ಶಿವಮೊಗ್ಗ: ‘ಅನವರತ ತಂಡದಿಂದ ವಿವೇಕ ವಿದ್ಯಾನಿಧಿಯಡಿ ನಗರ ವ್ಯಾಪ್ತಿಯ ಎಸ್ಎಸ್ಎಲ್‌ಸಿ ಮತ್ತು ದ್ವಿತೀಯ ಪಿಯುಸಿಯಲ್ಲಿ ಓದುತ್ತಿರುವ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ನೀಡಲಾಗುತ್ತಿದೆ’ ಎಂದು ಶಾಸಕ ಎಸ್.ಎನ್. ಚನ್ನಬಸಪ್ಪ ಹೇಳಿದರು.
ವಿದ್ಯಾರ್ಥಿಗಳು 9ನೇ ತರಗತಿಯಲ್ಲಿ ಹಾಗೂ ಪ್ರಥಮ ಪಿಯುಸಿಯಲ್ಲಿ ಶೇ 50 ರಿಂದ 75 ರಷ್ಟು ಅಂಕ ಪಡೆದಿರಬೇಕು ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ವಿದ್ಯಾರ್ಥಿಗಳ ವಾರ್ಷಿಕ ಶಾಲಾ– ಕಾಲೇಜು ಶುಲ್ಕ ₹30,000ಕ್ಕಿಂತ ಕಡಿಮೆ ಇರಬೇಕು. ಬಿಪಿಎಲ್ ಪಡಿತರ ಚೀಟಿ ಹೊಂದಿರಬೇಕು. ಇಂತಹ ವಿದ್ಯಾರ್ಥಿಗಳು ₹5,000 ವಿದ್ಯಾರ್ಥಿವೇತನ ಪಡೆಯಲು ಅರ್ಹರು. ನೆಹರು ರಸ್ತೆಯ ಶಾಸಕರ ಭವನದಿಂದ ಅರ್ಜಿ ಪಡೆದು ಆಗಸ್ಟ್ 15ರೊಳಗೆ ದಾಖಲೆಯೊಂದಿಗೆ ಅರ್ಜಿ ಸಲ್ಲಿಸಬೇಕು. ಅರ್ಜಿ ಶುಲ್ಕ ₹10 ನಿಗದಿಪಡಿಸಲಾಗಿದೆ ಎಂದುರು.
ನಗರ ವ್ಯಾಪ್ತಿ 110 ಪ್ರೌಢಶಾಲೆ, 38 ಪಿಯು ಕಾಲೇಜು ಸೇರಿ 13,825 ವಿದ್ಯಾರ್ಥಿಗಳಿದ್ದಾರೆ. ಇದರಲ್ಲಿ ಅರ್ಹ 1,000 ವಿದ್ಯಾರ್ಥಿಗಳಿಗೆ ಹಂತ ಹಂತವಾಗಿ ವಿದ್ಯಾರ್ಥಿ ವೇತನ ನೀಡಲಾಗುವುದು. ಅರ್ಜಿ ಪಡೆಯಲು ಯಾವುದಾರೂ ಒಂದು ಗುರುತಿನ ಚೀಟಿ ಕಡ್ಡಾಯ ಎಂದರು.
ಬಿಜೆಪಿ ನಗರದ ಘಟಕ ಅಧ್ಯಕ್ಷ ಮೋಹನ್ ರೆಡ್ಡಿ, ನಾಗರಾಜ್, ಮೋಹನ್ ಶೆಟ್ಟಿ, ಪ್ರಭಾಕರ್, ನವೀನ್, ಪ್ರಿಯಾ, ಪೃಥ್ವಿ ಗೌಡ, ಜಗದೀಶ್, ಪ್ರಭುರಾಜ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.