ADVERTISEMENT

ತೀರ್ಥಹಳ್ಳಿಯಲ್ಲಿ ‘ಮಾಗಿ ರಂಗೋತ್ಸವ’ ನಾಟಕ ಪ್ರದರ್ಶನ

​ಪ್ರಜಾವಾಣಿ ವಾರ್ತೆ
Published 10 ಡಿಸೆಂಬರ್ 2019, 10:40 IST
Last Updated 10 ಡಿಸೆಂಬರ್ 2019, 10:40 IST
ಸಂದೇಶ್ ಜವಳಿ
ಸಂದೇಶ್ ಜವಳಿ   

ತೀರ್ಥಹಳ್ಳಿ: ಇಲ್ಲಿಯ ನಟಮಿತ್ರರು ಹವ್ಯಾಸಿ ಕಲಾ ಬಳಗ, ಶಿವಮೊಗ್ಗ ಸಮುದಾಯ ಹಾಗೂ ಹೊಂಗಿರಣ ತಂಡದ ಸಹಯೋಗದಲ್ಲಿ ಡಿ. 14ರಿಂದ 16ರ ವರೆಗೆ ಮೂರು ದಿನಗಳ ‘ಮಾಗಿ ರಂಗೋತ್ಸವ’ ನಾಟಕ ಪ್ರದರ್ಶನ ನಡೆಯಲಿದೆ ಎಂದು ನಟಮಿತ್ರರು ತಂಡ ಅಧ್ಯಕ್ಷ ಸಂದೇಶ್ ಜವಳಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪಟ್ಟಣದ ಶಾಂತವೇರಿ ಗೋಪಾಲಗೌಡ ರಂಗಮಂದಿರದಲ್ಲಿ ಪ್ರತಿ ಸಂಜೆ 6.30ರಿಂದ ನಾಟಕ ಪ್ರದರ್ಶನ ನಡೆಯಲಿದೆ. ಮೊದಲ ದಿನ ಹೊಂಗಿರಣ ಶಿವಮೊಗ್ಗ ಇವರ ಅಭಿನಯದ ಗಿರೀಶ ಕಾರ್ನಾಡ ಅವರ ‘ಹೂವು’ ಏಕವ್ಯಕ್ತಿ ನಾಟಕ ಪ್ರದರ್ಶನ ಇದೆ. ನಾಟಕವನ್ನು ಶಿವಮೊಗ್ಗ ಸಾಸ್ವೆಹಳ್ಳಿ ಸತೀಶ್ ನಿರ್ದೇಶನ ಮಾಡಿದ್ದಾರೆ ಎಂದು ಅವರು ತಿಳಿಸಿದ್ದಾರೆ.

ಡಿ. 15ರಂದು ಶಿವಮೊಗ್ಗದ ಸಮುದಾಯ ತಂಡದ ಸಹಯೋಗದಲ್ಲಿ ಶಿವಮೊಗ್ಗ ಹೊಂಗಿರಣ ಅಭಿನಯಿಸುವ ಅಶ್ವತ್ಥ ರಚನೆಯ ಹಾನ್ಯ ನಾಟಕ ‘ಶ್ರೀಕೃಷ್ಣ ಸಂಧಾನ’ ಪ್ರದರ್ಶನಗೊಳ್ಳಲಿದೆ. ನಾಟಕಕ್ಕೆ ಹಿರೇಗೋಣಿಗೆರೆ ಚಂದ್ರಶೇಖರ್ ನಿರ್ದೇಶನವಿದೆ ಎಂದು ತಿಳಿಸಿದ್ದಾರೆ.

ADVERTISEMENT

ಡಿ. 16ರಂದು ಸೋಮವಾರ ತುಮಕೂರಿನ ರಂಗತಂಡ ‘ಡೀಪ್ ಫೋಕಸ್’ ಇವರ ಅಭಿನಯದ ನಟರಾಜ್ ಹೊನ್ನವಳ್ಳಿ ನಿರ್ದೇಶನದ ‘ಔರಂಗಜೇಬ್’ ನಾಟಕ ಪ್ರದರ್ಶನಗೊಳ್ಳಲಿದೆ ಎಂದು ತಿಳಿಸಿದ್ದಾರೆ.

ನಾಟಕೋತ್ಸವವನ್ನು ಶಾಸಕ ಆರಗ ಜ್ಞಾನೇಂದ್ರ ಉದ್ಘಾಟಿಸುವರು. ಕಾರ್ಯಕ್ರಮದಲ್ಲಿ ಕಡೇಕೊಪ್ಪಲು ಪ್ರತಿಷ್ಠಾನ, ಶಿವಮೊಗ್ಗ ಇದರ ಅಧ್ಯಕ್ಷ ಲಕ್ಷ್ಮಿನಾರಾಯಣರಾವ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಎಚ್. ಉಮೇಶ್, ರಂಗಕರ್ಮಿ ಸಾಸ್ವೆಹಳ್ಳಿ ಸತೀಶ್ ಉಪಸ್ಥಿತರಿರುವರು.

‘ನಟಮಿತ್ರರು’ ತಂಡದ ಸಂದೇಶ್ ಜವಳಿ ಅಧ್ಯಕ್ಷತೆ ವಹಿಸಲಿದ್ದು, ನಾಟಕ ಪ್ರದರ್ಶನಗಳಿಗೆ ಉಚಿತ ಪ್ರವೇಶ ಇರುತ್ತದೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.