ADVERTISEMENT

ಮನೆ ಮುಂದೆ ನಿಲ್ಲಿಸಿದ್ದ ಓಮಿನಿಗೆ ಬೆಂಕಿ

​ಪ್ರಜಾವಾಣಿ ವಾರ್ತೆ
Published 2 ಆಗಸ್ಟ್ 2023, 14:34 IST
Last Updated 2 ಆಗಸ್ಟ್ 2023, 14:34 IST
ಜುಲೈ 30 ಮಧ್ಯರಾತ್ರಿ ನಡೆದ ಘಟನೆ ಇತ್ತೀಚೆಗೆ ನ್ಯೂ ಟೌನ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ
ಜುಲೈ 30 ಮಧ್ಯರಾತ್ರಿ ನಡೆದ ಘಟನೆ ಇತ್ತೀಚೆಗೆ ನ್ಯೂ ಟೌನ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ   

ಭದ್ರಾವತಿ: ನಗರದ ನ್ಯೂ ಕಾಲೊನಿಯಲ್ಲಿ ಮನೆ ಮುಂದೆ ನಿಲ್ಲಿಸಿದ್ದ ಪ್ರವೀಣ್ ಅವರ ಓಮಿನಿ ಬೆಂಕಿಗೆ ಆಹುತಿಯಾಗಿದೆ.

ಅವರು ಓಮಿನಿಯನ್ನು ಮನೆಯ ಮುಂದಿನ ರಸ್ತೆಯಲ್ಲಿ ನಿಲ್ಲಿಸಿದ್ದರು. ಮಧ್ಯರಾತ್ರಿ ನಡೆದ ಬೆಂಕಿ ಅನಾಹುತದಲ್ಲಿ ವಾಹನದ ಎಡಭಾಗದ ಎರಡು ಟಯರ್‌ಗಳು ಸುಟ್ಟು ಕರಕಲಾಗಿವೆ.

ತಕ್ಷಣ ಮನೆಯವರೆ ಬೆಂಕಿಯನ್ನು ನಂದಿಸಿದ್ದಾರೆ. ‘ದುಷ್ಕರ್ಮಿಗಳು ಬೆಂಕಿ ಹಚ್ಚಿದ್ದಾರೆ’ ಎಂದು ಭದ್ರಾವತಿ ನ್ಯೂ ಟೌನ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.