ADVERTISEMENT

ಭೂ ಕುಸಿತ: ಸಂತ್ರಸ್ತರಿಗೆ ಅಗತ್ಯ ನೆರವು- ಕೆ.ಎಸ್. ಗುರುಮೂರ್ತಿ ಭರವಸೆ

ಮಲೆನಾಡು ಅಭಿವೃದ್ಧಿ ಮಂಡಳಿ ಅಧ್ಯಕ್ಷ ಕೆ.ಎಸ್. ಗುರುಮೂರ್ತಿ ಭರವಸೆ

​ಪ್ರಜಾವಾಣಿ ವಾರ್ತೆ
Published 8 ಅಕ್ಟೋಬರ್ 2020, 3:30 IST
Last Updated 8 ಅಕ್ಟೋಬರ್ 2020, 3:30 IST
ಸಾಗರ ತಾಲ್ಲೂಕಿನ ಅರಳಗೋಡು ಗ್ರಾಮ ಪಂಚಾಯಿತಿ ವ್ಯಾಪ್ತಿಯ ನಂದೋಡಿ ಗ್ರಾಮದಲ್ಲಿ ಭೂಕುಸಿತ ಉಂಟಾಗಿರುವ ಸ್ಥಳವನ್ನು ಮಂಗಳವಾರ ಮಲೆನಾಡು ಅಭಿವೃದ್ಧಿ ಮಂಡಳಿ ಅಧ್ಯಕ್ಷ ಕೆ.ಎಸ್.ಗುರುಮೂರ್ತಿ ಪರಿಶೀಲಿಸಿದರು
ಸಾಗರ ತಾಲ್ಲೂಕಿನ ಅರಳಗೋಡು ಗ್ರಾಮ ಪಂಚಾಯಿತಿ ವ್ಯಾಪ್ತಿಯ ನಂದೋಡಿ ಗ್ರಾಮದಲ್ಲಿ ಭೂಕುಸಿತ ಉಂಟಾಗಿರುವ ಸ್ಥಳವನ್ನು ಮಂಗಳವಾರ ಮಲೆನಾಡು ಅಭಿವೃದ್ಧಿ ಮಂಡಳಿ ಅಧ್ಯಕ್ಷ ಕೆ.ಎಸ್.ಗುರುಮೂರ್ತಿ ಪರಿಶೀಲಿಸಿದರು   

ಸಾಗರ: ತಾಲ್ಲೂಕಿನ ಅರಳಗೋಡು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಭೂ ಕುಸಿತದಿಂದ ನಷ್ಟ ಅನುಭವಿಸಿರುವ ಗ್ರಾಮಸ್ಥರಿಗೆ ಸರ್ಕಾರದಿಂದ ಸೂಕ್ತ ನೆರವು ಕಲ್ಪಿಸಲಾಗುವುದು ಎಂದು ಮಲೆನಾಡು ಅಭಿವೃದ್ಧಿ ಮಂಡಳಿ ಅಧ್ಯಕ್ಷ ಕೆ.ಎಸ್. ಗುರುಮೂರ್ತಿ ಹೇಳಿದರು.

ತಾಲ್ಲೂಕಿನ ಅರಳಗೋಡು ಗ್ರಾಮ ಪಂಚಾಯಿತಿ ವ್ಯಾಪ್ತಿಯ ನಂದೋಡಿ ಗ್ರಾಮದ ಸುತ್ತಲಿನ ಪ್ರದೇಶದಲ್ಲಿ ಈಚೆಗೆ ಬಿದ್ದ ಭಾರಿ ಮಳೆಯಿಂದ ಭೂಕುಸಿತ ಉಂಟಾಗಿರುವ ಸ್ಥಳವನ್ನು ಮಂಗಳವಾರ ಪರಿಶೀಲಿಸಿ ಅವರು ಮಾತನಾಡಿದರು.

ಅಕೇಶಿಯಾ ನೆಡುತೋಪುಗಳ ನಿರ್ಮಾಣ, ಗುಡ್ಡದ ಮೇಲೆ ಅವೈಜ್ಞಾನಿಕವಾಗಿ ಇಂಗುಗುಂಡಿಗಳನ್ನು ನಿರ್ಮಿಸಿರುವುದೂ ಸೇರಿ ಭೂ ಕುಸಿತಕ್ಕೆ ಹಲವು ರೀತಿಯ ಕಾರಣಗಳಿವೆ ಎಂಬುದರ ಬಗ್ಗೆ ವಿಶ್ಲೇಷಣೆ ನಡೆಯುತ್ತಿದೆ. ಈ ಬಗ್ಗೆ ವೈಜ್ಞಾನಿಕ ರೀತಿಯಲ್ಲಿ ಅಧ್ಯಯನ ನಡೆಯುವ ಅಗತ್ಯವಿದ್ದು, ಸರ್ಕಾರದ ಜೊತೆಗೆ ಮಾತುಕತೆ ನಡೆಸುವುದಾಗಿ ತಿಳಿಸಿದರು.

ADVERTISEMENT

ಭೂ ಕುಸಿತದ ಜೊತೆಗೆ ಮಳೆಯ ನೀರು ಅಡಿಕೆ ತೋಟಗಳಿಗೆ ನುಗ್ಗಿ ಸಾಕಷ್ಟು ಹಾನಿ ಉಂಟಾಗಿದೆ. ಗುಡ್ಡ ಕುಸಿತದಿಂದ ಮಣ್ಣು ಅಪಾರ ಪ್ರಮಾಣದಲ್ಲಿ ತೋಟದಲ್ಲಿ ಸಂಗ್ರಹವಾಗಿದೆ. ಈ ನಷ್ಟದ ಬಗ್ಗೆ ಅಂದಾಜು ವರದಿಯನ್ನು ಸಲ್ಲಿಸುವಂತೆ ಅಧಿಕಾರಿಗಳಿಗೆ ಈಗಾಗಲೇ ಸೂಚಿಸಲಾಗಿದೆ ಎಂದರು.

ಬಿಜೆಪಿಯ ಪ್ರಮುಖರಾದ ಕೆ.ಎನ್. ಶ್ರೀಧರ್, ಹು.ಭಾ.ಅಶೋಕ್, ರಾಜೇಶ್, ಲಕ್ಷ್ಮಿನಾರಾಯಣ್ ಸಂಪ, ಶಾಂತಾರಾಮ್, ರಾಜೇಂದ್ರ, ಲಕ್ಷ್ಮೀನಾರಾಯಣ್ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.