ADVERTISEMENT

ಪ್ರಯಾಣಕ್ಕೆ ತಹಶೀಲ್ದಾರ್, ನೋಡಲ್ ಅಧಿಕಾರಿ ಅನುಮತಿ ಸಾಕು

ಮಾಜಿ ಸಚಿವ ಕಿಮ್ಮನೆ ರತ್ನಾಕರ ಸಲಹೆ

​ಪ್ರಜಾವಾಣಿ ವಾರ್ತೆ
Published 7 ಏಪ್ರಿಲ್ 2020, 14:48 IST
Last Updated 7 ಏಪ್ರಿಲ್ 2020, 14:48 IST
ಕಿಮ್ಮನೆ ರತ್ನಾಕರ
ಕಿಮ್ಮನೆ ರತ್ನಾಕರ   

ಶಿವಮೊಗ್ಗ: ಜನರು ತುರ್ತು ಕಾರ್ಯದ ನಿಮಿತ್ತ ಒಂದು ಜಿಲ್ಲೆಯಿಂದ ಮತ್ತೊಂದು ಜಿಲ್ಲೆಗೆ ಹೋಗಲು ಜಿಲ್ಲಾಧಿಕಾರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಅನುಮತಿ ಪಡೆಯಬೇಕು ಎನ್ನುವ ಸರ್ಕಾರದ ನಿರ್ಧಾರ ಸರಿಯಲ್ಲ ಎಂದು ಮಾಜಿ ಸಚಿವ ಕಿಮ್ಮನೆ ರತ್ನಾಕರ ಟೀಕಿಸಿದರು.

ಗಡಿಭಾಗಗಳಲ್ಲಿಸಂಬಂಧ ಎರಡೂ ಜಿಲ್ಲೆಗೂ ವ್ಯಾಪಿಸಿರುತ್ತದೆ. ಯಾರಾದರೂ ಮೃತಪಟ್ಟರೆ ಶವ ಸಂಸ್ಕಾರಕ್ಕೆ ಹೋಗಲು ಜಿಲ್ಲಾ ಕೇಂದ್ರಕ್ಕೆ ಬಂದು ಅನುಮತಿ ಪಡೆಯಲು ಕಷ್ಟವಾಗುತ್ತದೆ. ತಹಶೀಲ್ದಾರ್ ಅಥವಾ ನೋಡೆಲ್ ಅಧಿಕಾರಿಗಳು ಅನುಮತಿ ಕೊಟ್ಟರೆ ಸಾಕು. ಈ ಕುರಿತು ಜಿಲ್ಲಾಧಿಕಾರಿ ಬಳಿ ಚರ್ಚಿಸಲಾಗುವುದು ಎಂದು ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.

ಕೊರೊನಾಸಂಕಷ್ಟಜನರೇ ಆಹ್ವಾನಿಸಿಕೊಂಡದ್ದು.ಈಗಲಾದರೂ ಎಚ್ಚರಿಕೆ ವಹಿಸಬೇಕು. ಪ್ರತಿ ಪಕ್ಷಗಳು, ಸಾರ್ವಜನಿಕರು ಇಂತಹ ಸಮುದಲ್ಲಿಸರ್ಕಾರದ ಜತೆಗೆ ಇದ್ದಾರೆ.ಸರ್ಕಾರವೂ ಎಲ್ಲರ ಜತೆ ಇರಬೇಕು. ಕೊರೊನಾ ಹರಡುವುದನ್ನು ತಡೆಯಲು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಶಕ್ತಿ ಮೀರಿ ಪ್ರಯತ್ನಿಸುತ್ತಿವೆ. ಆದರೆ, ಫೆಬ್ರುವರಿ ತಿಂಗಳಲ್ಲೇ ವಿಮಾನ ನಿಲ್ದಾಣಗಳಲ್ಲಿಕಟ್ಟೆಚ್ಚರ ವಹಿಸಿದ್ದರೆ ಕಷ್ಟದ ಪರಿಸ್ಥಿತಿಎದುರಾಗುತ್ತಿರಲಿಲ್ಲ ಎಂದು ಕುಟುಕಿದರು.

ADVERTISEMENT

ಸರ್ಕಾರನೀಡುವ ಆದೇಶಗಳನ್ನು ಎಲ್ಲರೂ ಕಟ್ಟುನಿಟ್ಟಾಗಿ ಪಾಲಿಸಬೇಕು. ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಕೆಲವು ನಡೆಸ್ವಾಗತಾರ್ಹ. ಜತೆಗೆ ಎಲ್ಲಾ ಪಕ್ಷಗಳ ಮುಖಂಡರ ಮಾರ್ಗದರ್ಶನ, ಸಲಹೆ ಪಡೆಯಬೇಕು. ವಿಶ್ವಾಸಕ್ಕೆ ತೆಗೆದುಕೊಳ್ಳಬೇಕುಎಂದರು.

ಮೂರನೇ ಹಂತ ಅಪಾಯಕಾರಿ:ನಿರ್ಬಂಧ ಈ ತಿಂಗಳ 14ರಂದು ಮುಕ್ತಾಯವಾಗುತ್ತದೆ.ಆದರೆ, ಮೂರನೇ ಹಂತಕ್ಕೆ ತಲುಪಿವಭಯ ಆವರಿಸಿಕೊಂಡಿದೆ. ಹಾಗಾಗಿ,ಮತ್ತಷ್ಟು ದಿನ ನಿರ್ಬಂಧ ವಿಸ್ತರಿಸುವುದು ಸೂಕ್ತ. ಈಗಿರುವ ನಿರ್ಬಂಧಗಳನ್ನು ಜನರು ಕಟ್ಟುನಿಟ್ಟಾಗಿ ಪಾಲಿಸಿಲ್ಲ. ರಸ್ತೆಗಳಲ್ಲಿಓಡಾಡುತ್ತಲೇ ಇದ್ದಾರೆ. ಪ್ರಾರ್ಥನೆ, ಪೂಜೆ, ನಮಾಜ್‌ ಎಲ್ಲವನ್ನೂ ಮನೆಯಲ್ಲೇಮಾಡಬೇಕು. ನಮ್ಮಮನಸ್ಸಿಗೆ ನೆಮ್ಮದಿ ಸಿಕ್ಕರೆ ಅಷ್ಟೇ ಸಾಕು.ಸಾಮಾಜಿಕ ಜಾಲತಾಣಗಳಲ್ಲಿ ಯಾರೂ ಸುಳ್ಳು ಸುದ್ದಿಗಳನ್ನು ಹಬ್ಬಿಸಬಾರದು. ಇಂತಹ ಸಂದಿಗ್ಧ ಸಮಯವನ್ನು ಎಲ್ಲರೂ ಒಟ್ಟಾಗಿ ಎದುರಿಸಬೇಕು ಎಂದು ಕೋರಿದರು.

ಪತ್ರಿಕಾಗೋಷ್ಠಿಯಲ್ಲಿಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ ಎಚ್‌.ಎಸ್.ಸುಂದರೇಶ್, ವಿಧಾನ ಪರಿಷತ್ ಸದಸ್ಯ ಆರ್.ಪ್ರಸನ್ನಕುಮಾರ್, ಮಾಜಿ ಶಾಸಕ ಕೆ.ಬಿ ಪ್ರಸನ್ನಕುಮಾರ್, ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷೆ ವೇದಾ ವಿಜಯಕುಮಾರ್, ಸದಸ್ಯ ಕಲಗೋಡು ರತ್ನಾಕರ್, ಯೋಗೀಶ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.