ಆನವಟ್ಟಿ: ನಿರಂತರ ಮಳೆಯಿಂದಾಗಿ ಹೋಬಳಿಯ ಎಲ್ಲಾ ಕೆರೆ, ಕಟ್ಟೆಗಳು ತುಂಬಿದ್ದು, ಆನವಟ್ಟಿಯ ಹೊಸಕೆರೆಯ ಕೋಡಿ ಒಡೆದಿದೆ. ಇದರಿಂದ ಬಂದ್ನಿಕಟ್ಟೆ ಗ್ರಾಮದ 600ಕ್ಕೂ ಹೆಚ್ಚು ಎಕರೆ ಭತ್ತದ ಗದ್ದೆ ಜಲಾವೃತವಾಗಿದೆ.
ನಿರಂತರ ಸುರಿಯುತ್ತಿರುವ ಮಳೆಯಿಂದಾಗಿ ಭತ್ತದ ನಾಟಿ ಸಾಧ್ಯವಾಗಿರಲಿಲ್ಲ. ಭತ್ತದ ನಾಟಿ ಮಾಡಲು ಸಿದ್ಧತೆ ಮಾಡಿಕೊಂಡಿದ್ದ ಬಂದ್ನಿಕಟ್ಟೆ ಗ್ರಾಮದ ರೈತರಿಗೆ ಹೊಸಕೆರೆ ಕೋಡಿ ಕಾಲುವೆ ಒಡೆದಿರುವುದರಿಂದ ಕಂಗಾಲಾಗಿದ್ದಾರೆ.
ಪಟ್ಟಣ ಪಂಚಾಯಿತಿ ಅಧಿಕಾರಿಗಳು, ಜನಪ್ರತಿನಿಧಿಗಳು ಕೊಡಲೇ ಹೊಸಕೆರೆ ಕೋಡಿ ಕಾಲುವೆ ದುರಸ್ತಿ ಮಾಡಬೇಕು ಎಂದು ಕೃಷಿಕರಾದ ಚಂದ್ರು ಮಸಾಲ್ತಿ, ಕುಂಬ್ರಿ ಮಧು, ರಾಮಣ್ಣ ಹಾಗೂ ಬಣಕಾರ್ ಒತ್ತಾಯಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.