
ಸೊರಬ: ‘ಕನ್ನಡ ಭಾಷೆಯ ಇತಿಹಾಸ ಅರಿಯುವ ಮೂಲಕ ಕನ್ನಡತನ ಉಳಿಸಿ ಬೆಳೆಸುವಲ್ಲಿ ಪ್ರತಿಯೊಬ್ಬರೂ ಶ್ರಮಿಸಬೇಕಿದೆ’ ಎಂದು ರೋಟರಿ ಕ್ಲಬ್ ಸಂಸ್ಥಾಪಕ ಅಧ್ಯಕ್ಷ ಎಚ್.ಇ. ಜ್ಞಾನೇಶ್ ಹೇಳಿದರು.
ಪಟ್ಟಣದ ರಾಜ್ ಕಲಾಕ್ಷೇತ್ರದಲ್ಲಿ ಮಂಗಳವಾರ ಕರ್ನಾಟಕ ರಕ್ಷಣಾ ವೇದಿಕೆ ಅಪ್ಪುಸೇನೆಯಿಂದ ಹಮ್ಮಿಕೊಂಡಿದ್ದ 70ನೇ ವರ್ಷದ ರಾಜ್ಯಮಟ್ಟದ ಕರ್ನಾಟಕ ರಾಜ್ಯೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
‘ಕನ್ನಡ ಭಾಷೆಗೆ 2,000 ವರ್ಷಗಳ ದೀರ್ಘ ಮತ್ತು ಶ್ರೀಮಂತ ಇತಿಹಾಸವಿದೆ. ಶಿಲಾಯುಗದ ಕಾಲದಲ್ಲೇ ಕನ್ನಡ ಭಾಷೆ ಜನಿಸಿತ್ತು. ಕನ್ನಡದ ಉಳಿವಿಗಾಗಿ ಹಲವು ಕವಿಗಳು ಸಾಹಿತ್ಯ ಹಾಗೂ ಲೇಖನಗಳ ಮೂಲಕ ಅಪಾರ ಕೊಡುಗೆ ನೀಡಿದ್ದಾರೆ. ಬೇರೆ ಭಾಷೆಗಳನ್ನು ತಿರಸ್ಕರಿಸಬೇಕೆಂದಲ್ಲ. ಇಂದಿನ ಆಧುನಿಕ ಯುಗದಲ್ಲಿ ಉದ್ಯೋಗದ ದೃಷ್ಟಿಯಿಂದ ಅನ್ಯ ಭಾಷೆ ಅಗತ್ಯವಾದರೂ, ಪ್ರತಿ ಮನೆಯಲ್ಲೂ ಕನ್ನಡದಲ್ಲಿ ಮಾತನಾಡುವುದು ನಮ್ಮ ನಾಡು– ನುಡಿಯ ಉಳಿವಿಗೆ ಮೊದಲ ಹೆಜ್ಜೆ’ ಎಂದು ಹೇಳಿದರು.
ತಾಲ್ಲೂಕು ಬಗರ್‌ಹುಕುಂ ಸಮಿತಿ ಅಧ್ಯಕ್ಷ ಎಂ.ಡಿ ಶೇಖರ್ ಮಾತನಾಡಿದರು. ಇದಕ್ಕೂ ಮೊದಲು ಪಟ್ಟಣದ ರಂಗನಾಥ ದೇವಸ್ಥಾನದಿಂದ ವಿವಿಧ ಕಲಾ ತಂಡಗಳೊಂದಿಗೆ ಪುನೀತ್ ರಾಜ್‌ಕುಮಾರ್ ಭಾವಚಿತ್ರ ಹಾಗೂ ಪೂರ್ಣಕುಂಭ ಕಳಶ ಮೆರವಣಿಗೆ ನಡೆಯಿತು.
ತಾಲ್ಲೂಕು ಘಟಕದ ಅಧ್ಯಕ್ಷ ಮಂಜುನಾಥ್ ಉಪ್ಪಳ್ಳಿ ಅಧ್ಯಕ್ಷತೆ ವಹಿಸಿದ್ದರು. ಕಾನಕೇರಿ ಮಠದ ಅಮರೇಶ್ವರ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ರಾಜ್ಯ ಘಟಕದ ಅಧ್ಯಕ್ಷ ಆರ್. ವಿಜಯಕುಮಾರ್, ಎಸ್.ಎನ್.ಜಿ.ವಿ ಜಿಲ್ಲಾ ಘಟಕದ ಅಧ್ಯಕ್ಷೆ ಪ್ರಭಾವತಿ ಚಂದ್ರಕಾಂತ್, ನಾಗರಾಜ್ ಚಿಕ್ಕಸವಿ, ಅಜ್ಜಪ್ಪ ಕಾಸರಗುಪ್ಪೆ, ಚಂದ್ರಪ್ಪ ಹುಲ್ತಿಕೊಪ್ಪ, ಮಾಲತೇಶ್ ಲಕ್ಕೊಳ್ಳಿ, ಪ್ರವೀಣ್ ಹಿರೇಇಡಗೋಡು, ಮಹೇಶ್ ಖಾರ್ವಿ, ಮೆಹಬೂಬ್ ಅಲಿ, ಲಕ್ಷ್ಮಣಪ್ಪ ಸೀಗೇಹಳ್ಳಿ, ವಿರೇಶ್ ಗೌಡ, ಮಂಜಪ್ಪ ಕಡಸೂರು, ಸ್ವರೂಪ್ ಕೊಡಕಣಿ, ಶಿವಕುಮಾರ್ ಕಡಸೂರು, ಚಂದ್ರಪ್ಪ ಮಾಸ್ತರ್, ಏಜಸ್, ಎಚ್.ಜಿ ತಿಮ್ಮೇಗೌಡ, ರಾಮಾಚಾರಿ, ರವಿಕುಮಾರ್, ಸಂಪತ್ ಕುಮಾರ್, ಪವಿತ್ರಾ, ಜಯಮಾಲ, ಸದಾನಂದ ಗೌಡ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.