ADVERTISEMENT

ಹೊಸನಗರ ತಾಲ್ಲೂಕಿನ ಸುಂಕದವರಮನೆ ಗುಡ್ಡದಲ್ಲಿ ಬಿರುಕು: ಗ್ರಾಮಸ್ಥರಲ್ಲಿ ಆತಂಕ

​ಪ್ರಜಾವಾಣಿ ವಾರ್ತೆ
Published 11 ಸೆಪ್ಟೆಂಬರ್ 2019, 20:16 IST
Last Updated 11 ಸೆಪ್ಟೆಂಬರ್ 2019, 20:16 IST
ಹೊಸನಗರ ತಾಲ್ಲೂಕಿನ ಸಂಪೇಕಟ್ಟೆ ಗ್ರಾಮದ ಸುಂಕದವರಮನೆ ಎಂಬಲ್ಲಿ ಗುಡ್ಡ ಬಿರುಕು ಬಿಟ್ಟಿರುವುದು
ಹೊಸನಗರ ತಾಲ್ಲೂಕಿನ ಸಂಪೇಕಟ್ಟೆ ಗ್ರಾಮದ ಸುಂಕದವರಮನೆ ಎಂಬಲ್ಲಿ ಗುಡ್ಡ ಬಿರುಕು ಬಿಟ್ಟಿರುವುದು   

ಹೊಸನಗರ: ತಾಲ್ಲೂಕಿನ ಸಂಪೇಕಟ್ಟೆ ಗ್ರಾಮದ ಸಮೀಪದ ಸುಂಕದವರಮನೆ ಎಂಬಲ್ಲಿ ಗುಡ್ಡವೊಂದರ ಮಧ್ಯ ಭಾಗದಲ್ಲಿ ಬಿರುಕು ಕಂಡುಬಂದಿದ್ದು, ಗ್ರಾಮಸ್ಥರಲ್ಲಿ ಆತಂಕ ಸೃಷ್ಟಿಸಿದೆ.

ಸುಂಕದವರಮನೆ ರಾಧಾಕೃಷ್ಣ ಎಂಬುವರ ಮನೆ ಎದುರಿನ ಗುಡ್ಡದಲ್ಲಿ ಏಕಾಏಕಿ ಬಿರುಕು ಕಾಣಿಸಿಕೊಂಡಿದೆ. ಗುಡ್ಡದ ಪಾರ್ಶ್ವಭಾಗದಿಂದ ಮೂಡಿದ ಬಿರುಕು ಗುಡ್ಡದ ಮಧ್ಯ ಭಾಗದವರೆಗೂ ವ್ಯಾಪಿಸಿದೆ. 100 ಮೀಟರ್‌ಗೂ ಹೆಚ್ಚು ಪ್ರಮಾಣದಲ್ಲಿ ಗುಡ್ಡ ಬಾಯಿಬಿಟ್ಟಿದೆ. ಇದು ಸಹಜವಾಗಿಯೇ ಗುಡ್ಡದ ಆಸುಪಾಸಿನಲ್ಲಿ ವಾಸಿಸುವ ಜನರಲ್ಲಿ ಆತಂಕ ತಂದಿದೆ. ಒಮ್ಮೆ ಬಿರುಕು ಬಿಟ್ಟ ಗುಡ್ಡ ಕುಸಿದು ಬಿದ್ದರೆ ಭಾರಿ ಪ್ರಮಾಣದ ಅನಾಹುತ ಆಗಲಿದೆ. ಅಚ್ಚುಕಟ್ಟು ಪ್ರದೇಶದ ಆಸ್ತಿ ಪಾಸ್ತಿಗೆ ಹಾನಿಯಾಗಲಿದೆ. ಕುಟುಂಬ ಬೀದಿಗೆ ಬೀಳಲಿದೆ ಎಂಬುದು ಜನರ ಅಳಲು.‌

ಈ ಹಿಂದೆಯೂ ಕುಸಿದಿತ್ತು: ಈ ಹಿಂದೆ ಆಗಸ್ಟ್ ತಿಂಗಳಿನಲ್ಲಿ ಬಿದ್ದ ಮಹಾಮಳೆಗೆ ಸುಂಕದವರಮನೆ ಗುಡ್ಡ ಕುಸಿದಿತ್ತು. ಇದರಿಂದ ಕೆಲ ರೈತರ ಹೊಲಗದ್ದೆಗೆ ಮಣ್ಣು, ನೀರು ತುಂಬಿ ಭಾರಿ ಪ್ರಮಾಣದ ಹಾನಿ ಆಗಿತ್ತು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.