ಸದಸ್ಯೆ ಎಸ್.ಲಕ್ಷ್ಮಿ ಶಂಕರನಾಯ್ಕ,ಜಿಲ್ಲಾ ನೋಡಲ್ ಉಪ ನಿರ್ದೇಶಕ ಡಾ.ಜಗದೀಶ್, ಆರ್‌ಸಿಎಚ್ ಅಧಿಕಾರಿ ಡಾ.ನಾಗರಾಜ್, ತಾಲ್ಲೂಕುಆರೋಗ್ಯಧಿಕಾರಿ ಡಾ.ದಿನೇಶ್, ಜಿಲ್ಲಾ ಕುಟುಂಬ ಕಲ್ಯಾಣಾಧಿಕಾರಿ ಡಾ.ಮಂಜುನಾಥ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಉಪ ನಿರ್ದೇಶಕ ಶೇಷಪ್ಪ, ಶಿಶು ಅಭಿವೃದ್ಧಿ ಯೋಜನಾಧಿಕಾರಿ ಚಂದ್ರಪ್ಪ ಉಪಸ್ಥಿತರಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.