ಶಿವಮೊಗ್ಗ: 2025ನೇ ಸಾಲಿನ ಕೆ.ಸಿ.ಇ.ಟಿ. ಪರೀಕ್ಷೆಯ ಫಲಿತಾಂಶ ಪ್ರಕಟಗೊಂಡಿದೆ. ಇಲ್ಲಿನ ಪೇಸ್ ಪಿ.ಯು. ಕಾಲೇಜಿನ ವಿದ್ಯಾರ್ಥಿಗಳು ಶಿವಮೊಗ್ಗ ಜಿಲ್ಲೆಯಲ್ಲಿಯೇ ಉತ್ತಮ ಸಾಧನೆ ಮಾಡಿದ್ದಾರೆ.
ಸಿಇಟಿಯಲ್ಲಿ 19 ವಿದ್ಯಾರ್ಥಿಗಳು 500 ರ‍್ಯಾಂಕ್ ಒಳಗೆ, 1000 ರ‍್ಯಾಂಕ್ ಒಳಗೆ 39 ವಿದ್ಯಾರ್ಥಿಗಳು ಸ್ಥಾನ ಪಡೆದು ಸಾಧನೆ ಮಾಡಿದ್ದಾರೆ. ಎಸ್.ಕೃತಿಕಾ ನ್ಯಾಚುರೋಪತಿ 261, ಕೃಷಿಯಲ್ಲಿ 138, ಪಶು ವೈದ್ಯಕೀಯದಲ್ಲಿ 314 ಹಾಗೂ ಎಂಜಿನಿಯರಿಂಗ್‌ನಲ್ಲಿ 686ನೇ ರ್ಯಾಂಕ್ ಪಡೆದಿದ್ದಾರೆ.
ಎಚ್.ಎಸ್.ಶೋಭಿತ್ ನ್ಯಾಚುರೋಪತಿಯಲ್ಲಿ 62, ಎಂಜಿನಿಯರಿಂಗ್ 719, ಕೃಷಿ 105 ಹಾಗೂ ಪಶು ವೈದ್ಯಕೀಯದಲ್ಲಿ 120ನೇ ರ್ಯಾಂಕ್ ಪಡೆದಿದ್ದಾರೆ. ವಿ.ನಂದನ್ ಗಣೇಶ್ ಕೃಷಿಯಲ್ಲಿ 220, ಎಂಜಿನಿಯರಿಂಗ್‌ನಲ್ಲಿ 862ನೇ ರ್ಯಾಂಕ್, ವಿ.ಎನ್.ಹರ್ಷಿತಾ ಕೃಷಿಯಲ್ಲಿ 200, ಎಂಜಿನಿಯರಿಂಗ್‌ನಲ್ಲಿ 964, ನ್ಯಾಚುರೋಪತಿ 338, ಪಶು ವೈದ್ಯಕೀಯದಲ್ಲಿ 382ನೇ ರ್ಯಾಂಕ್ ಪಡೆದಿದ್ದಾರೆ. ಜಿ.ಎಂ.ವಾಣಿ ಕೃಷಿಯಲ್ಲಿ 278, ನ್ಯಾಚುರೋಪತಿ 371, ಪಶುವೈದ್ಯಕೀಯದಲ್ಲಿ 478ನೇ ರ್ಯಾಂಕ್, ಡಿ.ವಿಕಾಸ್ ಕೃಷಿಯಲ್ಲಿ 451, ನ್ಯಾಚುರೋಪತಿ 613 ಹಾಗೂ ಪಶು ವೈದ್ಯಕೀಯದಲ್ಲಿ 888ನೇ ರ್ಯಾಂಕ್ ಪಡೆದಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.