ಶಿವಮೊಗ್ಗ: ಇಲ್ಲಿನ ವಡ್ಡಿನಕೊಪ್ಪ ಸಮೀಪದ ಪುಟ್ಟಪ್ಪ ಕ್ಯಾಂಪ್ ಬಡಾವಣೆಯಲ್ಲಿ ಶನಿವಾರ ತಡರಾತ್ರಿ ಮುಸುಕುಧಾರಿಗಳ ತಂಡವೊಂದು ಓಡಾಟ ನಡೆಸಿದೆ. ಇದು ಜನರಲ್ಲಿ ಆತಂಕ ಹುಟ್ಟಿಸಿದೆ.
ಓಡಾಟದ ದೃಶ್ಯ ಸಿ.ಸಿ.ಟಿ.ವಿ. ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಆರು ಜನರು ಸಾಲಾಗಿ ಬಡಾವಣೆಯ ರಸ್ತೆಗಳಲ್ಲಿ ನಡೆದು ಸಾಗುವುದು ಕಂಡುಬಂದಿದೆ.
ಎಲ್ಲರೂ ಜೀನ್ಸ್ ಪ್ಯಾಂಟ್, ಬನಿಯನ್ ಧರಿಸಿದ್ದಾರೆ. ಸೊಂಟದಲ್ಲಿ ಶಸ್ತ್ರಾಸ್ತ್ರ ಇಟ್ಟುಕೊಂಡಿದ್ದು, ಗುರುತು ಮರೆಮಾಡಲು ಎಲ್ಲರೂ ತಮ್ಮ ಮುಖಕ್ಕೆ ಬಟ್ಟೆ ಕೊಟ್ಟಿಕೊಂಡಿದ್ದಾರೆ. ಕೈಯಲ್ಲಿ ಟಾರ್ಚ್ ಇದೆ. ಒಬ್ಬಾತ ಕೈಗೆ ಗ್ಲೌಸ್ ಧರಿಸಿದ್ದು, ಮತ್ತೊಬ್ಬ ಬ್ಯಾಗ್ ಹಾಕಿಕೊಂಡಿದ್ದಾನೆ.
ಈ ವಿಡಿಯೊ ವೈರಲ್ ಆಗುತ್ತಿದ್ದಂತೆ ಬಡಾವಣೆ ನಿವಾಸಿಗಳು ಗಾಬರಿಯಾಗಿದ್ದಾರೆ. ತುಂಗಾನಗರ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.