ADVERTISEMENT

ಶಿಕ್ಷಣದಷ್ಟೆ ವ್ಯಕ್ತಿತ್ವವೂ ಮುಖ್ಯ: ಶಿವಾನಿ

​ಪ್ರಜಾವಾಣಿ ವಾರ್ತೆ
Published 13 ಡಿಸೆಂಬರ್ 2019, 12:29 IST
Last Updated 13 ಡಿಸೆಂಬರ್ 2019, 12:29 IST
ಶಿವಮೊಗ್ಗದಲ್ಲಿ ಶುಕ್ರವಾರ ನಡೆದ ಕಸ್ತೂರಿಬಾ ಬಾಲಿಕಾ ಪದವಿಪೂರ್ವ ಕಾಲೇಜು ಪ್ರೌಢಶಾಲಾ ವಿಭಾಗದ ವಿದ್ಯಾರ್ಥಿ ಸಂಘದ ಸಮಾರೋಪದಲ್ಲಿ ಇಸ್ರೋ ಸಂಸ್ಥೆಯ ಉಪ ಪ್ರಧಾನ ವ್ಯವಸ್ಥಾಪಕಿ ಕೆ.ಎಲ್.ಶಿವಾನಿ ಮಾತನಾಡಿದರು.
ಶಿವಮೊಗ್ಗದಲ್ಲಿ ಶುಕ್ರವಾರ ನಡೆದ ಕಸ್ತೂರಿಬಾ ಬಾಲಿಕಾ ಪದವಿಪೂರ್ವ ಕಾಲೇಜು ಪ್ರೌಢಶಾಲಾ ವಿಭಾಗದ ವಿದ್ಯಾರ್ಥಿ ಸಂಘದ ಸಮಾರೋಪದಲ್ಲಿ ಇಸ್ರೋ ಸಂಸ್ಥೆಯ ಉಪ ಪ್ರಧಾನ ವ್ಯವಸ್ಥಾಪಕಿ ಕೆ.ಎಲ್.ಶಿವಾನಿ ಮಾತನಾಡಿದರು.   

ಶಿವಮೊಗ್ಗ: ಶಿಕ್ಷಣ ಪಡೆಯುವ ಜತೆಗೆಒಳ್ಳೆಯವ್ಯಕ್ತಿತ್ವ ರೂಪಿಸಿಕೊಳ್ಳುವುದೂ ಮುಖ್ಯ ಎಂದು ಬೆಂಗಳೂರಿನ ಇಸ್ರೋ ಸಂಸ್ಥೆಯ ಉಪ ಪ್ರಧಾನ ವ್ಯವಸ್ಥಾಪಕಿ ಕೆ.ಎಲ್.ಶಿವಾನಿ ಹೇಳಿದರು.

ಕುವೆಂಪು ರಂಗಮಂದಿರದಲ್ಲಿ ಶುಕ್ರವಾರ ಆಯೋಜಿಸಿದ್ದ ಕಸ್ತೂರಿಬಾ ಬಾಲಿಕಾ ಪದವಿಪೂರ್ವ ಕಾಲೇಜುಪ್ರೌಢಶಾಲಾ ವಿಭಾಗದ ವಿದ್ಯಾರ್ಥಿಸಂಘದ ಸಮಾರೋಪದಲ್ಲಿ ಅವರು ಮಾತನಾಡಿದರು.

ಹೆಣ್ಣುಮಕ್ಕಳು ಹುಡುಗರಿಗಿಂತ ಬುದ್ಧಿವಂತರು. ನಾಲ್ಕೈದು ಕೆಲಸ ಒಟ್ಟಿಗೆ ಮಾಡಬಲ್ಲ ಸಾಮರ್ಥ್ಯ ಅವರಿಗಿದೆ. ಓದಿನಲ್ಲೂ ಮುಂದಿರುತ್ತಾರೆ. ಪ್ರತಿ ಬಾರಿಯ ಫಲಿತಾಂಶದಲ್ಲೂ ವಿದ್ಯಾರ್ಥಿನಿಯರೇಮೇಲುಗೈ ಸಾಧಿಸುತ್ತಾರೆ. ಅಂಥವರು ಮುಂದಿನ 10 ವರ್ಷಗಳಲ್ಲಿ ಕಳೆದುಹೋಗಿಬಿಡುತ್ತಾರೆ. ಇವರ ಪ್ರತಿಭೆಗಳು ಎಲ್ಲಿ ಮರೆಯಾಗುತ್ತವೋ ಎಂದು ವಿಷಾದಿಸಿದರು.

