ಕಾರ್ಗಲ್ ಪಟ್ಟಣದ ಹೊರ ವಲಯದಲ್ಲಿ ಹಾದು ಹೋಗಿರುವ ಪವರ್ ಚಾನಲ್ ಪಕ್ಕದಲ್ಲಿ ಧರೆ ಕುಸಿತ ಸಂಭವಿಸಿರುವ ಚಿತ್ರ
ಕಾರ್ಗಲ್: ಇಲ್ಲಿಗೆ ಸಮೀಪದ ಮಹಾತ್ಮ ಗಾಂಧಿ ಜಲವಿದ್ಯುದಾಗರಕ್ಕೆ ನೀರು ಪೂರೈಸಲು ಪ್ರಮುಖವಾಗಿ ಬಳಸಿಕೊಳ್ಳುತ್ತಿರುವ ಕಾರ್ಗಲ್ ಪವರ್ ಚಾನಲ್ ಮಾರ್ಗ ಮಧ್ಯೆ ಧರೆ ಕುಸಿತ ಕಂಡು ಬಂದಿದೆ.
ಕುಸಿದಿರುವ ಮಣ್ಣು ಮಳೆಯ ಪ್ರಮಾಣ ಜಾಸ್ತಿಯಾದಲ್ಲಿ ಪವರ್ ಚಾನಲ್‌ಗೆ ಬಿದ್ದು, ಹರಿಯುವ ನೀರಿಗೆ ತಡೆ ಉಂಟು ಮಾಡುವ ಸಾಧ್ಯತೆ ಕಂಡು ಬರುತ್ತಿದೆ.
ಚಾನಲ್‌ನಲ್ಲಿ ಹರಿಯುವ ನೀರಿಗೆ ತಡೆ ಎದುರಾದಲ್ಲಿ ಮಹಾತ್ಮ ಗಾಂಧಿ ಜಲವಿದ್ಯುದಾಗರದಲ್ಲಿ ವಿದ್ಯುತ್ ಉತ್ಪಾದನೆಗೆ ಅಡಚಣೆ ಉಂಟಾಗಬಹುದು ಎಂದು ಜಾಲಿ ಗದ್ದೆ ಗ್ರಾಮಸ್ಥ ನವೀನ್ ಕುಮಾರ್ ಜೈನ್ ಸಂಬಂಧಪಟ್ಟ ವಿದ್ಯುತ್ ನಿಗಮದ ಅಧಿಕಾರಿಗಳ ಗಮನ ಸೆಳೆದಿದ್ದಾರೆ.
ಕೆಪಿಸಿಯ ಹಿರಿಯ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿ ಹೋಗಿದ್ದಾರೆ. ಮುಂದಿನ ದಿನಗಳಲ್ಲಿ ಸುರಿಯಬಹುದಾದ ಮಳೆಗೆ ಧರೆ ಕುಸಿತ ಹೆಚ್ಚಳವಾದರೆ ಕಾರ್ಗಲ್ ಜೋಗ ಬೈಪಾಸ್ ರಸ್ತೆಯಲ್ಲಿ ಬಿರುಕು ಉಂಟಾಗಿ ರಸ್ತೆ ಸಂಚಾರಕ್ಕೆ ತಡೆಯಾಗುವ ಸಂಭವವಿದೆ.
ಈ ಬಗ್ಗೆ ಲೋಕೋಪಯೋಗಿ ಇಲಾಕಾಧಿಕಾರಿಗಳು ಕೂಡಲೇ ಅಗತ್ಯ ಕ್ರಮ ಕೈಗೊಳ್ಳಲು ಕಾರ್ಗಲ್ ಜೋಗದ ನಾಗರಿಕರು ಒತ್ತಾಯಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.