ADVERTISEMENT

ಮಂಗನ ಕಾಯಿಲೆ ನಿಂತ್ರಣಕ್ಕೆ ಆಗ್ರಹ

​ಪ್ರಜಾವಾಣಿ ವಾರ್ತೆ
Published 2 ಏಪ್ರಿಲ್ 2020, 13:16 IST
Last Updated 2 ಏಪ್ರಿಲ್ 2020, 13:16 IST

ಶಿವಮೊಗ್ಗ: ಇಡೀ ಜಿಲ್ಲಾಡಳಿತ ಕೊರೊನಾ ನಿಯಂತ್ರಣದತ್ತ ಚಿತ್ತ ಹರಿಸಿದೆ. ಈ ಬಾರಿ 160ಕ್ಕೂ ಜೆಚ್ಚುಜನರಿಗೆ ಮಂಗನ ಕಾಯಿಲೆ ಇರುವುದು ದೃಢಪಟ್ಟು,ಹಲವು ಜನರು ಮೃತಪಟ್ಟರೂಅತ್ತ ಗಮನ ಹರಿಸುತ್ತಿಲ್ಲ ಎಂದು ಜನಜಾಗೃತಿ ಒಕ್ಕೂಟದ ಮುಖಂಡರಾದ ಕೆ.ಪಿ.ಶ್ರೀಪಾಲ್, ಎಂ.ಗುರುಮೂರ್ತಿ, ಶಶಿ ಸಂಪಳ್ಳಿ ದೂರಿದ್ದಾರೆ.

ಹಿಂದಿನ ವರ್ಷ ಸಾಗರ ತಾಲ್ಲೂಕಿನಲ್ಲಿ ಅತಿ ಹೆಚ್ಚು ಸಾವುನೋವು ಉಂಟುಮಾಡಿದ್ದ ಕೆಎಫ್‌ಡಿ ವೈರಸ್‌ ಈ ಬಾರಿ ತೀರ್ಥಹಳ್ಳಿ ತಾಲ್ಲೂಕಿನಲ್ಲಿ ಹಾವಳಿ ಮಾಡುತ್ತಿದೆ. ಜಿಲ್ಲೆಯ ಎಲ್ಲ ವೈದ್ಯರು ಕೊರೊನಾ ವಿರುದ್ಧದ ಸಮರಕ್ಕೆ ಸಜ್ಜಾಗಿದ್ದಾರೆ.ಮಂಗನ ಕಾಯಿಲೆ ಪೀಡಿತರಕಡೆ ಗಮನ ಹರಿಸುತ್ತಿಲ್ಲ.ಸರ್ಕಾರತಕ್ಷಣ ಟಾಸ್ಕ್‌ಫೋರ್ಸ್ ಚುರುಕುಗೊಳಿಸಬೇಕು. ಅರಣ್ಯ ಇಲಾಖೆ ಸಿಬ್ಬಂದಿ ನೀಗಾ ವಹಿಸಬೇಕು.ಮಂಗಗಳು ಸತ್ತಿರುವುದನ್ಬು ಪತ್ತೆ ಹಚ್ಚಿ ಅಲ್ಲಿಯೇ ಅವುಗಳನ್ನು ಸುಟ್ಟುಹಾಕಬೇಕು.ಆ ಜಾಗಗಳಲ್ಲಿ ಉಣ್ಣೆಗಳು ಹರಡದಂತೆ ಜೌಷಧ ಸಿಂಪಡಿಸಬೇಕು ಎಂದು ಒತ್ತಾಯಿಸಿದ್ದಾರೆ.

ಅರಣ್ಯ ಇಲಾಖೆ ಸಿಬ್ಬಂದಿಗೆ ರೋಗ ಹರಡದಂತೆ ರಕ್ಷಣೆಗೆ ಬೇಕಾದ ವ್ಯವಸ್ಥೆ ಮಾಡಬೇಕು.ಸೂಕ್ಷ್ಮ ಪ್ರದೇಶಗಳನ್ನು ಗುರುತಿಸಿ, ಅಲ್ಲಿ ನಿರಂತರ ಗಸ್ತು ತಿರುಗಬೇಕು. ರೋಗ ನಿರೋಧಕ ಚುಚ್ಚುಮದ್ದುನೀಡಬೇಕು. ಮೃತರಾದವರ ಕುಟುಂಬಗಳಿಗೆ ದೊಡ್ಡಮೊತ್ತದ ಪರಿಹಾರ ನೀಡಬೇಕು. ಮಂಗನ ಕಾಯಿಲೆಪೀಡಿತರ ಆಸ್ಪತ್ರೆ ವೆಚ್ಚವನ್ನು ಸರ್ಕಾರವೇ ಭರಿಸಬೇಕು. ಜನರು ತೋಟ ಗದ್ದೆಗೆ ತೆರಳುವಾಗ ಹಚ್ಚಿಕೊಳ್ಳಲು ಗುಣಮಟ್ಟದ ಡಿಎಂಪಿ ತೈಲಾ ವಿತರಿಸಬೇಕು ಎಂದು ಆಗ್ರಹಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.