ಕಟ್ಟಿನಕಾರು (ತುಮರಿ): 2024– 25ನೇ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಶರಾವತಿ ಹಿನ್ನೀರಿನ ಸರ್ಕಾರಿ ಪ್ರೌಢಶಾಲೆ ಕಟ್ಟಿನಕಾರು ಶಾಲೆಗೆ ಸತತ 6ನೇ ಬಾರಿಯೂ ಶೇ 100 ಫಲಿತಾಂಶ ಲಭಿಸಿದೆ.
ಪರೀಕ್ಷೆಗೆ ಹಾಜರಾದ ಒಟ್ಟು 22 ವಿದ್ಯಾರ್ಥಿಗಳಲ್ಲಿ 6 ವಿದ್ಯಾರ್ಥಿಗಳು ಅತ್ಯುನ್ನತ ಶ್ರೇಣಿ, 13 ಪ್ರಥಮ ಶ್ರೇಣಿ, ಮೂವರು ದ್ವಿತೀಯ ಶ್ರೇಣಿಯಲ್ಲಿ ತೇರ್ಗಡೆ ಹೊಂದಿದ್ದಾರೆ. ನಾಗವೇಣಿ (598), ಛಾಯಾ (586), ಮಾನ್ಯಶ್ರೀ (564), ಪ್ರಿಯಾ (561), ಚೈತನ್ಯ (551), ಉಮೇಶ (547) ಅಂಕ ಪಡೆದಿದ್ದಾರೆ.
ಗ್ರಾಮೀಣ ಭಾಗದ ತೀರಾ ಹಿಂದುಳಿದ ಸರ್ಕಾರಿ ಶಾಲಾ ವಿದ್ಯಾರ್ಥಿಗಳ ಈ ಸಾಧನೆಗೆ ಎಲ್ಲೆಡೆ ಪ್ರಶಂಸೆ ವ್ಯಕ್ತವಾಗಿದೆ. ಉತ್ತಮ ಫಲಿತಾಂಶಕ್ಕೆ ಕಾರಣರಾದ ಮುಖ್ಯಶಿಕ್ಷಕ ಬಸವರಾಜಪ್ಪ ಬಿ, ಸಹ ಶಿಕ್ಷಕರಾದ ಹರಿಪ್ರಸಾದ್ ಎಂ.ಜಿ, ಹರೀಶ್, ಮಧುಕೇಶ್ವರ ಹೆಗಡೆ, ಶಾಲಾಭಿವೃದ್ಧಿ ಸಮಿತಿಗೆ ಕ್ಷೇತ್ರ ಶಿಕ್ಷಣಾಧಿಕಾರಿ ಪರಶುರಾಮಪ್ಪ ಇ. ಅಭಿನಂದನೆ ಸಲ್ಲಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.