ADVERTISEMENT

ಪೋಷಕರು ಹೆಣ್ಣು ಮಕ್ಕಳ ಪ್ರತಿಭೆಗೆಪ್ರೋತ್ಸಾಹ ನೀಡಬೇಕು. ಪುಸ್ತಕಗಳ ಆಚೆ ಬದುಕಿನ ಪಾಠ ರೂಪಿಸಬೇಕು. ವಿಶೇಷವಾದ ಪ್ರತಿಭೆ ಗುರುತಿಸಿ, ಅವರು ಆಯ್ಕೆ ಮಾಡುವ ವಿಷಯಗಳತ್ತ ಓದಲು ಅವಕಾಶ ಮಾಡಿಕೊಡಬೇಕು. ಡಾಕ್ಟರ್, ಎಂಜಿನಿಯರ್ ಎಂಬ ಭ್ರಮೆಕಳಚಬೇಕು. ನಾಗರಿಕ ಸೇವಾ ಪರೀಕ್ಷೆ ಎದುರಿಸುವ ಆತ್ಮಸ್ಥೈರ್ಯ ತುಂಬಬೇಕು ಎಂದು ಸಲಹೆ ನೀಡಿದರು.

ಅಂಕ ಗಳಿಕೆಯೇ ಮುಖ್ಯವಲ್ಲ. ಕ್ರಿಯಾಶೀಲರಾಗಬೇಕು.ಒಳ್ಳೆಯ ಹವ್ಯಾಸ ಬೆಳೆಸಿಕೊಳ್ಳಬೇಕು.ಕ್ರೀಡೆ, ಸಾಹಿತ್ಯ, ಕಲೆ, ಸಂಗೀತ ಎಲ್ಲ ಚಟುವಟಿಕೆಗಳಲ್ಲೂ ಭಾಗಿಯಾಗಬೇಕು.ವೈವಿಧ್ಯತೆಗೆ ಆದ್ಯತೆ ಕೊಡಬೇಕು. ಶಿಕ್ಷಣದ ಜತೆಗೆ ನಿಮ್ಮದೇ ಆದ ವ್ಯಕ್ತಿತ್ವ ರೂಪಿಸಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.

ರಾಷ್ಟ್ರೀಯ ಶಿಕ್ಷಣ ಸಮಿತಿ ಉಪಾಧ್ಯಕ್ಷ ಟಿ.ಆರ್.ಅಶ್ವತ್ಥ ನಾರಾಯಣ ಶೆಟ್ಟಿ, ಕಾರ್ಯದರ್ಶಿಎಸ್.ಎನ್.ನಾಗರಾಜ್, ರಾಷ್ಟ್ರೀಯ ಶಿಕ್ಷಣ ಮಹಾವಿದ್ಯಾಲಯದ ಸಹಾಯಕ ಪ್ರಾಧ್ಯಾಪಕ ಡಾ.ಚಿದಾನಂದ, ಪ್ರಾಂಶುಪಾಲ ಟಿ.ಬಸವರಾಜ್, ಉಪ ಪ್ರಾಂಶುಪಾಲ ಕೆ.ಆರ್.ಉಮೇಶ್, ವಿದ್ಯಾರ್ಥಿನಿಯರಸಂಘದ ಪ್ರಧಾನಿ ಎಚ್.ಎಂ.ಅನ್ವಿತಾ,ವಿರೋಧ ಪಕ್ಷದ ನಾಯಕಿ ಜಿ.ಪೂಜಾಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.