ಆನವಟ್ಟಿ: ಇಲ್ಲಿನ ಕರ್ನಾಟಕ ಪಬ್ಲಿಕ್ ಶಾಲೆ ಎಸ್‌ಎಸ್‌ಎಲ್‌ಸಿ ಪರೀಕ್ಷಯಲ್ಲಿ ಶೇ 92.92 ಫಲಿತಾಂಶ ಪಡೆದುಕೊಂಡಿದೆ.
ಇಂಗ್ಲೀಷ ಮಾಧ್ಯಮದಲ್ಲಿ ಶೇ 100, ಎನ್‌ಎಸ್‌ಕ್ಯೂಎಫ್‌ನಲ್ಲಿ ಶೇ 100 ಫಲಿತಾಂಶ ದಾಖಲಿಸಿದೆ. ಪರೀಕ್ಷೆ ಬರೆದ 353 ವಿದ್ಯಾರ್ಥಿಗಳಲ್ಲಿ 328 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ.
ಸಂಜಯ್ 615, ಸೌಜನ್ಯಾ 614, ಕೀರ್ತೀ 614, ಪ್ರಮೋದ್ ಸಿ.ಎಂ 610, ಬಸವರಾಜ ಸಿ.ಕೆ 610, ಸ್ಫೂರ್ತಿ ಜಿ.ಎಸ್. 609, ಸಂಜನಾ 602, ವರ್ಷಿಣಿ 602 ಅಂಕ ಗಳಿಸಿದ್ದಾರೆ.
ಉನ್ನತ ಶ್ರೇಣಿ 66, ಪ್ರಥಮ ದರ್ಜೆ 215, ದ್ವಿತೀಯ ದರ್ಜೆಯಲ್ಲಿ 51 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ.
ವಿದ್ಯಾರ್ಥಿಗಳ ಸಾಧನೆಗೆ ಉಪ ಪ್ರಾಂಶುಪಾಲ ಎಂ.ಮಹಾದೇವಪ್ಪ, ಸಿಡಿಸಿ ಕಾರ್ಯಾಧ್ಯಕ್ಷ ನಾಗರಾಜ ಶುಠಿ ಹಾಗೂ ಸದಸ್ಯರು, ಶಿಕ್ಷಕರು, ಪೋಷಕರು ಅಭಿನಂದನೆ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.