ಆನವಟ್ಟಿ: ಸಮೀಪದ ಜಡೆ ಗ್ರಾಮದಲ್ಲಿ ಗುರುವಾರ ರಾತ್ರಿ ಮದ್ಯ ಸೇವಿಸುತ್ತಿದ್ದ ವೇಳೆ ಮಾವ–ಅಳಿಯನ ನಡುವೆ ಉಂಟಾದ ಜಗಳ ಅಳಿಯನ ಕೊಲೆಯಲ್ಲಿ ಅಂತ್ಯವಾಗಿದೆ.
ಗ್ರಾಮದ ಪ್ರಿಯದರ್ಶಿನಿ ಹೊಟೇಲ್‌ನಲ್ಲಿ ಕಮರೂರು ಗೋಮಾಳ ಪ್ರದೇಶದ ನಿವಾಸಿ ರವೀಂದ್ರ ಹಾಗೂ ಆತನ ಮಾವ ಉಮೇಶ್ ಮದ್ಯಪಾನ ಮಾಡಿದ್ದಾರೆ. ಈ ವೇಳೆ ನಡೆದ ಮಾತುಕತೆ ಜಗಳಕ್ಕೆ ತಿರುಗಿದೆ. ಆಗ ಉಮೇಶ್ ಹೋಟೆಲ್‌ನಲ್ಲಿದ್ದ ಪೇಪರ್ ಕತ್ತರಿಸುವ ಕತ್ತರಿಯಿಂದ ರವೀಂದ್ರನ (34) ಎದೆಗೆ ಇರಿದಿದ್ದಾನೆ.
ತೀವ್ರ ಗಾಯಗೊಂಡಿದ್ದ ರವೀಂದ್ರನನ್ನು ಮಂಗಳೂರಿನ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೇ ಶುಕ್ರವಾರ ಮೃತಪಟ್ಟಿದ್ದಾರೆ. ಆನವಟ್ಟಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.