ADVERTISEMENT

ಶಿವಮೊಗ್ಗ | ‘ಕಲೆಗಳ ಸಂಗಡ ಮಾತುಕತೆ’ ಅ.1ರಿಂದ

​ಪ್ರಜಾವಾಣಿ ವಾರ್ತೆ
Published 28 ಸೆಪ್ಟೆಂಬರ್ 2025, 21:00 IST
Last Updated 28 ಸೆಪ್ಟೆಂಬರ್ 2025, 21:00 IST
   

ಸಾಗರ: ನೀನಾಸಂ ಸಂಸ್ಥೆಯು ಹೆಗ್ಗೋಡುವಿನಲ್ಲಿ ಅ.1ರಿಂದ 5ರವರೆಗೆ ‘ಕಲೆಗಳ ಸಂಗಡ ಮಾತುಕತೆ’ ಕಾರ್ಯಕ್ರಮ ಏರ್ಪಡಿಸಿದ್ದು ರಂಗಭೂಮಿ, ಸಾಹಿತ್ಯ, ಸಿನಿಮಾ, ಚಿತ್ರಕಲೆ ಕಲಾಪಠ್ಯಗಳ ಪ್ರಸ್ತುತಿ ಮತ್ತು ಆ ಕುರಿತ ಚರ್ಚೆ ನಡೆಯಲಿದೆ. 

ಆರಂಭಿಕ ಗೋಷ್ಠಿಗೆ ಹರೀಶ್ ತ್ರಿವೇದಿ ಚಾಲನೆ ನೀಡುವರು. ಕೃಷ್ಣಮೂರ್ತಿ ಹನೂರು, ರಾಜೇಂದ್ರ ಚೆನ್ನಿ, ಜೆ.ಯು.ಮೋಹನ್, ಚುಕ್ಕಿ ನಂಜುಂಡಸ್ವಾಮಿ, ಹೇಮಲತಾ ಜೈನ್, ಗಜಾನನ ಶರ್ಮ, ಶಿವಾನಂದ ಕಳವೆ, ಅಕ್ಷರ ಕೆ.ವಿ., ಶ್ರೀರಾಮ ಭಟ್, ನಿತ್ಯಾನಂದ ಶೆಟ್ಟಿ, ಜಿ.ಎಸ್.ಜಯದೇವ, ಸುಮನಸ ಕೌಜಲಗಿ, ವಿಕ್ರಮ್ ವಿಸಾಜಿ ಇತರರು ಪಾಲ್ಗೊಳ್ಳಲಿದ್ದಾರೆ. ನಿತ್ಯ ಸಂಜೆ 7ಕ್ಕೆ ನಾಟಕ ಪ್ರದರ್ಶನವಿದೆ ಎಂದು ಹೇಳಿಕೆ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT