ADVERTISEMENT

ಹೊಳೆಹೊನ್ನೂರು: ನಾಪತ್ತೆಯಾಗಿದ್ದ ಮಹಿಳೆ ಶವ ಪತ್ತೆ

​ಪ್ರಜಾವಾಣಿ ವಾರ್ತೆ
Published 22 ಜನವರಿ 2026, 2:56 IST
Last Updated 22 ಜನವರಿ 2026, 2:56 IST
<div class="paragraphs"><p>ನೀಲಾಬಾಯಿ</p></div>

ನೀಲಾಬಾಯಿ

   

ಹೊಳೆಹೊನ್ನೂರು: ಇಲ್ಲಿನ ಭದ್ರಾ ಬಲದಂಡೆ ನಾಲೆಯಲ್ಲಿ ಈಚೆಗೆ ನಾಪತ್ತೆಯಾಗಿದ್ದ ನಾಲ್ವರ ಪೈಕಿ ನೀಲಾಬಾಯಿ (50) ಅವರ ಮೃತದೇಹ ಬುಧವಾರ ಪತ್ತೆಯಾಗಿದೆ. ಅರಬಿಳಚಿ ಗ್ರಾಮದಲ್ಲಿ ಅಂತ್ಯಕ್ರಿಯೆ ನಡೆಯಿತು.

ನೀಲಾಬಾಯಿ ಅವರ ಪುತ್ರ ರವಿಕುಮಾರ್ ಅವರ ಮೃತದೇಹ ಸೋಮವಾರ ಪತ್ತೆಯಾಗಿತ್ತು. ಮುಳುಗು ತಜ್ಞ ಈಶ್ವರ್ ಮಲ್ಪೆ ತಂಡವು ಇಬ್ಬರ ಶವಗಳನ್ನು ನಾಲೆಯಿಂದ ಹೊರತೆಗೆಯಿತು. ನಾಪತ್ತೆಯಾಗಿರುವ ಶ್ವೇತಾ ಹಾಗೂ ಪರಶುರಾಮ್ ಪತ್ತೆಗಾಗಿ ಪೊಲೀಸರು, ಅಗ್ನಿಶಾಮಕ ದಳ ಮತ್ತು ಎಸ್‌ಡಿಆರ್‌ಎಫ್ ತಂಡಗಳು ನಾಲ್ಕನೇ ದಿನವೂ ಶೋಧ ಕಾರ್ಯ ಮುಂದುವರಿಸಿವೆ. ನಾಲೆಯಲ್ಲಿ 6 ಅಡಿಯಷ್ಟು ನೀರನ್ನು ಕಡಿಮೆ ಮಾಡಲಾಗಿದೆ.

ADVERTISEMENT

ಮತ್ತೊಂದು ಶವ ಪತ್ತೆ: 

ಭದ್ರಾ ಬಲದಂಡೆ ನಾಲೆಯಲ್ಲಿ ನಾಪತ್ತೆಯಾದವರಿಗಾಗಿ ಹುಡುಕುತ್ತಿರುವ ಸಂದರ್ಭದಲ್ಲಿ ಮತ್ತೊಂದು ಮಹಿಳೆ ಶವ ಪತ್ತೆಯಾಗಿದೆ.

ಮೃತ ಮಹಿಳೆಯನ್ನು ಸಮೀಪದ ತಿಮ್ಲಾಪುರ ಗ್ರಾಮದ ಲಲಿತಮ್ಮ (60) ಎಂದು ಗುರುತಿಸಲಾಗಿದೆ.

ಬುಧವಾರ ಬೆಳಿಗ್ಗೆ ಮನೆಯಿಂದ ಹೊರಟ ಅವರು 3 ಕಿ.ಮೀ. ದೂರ ಬಂದು ಭದ್ರಾ ನಾಲೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳೀಸಿದರು ಮೃತದೇಹವನ್ನು ವಾರಸುದಾರರಿಗೆ ಒಪ್ಪಿಸಲಾಯಿತು. ಪಟ್ಟಣದ ಠಾಣೆಯಲ್ಲಿ ದೂರು ದಾಖಲಾಗಿದೆ.

ಲಲಿತಮ್ಮ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.