ADVERTISEMENT

ಮುಖ್ಯಮಂತ್ರಿ ಮನೆಗೆ ಎನ್‌ಎಸ್‌ಯುಐ ಮುತ್ತಿಗೆ: ಬಂಧನ

​ಪ್ರಜಾವಾಣಿ ವಾರ್ತೆ
Published 25 ಜುಲೈ 2020, 12:00 IST
Last Updated 25 ಜುಲೈ 2020, 12:00 IST
ಶಿವಮೊಗ್ಗದಲ್ಲಿನ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಮನೆಗೆ ಎನ್‌ಎಸ್‌ಯುಐ ಕಾರ್ಯಕರ್ತರು ಶನಿವಾರ ಮುತ್ತಿಗೆ ಹಾಕಲು ಯತ್ನಿಸಿದರು.
ಶಿವಮೊಗ್ಗದಲ್ಲಿನ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಮನೆಗೆ ಎನ್‌ಎಸ್‌ಯುಐ ಕಾರ್ಯಕರ್ತರು ಶನಿವಾರ ಮುತ್ತಿಗೆ ಹಾಕಲು ಯತ್ನಿಸಿದರು.   

ಶಿವಮೊಗ್ಗ: ರಾಜ್ಯದಲ್ಲಿ ಕೊರೊನಾ ಪಾಸಿಟಿವ್ ಪ್ರಕರಣಗಳ ಹೆಚ್ಚಳದ ಕಾರಣವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಸಿಇಟಿ ಪರೀಕ್ಷೆ ಮುಂದೂಡಬೇಕು ಎಂದು ಆಗ್ರಹಿಸಿ ಎನ್‌‌ಎಸ್‌ಯುಐಕಾರ್ಯಕರ್ತರು ವಿನೋಬ ನಗರದಲ್ಲಿನಮುಖ್ಯಮಂತ್ರಿ ನಿವಾಸಕ್ಕೆ ಶನಿವಾರ ಮುತ್ತಿಗೆ ಹಾಕಲು ಯತ್ನಿಸಿದರು.

ಪಿಪಿಇ ಕಿಟ್‌ ಧರಿಸಿ ಮುತ್ತಿಗೆ ಹಾಕಲು ಯತ್ನಿಸಿದ ಸಂಘಟನೆಯ 30ಕ್ಕೂ ಹೆಚ್ಚು ಕಾರ್ಯಕರ್ತರನ್ನು ಪೊಲೀಸರು ಬಂಧಿಸಿ, ವ್ಯಾನ್‌ನಲ್ಲಿ ಕರೆದುಕೊಂಡು ಹೋದರು.

ರಾಜ್ಯದ ಪ್ರಸಕ್ತ ಪರಿಸ್ಥಿತಿಯಲ್ಲಿ ಸಿಇಟಿ, ಪದವಿ ಪರೀಕ್ಷೆಗಳನ್ನುನಡೆಸಬಾರದು. ವಿದ್ಯಾರ್ಥಿಗಳಆರೋಗ್ಯದ ದೃಷ್ಟಿಯಿಂದ ಪೋಷಕರು ಆತಂಕಕ್ಕೆ ಒಳಗಾಗಿದ್ದಾರೆ.ಪರೀಕ್ಷೆ ನಡೆಸುವ ನಿರ್ಧಾರವನ್ನುರಾಜ್ಯಸರ್ಕಾರಪುನರ್‌ ಪರಿಶೀಲಿಸಬೇಕು.ಸಿಇಟಿ ಪರೀಕ್ಷೆ ಮುಂದೂಡಬೇಕು ಎಂದು ಆಗ್ರಹಿಸಿದರು.

ADVERTISEMENT

ಪ್ರತಿಭಟನೆ ಮಾಹಿತಿ ಇದ್ದ ಕಾರಣ ಪೊಲೀಸರುಮುಖ್ಯಮಂತ್ರಿ ಮನೆ ಬಳಿಸೂಕ್ತ ಮುಂಜಾಗ್ರತೆ ಕೈಗೊಂಡಿದ್ದರು.ಹಾಗಾಗಿ. ಮುತ್ತಿಗೆ ಹಾಕುವ ಮೊದಲೇ ಬಂಧಿಸಿದರು.

ಸಂಘಟನೆಯ ಮುಖಂಡರಾದ ಮಧುಸೂದನ್, ಚೇತನ್, ಬಾಲಾಜಿ, ಶ್ರೀಜಿತ್‌, ಮಹಮದ್‌ ನಿಹಾಲ್, ವಿನಯ್, ವಿಜಯ್, ವಿನ್ಯಾಸ್,
ಅಬ್ದುಲ್, ಶಿವು ಮಲವಗೊಪ್ಪ, ಮಂಜು ಪುರಲೆ,ಮಂಜುನಾಥ್‌ಪ್ರತಿಭಟನೆಯನೇತೃತ್ವ ವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.