ADVERTISEMENT

ಗಣ್ಯರ ಹೆಸರು, ಕನ್ನಡ ಪದ ತಪ್ಪಾಗಿ ಉಚ್ಚರಿಸಿದ ಸಚಿವ ನಾರಾಯಣಗೌಡ

​ಪ್ರಜಾವಾಣಿ ವಾರ್ತೆ
Published 27 ಜನವರಿ 2022, 6:40 IST
Last Updated 27 ಜನವರಿ 2022, 6:40 IST
ಕೆ.ಸಿ.ನಾರಾಯಣಗೌಡ
ಕೆ.ಸಿ.ನಾರಾಯಣಗೌಡ   

ಶಿವಮೊಗ್ಗ: ‘ಗ್ರಾಮೀಣಾಭಿವೃದ್ಧಿ ಸಚಿವ ಯಡಿಯೂರಪ್ಪ, ಗೃಹ ಸಚಿವ ಅರಗೇಂದ್ರ ಗಾಂಗ್ರಿ, ವಿಧಾನಪರಿಷತ್‌ ಸದಸ್ಯ ಐನೂರು ಮಂಜುನಾಥ್‌, ಪಾಲಿಕೆ ಮೇಯರ್ ಸುಮಿತ್ರ ಅಮ್ಮ ಅಣ್ಣ ಅಪ್ಪ...’

ಇದು ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ನೂತನ ಜಿಲ್ಲಾ ಉಸ್ತುವಾರಿ ಸಚಿವ ಕೆ.ಸಿ. ನಾರಾಯಣಗೌಡ ಅವರು ಜಿಲ್ಲೆಯ ಗಣ್ಯವ್ಯಕ್ತಿಗಳನ್ನು ಅಭಿನಂದಿಸುವಾಗ ಸಂಬೋಧಿಸಿದ ರೀತಿ.

ನಗರದ ಡಿ.ಆರ್‌. ಮೈದಾನದಲ್ಲಿ ಜಿಲ್ಲಾಡಳಿತದಿಂದ ಹಮ್ಮಿಕೊಂಡಿದ್ದ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಕನ್ನಡ ಪದಗಳ ಉಚ್ಚರಿಸಲು ತಡವರಿಸಿದ ಸಚಿವರು, ಗಣ್ಯರ ಹೆಸರನ್ನು ತಪ್ಪಾಗಿ ಹೇಳಿ ನಗೆಪಾಟಲಿಗೆ ಈಡಾದರು.

ADVERTISEMENT

ಸಚಿವ ಈಶ್ವರಪ್ಪ ಬದಲು ಯಡಿಯೂರಪ್ಪ ಅವರ ಹೆಸರು ಹೇಳಿದರು. ಎಲ್ಲ ಬಿಜೆಪಿ ನಾಯಕರು, ಗಣ್ಯರ ಹೆಸರನ್ನು ತಪ್ಪಾಗಿ ಉಚ್ಚರಿಸಿದ ‌‌‌ನಾರಾಯಣಗೌಡ ಗಣರಾಜ್ಯೋತ್ಸವ ಎಂಬ ಪದವನ್ನೂ ಹೇಳಲು ಕೂಡ ತಡವರಿಸಿದರು. ಮೇಯರ್‌ ಸುನಿತಾ ಅಣ್ಣಪ್ಪ ಹೆಸರನ್ನು ‘ಸಮಿತ್ರ ಅಮ್ಮ ಅಣ್ಣ ಅಪ್ಪ’ ಎಂದರು. ಶಿಕ್ಷಣ ಎನ್ನುವುದರ ಬದಲು ‘ಶಿಸ್ಕಣ’ ಎಂದು ತಡವರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.