ಶಿವಮೊಗ್ಗ: ಕೊಲೆ ಆರೋಪದ ಮೇಲೆ ಜೈಲಿನಲ್ಲಿರುವರೌಡಿಶೀಟರ್ ಮಾರ್ಕೆಟ್ ಲೋಕಿಯನ್ನು ತಂದೆ ನಿಧನರಾದ ಕಾರಣ ಶನಿವಾರ ಬಿಗಿ ಪೊಲೀಸ್ ಬಂದೋಬಸ್ತ್‌ನಲ್ಲಿ ಶಿವಮೊಗ್ಗಕ್ಕೆ ಕರೆತರಲಾಯಿತು.
ಲೋಕಿ ತಂದೆ ಶುಕ್ರವಾರ ನಿಧನರಾಗಿದ್ದರು. ಅಂತ್ಯಸಂಸ್ಕಾರದಲ್ಲಿ ಭಾಗವಹಿಸಲುಕೋರ್ಟ್ ಅನುಮತಿನೀಡಿತ್ತು. ಹೀಗಾಗಿ ಸವರ್‌ಲೈನ್ ರಸ್ತೆಯ ಅವರ ಮನೆಗೆ ಬಿಗಿ ಬಂದೋಬಸ್ತ್‌ನಲ್ಲಿ ಕರೆತರಲಾಗಿತ್ತು.ಮಾರ್ಕೆಟ್ ಗಿರಿ ಕೊಲೆ ಪ್ರಕರಣದಲ್ಲಿ ಈಚೆಗೆ ಲೋಕಿಯನ್ನು ಬಂಧಿಸಲಾಗಿತ್ತು. ಪ್ರಸ್ತುತ ಬಳ್ಳಾರಿಕಾರಾಗೃಹದಲ್ಲಿದ್ದಾನೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.