ADVERTISEMENT

ಶೌಚಾಲಯದ ಕಲ್ಮಶ ಶಾಲೆ ಬಳಿಗೆ: ಕೆಎಸ್ಆರ್‌ಟಿಸಿಗೆ ನೋಟಿಸ್

​ಪ್ರಜಾವಾಣಿ ವಾರ್ತೆ
Published 4 ಫೆಬ್ರುವರಿ 2020, 13:47 IST
Last Updated 4 ಫೆಬ್ರುವರಿ 2020, 13:47 IST
ಸರ್ಕಾರಿ ಶಾಲೆ ಬಳಿ ಹರಿದು ಹೋಗು ಕೆಎಸ್‌ಆರ್‌ಟಿಸಿ ಶೌಚಾಲಯದ ಕಲ್ಮಶ.
ಸರ್ಕಾರಿ ಶಾಲೆ ಬಳಿ ಹರಿದು ಹೋಗು ಕೆಎಸ್‌ಆರ್‌ಟಿಸಿ ಶೌಚಾಲಯದ ಕಲ್ಮಶ.   

ಶಿವಮೊಗ್ಗ: ಕೆಎಸ್ಆರ್‌ಟಿಸಿ ಬಸ್‌ನಿಲ್ದಾಣದ ಶೌಚಾಲಯಗಳ ಕುಲುಷಿತ ನೀರು ಮಾರ್ನವಮಿ ಬೈಲ್ ಒಂದನೇ ತಿರುವಿನ ಸರ್ಕಾರಿ ಶಾಲೆಯ ಮಗ್ಗುಲಲ್ಲೇ ತೆರೆದ ಕಾಲುವೆ ಮೂಲಕ ಹಾದು ಹೋಗುತ್ತಿದ್ದು, ದುರ್ನಾಥದ ಮಧ್ಯೆ ಅಲ್ಲಿನ ಮಕ್ಕಳು ಕಲಿಯುತ್ತಿದ್ದಾರೆ.

ಈ ಶಾಲೆಗೆ ಹೆಚ್ಚಾಗಿ ಪೌರ ಕಾರ್ಮಿಕರು, ಕೂಲಿಕಾರರ ಮಕ್ಕಳೇ ಬರುತ್ತಾರೆ. ಶಿಕ್ಷಣ ಇಲಾಖೆ, ಕೆಎಸ್ಆರ್‌ಟಿಸಿ ಅಧಿಕರಿಗಳಿಗೆ ಸಮಸ್ಯೆ ಕುರಿತು ಹಲವು ಬಾರಿ ಗಮನಕ್ಕೆ ತಂದರೂ ಸಮಸ್ಯೆ ಬರೆಹರಿದಿರಲಿಲ್ಲ. ಸ್ವತಃ ಮಕ್ಕಳೇ ಮಕ್ಕಳ ಕಲ್ಯಾಣ ಸಮಿತಿ, ಮಕ್ಕಳ ಸಹಾಯವಾಣಿಗೆ ಪತ್ರ ಬರೆದು ದೂರು ನೀಡಿದ್ದರು. ನಂತರ ಶಾಲೆಗೆ ಭೇಟಿ ನೀಡಿದ ಮಕ್ಕಳ ರಕ್ಷಣಾ ಸಮಿತಿ, ಪರಿಶಿಷ್ಟ ಜಾತಿ ಮತ್ತು ಪಂಗಡದ ಅಭಿವೃದ್ಧಿ ಮಂಡಳಿ ಪಾಲಿಕೆಗೆ ನೋಟಿಸ್‌ ನೀಡಿದ್ದವು.

ನೋಟಿಸ್‌ ತಲುಪುತ್ತಿದ್ದಂತೆ ಎಚ್ಚೆತ್ತುಕೊಂಡ ಪಾಲಿಕೆ ಅಧಿಕಾರಿಗಳು ಮೋರಿಗೆ ಸ್ಲ್ಯಾಬ್ ಹಾಕುತ್ತಿದ್ದಾರೆ. ಆದರೆ, ಶೌಚಾಲಯಕಲ್ಮಶ ಅದೇ ಮಾರ್ಗದಲ್ಲಿ ಹರಿಯುತ್ತಿರುವ ಕಾರಣ ದುರ್ವಾಸನೆ ಕಡಿಮೆಯಾಗಿಲ್ಲ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.