
ಪ್ರಜಾವಾಣಿ ವಾರ್ತೆ
ತ್ಯಾಗರ್ತಿ: ‘ಮನುಷ್ಯ ಒಳ್ಳೇತನ ಬೆಳೆಸಿಕೊಂಡರೆ ಸಾರ್ವಜನಿಕರಿಗೆ ಒಳಿತಾಗುತ್ತದೆ’ ಎಂದು ಶಾಸಕ ಗೋಪಾಲಕೃಷ್ಣ ಬೇಳೂರು ಹೇಳಿದರು.
ಸಾಗರ ತಾಲ್ಲೂಕಿನ ತ್ಯಾಗರ್ತಿಯಲ್ಲಿ ಸೋಮವಾರ ಟಿ.ಕೆ.ಹನುಮಂತಪ್ಪ ಕುಟುಂಬದವರು ಸ್ಥಳೀಯ ಹಾಗೂ ಸುತ್ತಮುತ್ತಲಿನ ಗ್ರಾಮದ ಜನರಿಗೆ ಸಹಕಾರಿಯಾಗಲು ಕೊಡುಗೆಯಾಗಿ ನೀಡಿದ ಮುಕ್ತಿ ವಾಹನವನ್ನು ಲೋಕಾರ್ಪಣೆಗೊಳಿಸಿ ಮಾತನಾಡಿದರು.
ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯೆ ಅನಿತಾಕುಮಾರಿ ಮಾತನಾಡಿ, ‘ಸಾಧನೆ ಮತ್ತು ಆದರ್ಶ ಇವರೆಡೂ ಮನುಷ್ಯನಲ್ಲಿದ್ದರೆ ಮಾತ್ರ ಬದುಕಿಗೊಂದು ಅರ್ಥ ಸಿಗುತ್ತದೆ’ ಎಂದು ಹೇಳಿದರು.
ತಾಲ್ಲೂಕು ಪಂಚಾಯಿತಿ ಮಾಜಿ ಸದಸ್ಯರಾದ ಸೋಮಶೇಖರ್ ಲಾವಿಗೆರೆ, ಟಿ.ಕೆ.ಹನುಮಂತಪ್ಪ ಕುಟುಂಬದವರು, ಮಾರಿಕಾಂಬಾ ಹಾಗೂ ದುರ್ಗಾಂಬಾ ಸಮಿತಿಯ ಅಧ್ಯಕ್ಷ ರೇವಪ್ಪ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.