ADVERTISEMENT

ಧರ್ಮನಿಷ್ಠೆ ಇದ್ದರೆ ಸಾರ್ಥಕ ಜೀವನ: ವಿಧುಶೇಖರ ಭಾರತೀ ಶ್ರೀ

​ಪ್ರಜಾವಾಣಿ ವಾರ್ತೆ
Published 29 ನವೆಂಬರ್ 2022, 6:20 IST
Last Updated 29 ನವೆಂಬರ್ 2022, 6:20 IST
ಸಾಗರದಲ್ಲಿ ಭಾನುವಾರ ನಡೆದ ಹರದೂರು ದುರ್ಗಾಂಬಾ ದೇವಸ್ಥಾನದ ಕುಂಭಾಭಿಷೇಕ ಮಹೋತ್ಸವದಲ್ಲಿ ಶೃಂಗೇರಿ ಶಾರದಾಪೀಠದ ವಿಧುಶೇಖರ ಭಾರತೀ ಶ್ರೀ ಆಶೀರ್ವಚನ ನೀಡಿದರು.
ಸಾಗರದಲ್ಲಿ ಭಾನುವಾರ ನಡೆದ ಹರದೂರು ದುರ್ಗಾಂಬಾ ದೇವಸ್ಥಾನದ ಕುಂಭಾಭಿಷೇಕ ಮಹೋತ್ಸವದಲ್ಲಿ ಶೃಂಗೇರಿ ಶಾರದಾಪೀಠದ ವಿಧುಶೇಖರ ಭಾರತೀ ಶ್ರೀ ಆಶೀರ್ವಚನ ನೀಡಿದರು.   

ಸಾಗರ: ‘ಧರ್ಮನಿಷ್ಠೆ ಇದ್ದಲ್ಲಿ ಮಾತ್ರ ಮನುಷ್ಯನ ಜೀವನ ಸಾರ್ಥಕತೆ ಪಡೆಯುತ್ತದೆ’ ಎಂದು ಶೃಂಗೇರಿ ಶಾರದಾಪೀಠದ ವಿಧುಶೇಖರ ಭಾರತೀ ಶ್ರೀಗಳು ಹೇಳಿದರು.

ಇಲ್ಲಿನ ಹರದೂರು ದುರ್ಗಾಂಬಾ ದೇವಸ್ಥಾನದಲ್ಲಿ ಭಾನುವಾರ ನಡೆದ ಕುಂಭಾಭಿಷೇಕ ಮಹೋತ್ಸವದಲ್ಲಿ ಆಶೀರ್ವಚನ ನೀಡಿದರು.

ಧರ್ಮಶ್ರದ್ಧೆ ಇಲ್ಲದಿದ್ದಲ್ಲಿ ಬದುಕಿನಲ್ಲಿ ನೆಮ್ಮದಿ ಸಾಧ್ಯವಿಲ್ಲ. ಹೊಸದಾಗಿ ದೇವಸ್ಥಾನಗಳನ್ನು ನಿರ್ಮಾಣ ಮಾಡುವ ಜೊತೆಗೆ ಹಳೆಯ ದೇವಸ್ಥಾನಗಳನ್ನು ಪುನರುಜ್ಜೀವನಗೊಳಿಸುವುದೂ ಮುಖ್ಯ ಎಂದರು.

ADVERTISEMENT

ಮಹಾಗಣಪತಿ, ವೆಂಕಟೇಶ್ವರ, ಹರದೂರು ದುರ್ಗಾಂಬಾ ದೇವಸ್ಥಾನದ ಸಮೀಪದಲ್ಲೇ ಇರುವ ಗಣಪತಿ ಕೆರೆಯ ಅಭಿವೃದ್ಧಿಗೆ ಸರ್ಕಾರ ₹ 1 ಕೋಟಿ ಬಿಡುಗಡೆ ಮಾಡಿದೆ. ಕೆರೆಯ ನೀರನ್ನು ಸ್ವಚ್ಛಗೊಳಿಸಿ ಸೌಂದರ್ಯೀಕರಣ ಮಾಡಲಾಗುವುದು ಎಂದುಶಾಸಕ ಎಚ್.ಹಾಲಪ್ಪ ಹರತಾಳು ತಿಳಿಸಿದರು.

ದೇವಸ್ಥಾನದ ವಿಶ್ವಸ್ಥ ಸಮಿತಿ ಅಧ್ಯಕ್ಷ ಅಶ್ವಿನಿಕುಮಾರ್, ಹೈಕೋರ್ಟ್ ವಕೀಲ ಕೆ. ದಿವಾಕರ್ ಮಾತನಾಡಿದರು. ನಗರಸಭೆ ಅಧ್ಯಕ್ಷೆ ಮಧುರಾ ಶಿವಾನಂದ್, ಉಪಾಧ್ಯಕ್ಷ ವಿ. ಮಹೇಶ್, ಪ್ರಮುಖರಾದ ಎಸ್.ಜಿ. ಶ್ಯಾನಭಾಗ್, ಟಿ.ವಿ.ಪಾಂಡುರಂಗ, ಮ.ಸ. ನಂಜುಂಡಸ್ವಾಮಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.