ADVERTISEMENT

ಶಿಕಾರಿಪುರಕ್ಕೂ ಹಬ್ಬಿದ ಮಂಗನಕಾಯಿಲೆ ವೈರಸ್

​ಪ್ರಜಾವಾಣಿ ವಾರ್ತೆ
Published 17 ಜನವರಿ 2019, 13:35 IST
Last Updated 17 ಜನವರಿ 2019, 13:35 IST

ಶಿವಮೊಗ್ಗ:ಇದೇ ಮೊದಲ ಬಾರಿ ಶಿಕಾರಿಪುರ ತಾಲ್ಲೂಕಿನಲ್ಲೂ ಮಂಗನಕಾಯಿಲೆ ವೈರಸ್‌ ಹರಡಿರುವುದು ದೃಢಪಟ್ಟಿದೆ.

ಅಂಬಾರಗೊಳ್ಳದ ಬಳಿ ಈಚೆಗೆ ದೊರೆತ ಮೃತ ಮಂಗನ ದೇಹದಲ್ಲಿ ಕಾಯಿಲೆಗೆ ಕಾರಣವಾಗುವ ವೈರಸ್‌ ಇರುವುದನ್ನು ಪುಣೆ ಪ್ರಯೋಗಾಲಯದ ವರದಿ ಖಚಿತಪಡಿಸಿದೆ.

ಇದುವರೆಗೂ ಸಾಗರ, ಹೊಸನಗರ, ಸೊರಬ ಹಾಗೂ ತೀರ್ಥಹಳ್ಳಿ ಭಾಗಗಳಲ್ಲಿ ಈ ಕಾಯಿಲೆ ಕಾಣಿಸಿಕೊಂಡಿತ್ತು.ಈಗ ಶಿಕಾರಿಪುರಕ್ಕೂ ಹಬ್ಬಿರುವುದು ಜನರ ಆತಂಕ ಹೆಚ್ಚಿಸಿದೆ.

ADVERTISEMENT

ಮತ್ತೆ ನಾಲ್ಕು ಜನರು ಮಣಿಪಾಲಕ್ಕೆ:ಸಾಗರ ತಾಲ್ಲೂಕು ಅರಳಗೋಡು ಸಮೀಪದ ಕಂಚಿಕೈ, ಮರಾಠಿ ಕ್ಯಾಂಪ್‌ನ ನಾಲ್ವರಿಗೆ ಮಂಗನಕಾಯಿಲೆ ರೋಗ ಲಕ್ಷಣ ಕಾಣಿಸಿಕೊಂಡಿದೆ. ಎಲ್ಲರನ್ನೂ ಮಣಿಪಾಲದ ಕಸ್ತೂರ ಬಾ ಆಸ್ಪತ್ರೆಗೆ ದಾಖಲಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.